ಕ್ರೈಸ್ಟ್ಚರ್ಚ್: ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಕಾಲಿನ ಬೆರಳು ಮುರಿದರೂ ಬೌಲಿಂಗ್ ಮಾಡಿ ಕಿವೀಸ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ನೈಲ್ ವ್ಯಾಗ್ನರ್ ಕ್ರೈಸ್ಟ್ ಚರ್ಚ್ನಲ್ಲಿ ನಡೆಯಲಿರುವ 2ನೇ ಟೆಸ್ಟ್ನಿಂದ ಹೊರಗುಳಿಯಲಿದ್ದಾರೆ.
ವ್ಯಾಗ್ನರ್ ಪಾಕ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಒಟ್ಟು 49 ಓವರ್ ಬೌಲಿಂಗ್ ಮಾಡಿದ್ದರು ಒಟ್ಟು 4 ವಿಕೆಟ್ ಪಡೆದಿದ್ದರು. ಅವರು ಎರಡನೇ ಇನ್ನಿಂಗ್ಸ್ನಲ್ಲಿ ಶತಕ ಸಿಡಿಸಿದ್ದ ಫವಾದ್ ಆಲಮ್ ಮತ್ತು ಆಲ್ರೌಂಡರ್ ಫಹೀಮ್ ಅಶ್ರಫ್ ವಿಕೆಟ್ ಪಡೆಯುವ ಮೂಲಕ ಡ್ರಾನತ್ತ ಸಾಗುತ್ತಿದ್ದ ಪಂದ್ಯವನ್ನು ಗೆಲುವಿನತ್ತ ತಿರುಗಿಸಿದ್ದರು.
ನೈಲ್ ಅದ್ಭುತ ಪ್ರದರ್ಶನ ತೋರಿದ್ದಾರೆ, ಈ ಟೆಸ್ಟ್ ಪಂದ್ಯದಲ್ಲಿ ಅವರು ಮಾಡಿದ್ದನ್ನು ಬೇರೆ ವ್ಯಕ್ತಿಗಳು ಮಾಡುತ್ತಾರೆ ಎಂದು ಭಾವಿಸಬೇಡಿ ಎಂದು ಗಾಯಗೊಂಡರು ಬೌಲಿಂಗ್ ಮಾಡಿದ ದಿಟ್ಟತನವನ್ನು ಕೋಚ್ ಗ್ಯಾರಿ ಸ್ಟೆಡ್ ತಿಳಿಸಿದ್ದಾರೆ.