ಕರ್ನಾಟಕ

karnataka

ETV Bharat / sports

ಐಸಿಸಿ ಟೆಸ್ಟ್​ ಶ್ರೇಯಾಂಕ: ಆಸ್ಟ್ರೇಲಿಯಾ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಕಿವೀಸ್​

ಐಸಿಸಿ ಅಂಕಗಳ ವ್ಯವಸ್ಥೆಯಲ್ಲಿ ಒಂದು ಪಂದ್ಯ ಗೆದ್ದರೆ 1 ಅಂಕವನ್ನು ತಂಡ ಪಡೆಯಲಿದೆ. ಡ್ರಾ ಸಾಧಿಸಿದರೆ 0.5 ಹಾಗೂ ಸರಣಿ ಗೆದ್ದರೆ ಹಚ್ಚುವರಿ ಅಂಕಗಳನ್ನು ಪಡೆಯಲಿವೆ. ನ್ಯೂಜಿಲ್ಯಾಂಡ್​ ತಂಡ ಪಾಕ್​ ವಿರುದ್ಧ 2ನೇ ಟೆಸ್ಟ್​ ಪಂದ್ಯವನ್ನು ಗೆದ್ದರೆ ಒಟ್ಟು 3 ಅಂಕ ಪಡೆಯಲಿದೆ. ಒಂದು ವೇಳೆ ಪಾಕಿಸ್ತಾನ ಗೆದ್ದರೆ ಎರಡೂ ತಂಡಗಳು ತಲಾ ಒಂದು ಅಂಕ ಪಡೆಯಲಿವೆ. ಆಗಲೂ ಕೂಡ ಕಿವೀಸ್ ತಂಡ ನಂಬರ್​ ಒನ್​ ಸ್ಥಾನದಲ್ಲೇ ಉಳಿಯಲಿದೆ.

By

Published : Dec 30, 2020, 6:40 PM IST

ಐಸಿಸಿ ಟೆಸ್ಟ್​ ಶ್ರೇಯಾಂಕ
ಐಸಿಸಿ ಟೆಸ್ಟ್​ ಶ್ರೇಯಾಂಕ

ದುಬೈ: ಬುಧವಾರ ನಡೆದ ಮೊದಲ ಟೆಸ್ಟ್​ನಲ್ಲಿ ಪಾಕಿಸ್ತಾನ ತಂಡವನ್ನು 101 ರನ್​ಗಳ ಅಂತರದಿಂದ ಸೋಲಿಸಿದ ನ್ಯೂಜಿಲ್ಯಾಂಡ್​ ತಂಡ ನೂತನ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

"ಪಾಕಿಸ್ತಾನದ ವಿರುದ್ದ ಮೊದಲ ಟೆಸ್ಟ್​ ಗೆಲ್ಲುವ ಮೂಲಕ ದೀರ್ಘ ಮಾದರಿಯ ಕ್ರಿಕೆಟ್​ನಲ್ಲಿ ನ್ಯೂಜಿಲ್ಯಾಂಡ್​ ತಂಡ ಮೊದಲ ಸ್ಥಾನಕ್ಕೇರಿದೆ" ಎಂದು ಐಸಿಸಿ ಟ್ವೀಟ್​ ಮೂಲಕ ಖಚಿತಪಡಿಸಿದೆ. ಆದರೆ ತಂಡಗಳ ರೇಟಿಂಗ್ ಪಾಯಿಂಟ್​ಗಳನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಬಹುಶಃ ಎರಡನೇ ಟೆಸ್ಟ್​ ಮುಗಿದ ನಂತರ ಬಿಡುಗಡೆಯಾಗಲಿದೆ.

ಐಸಿಸಿ ಅಂಕಗಳ ವ್ಯವಸ್ಥೆಯಲ್ಲಿ ಒಂದು ಪಂದ್ಯ ಗೆದ್ದರೆ 1 ಅಂಕವನ್ನು ತಂಡ ಪಡೆಯಲಿದೆ. ಡ್ರಾ ಸಾಧಿಸಿದರೆ 0.5 ಹಾಗೂ ಸರಣಿ ಗೆದ್ದರೆ ಹೆಚ್ಚುವರಿ ಅಂಕಗಳನ್ನು ತಂಡಗಳು ಪಡೆಯಲಿವೆ. ನ್ಯೂಜಿಲ್ಯಾಂಡ್​ ತಂಡ ಪಾಕ್​ ವಿರುದ್ಧ 2ನೇ ಟೆಸ್ಟ್​ ಪಂದ್ಯವನ್ನು ಗೆದ್ದರೆ ಒಟ್ಟು 3 ಅಂಕ ಪಡೆಯಲಿದೆ. ಒಂದು ವೇಳೆ ಪಾಕಿಸ್ತಾನ ಗೆದ್ದರೆ ಎರಡೂ ತಂಡಗಳು ತಲಾ ಒಂದು ಅಂಕ ಪಡೆಯಲಿವೆ. ಆಗಲೂ ಕೂಡ ಕಿವೀಸ್ ತಂಡವೇ ನಂಬರ್​ ಒನ್​ ಸ್ಥಾನದಲ್ಲೇ ಉಳಿಯಲಿದೆ.

ಡಿಸೆಂಬರ್​ 14ರಂದು ಐಸಿಸಿ ಬಿಡುಗಡೆ ಮಾಡಿದ ಶ್ರೇಯಾಂಕ ಪಟ್ಟಿಯಲ್ಲಿ ಆಸ್ಟ್ರೇಲಿಯಾ (116) ಹಾಗೂ ನ್ಯೂಜಿಲ್ಯಾಂಡ್​ (116) ಮೊದಲೆರಡು ಸ್ಥಾನ ಪಡೆದಿದ್ದವು. ಭಾರತ ಮೂರನೇ ಸ್ಥಾನಕ್ಕೆ ಕುಸಿದಿತ್ತು. ಇದೀಗ ನ್ಯೂಜಿಲ್ಯಾಂಡ್​ ಬಳಿ 117 ಅಂಕಗಳಿವೆ.

ABOUT THE AUTHOR

...view details