ಆಕ್ಲೆಂಡ್:ನ್ಯೂಜಿಲ್ಯಾಂಡ್ ವಿರುದ್ಧ ಸರಣಿ ಉಳಿಸಿಕೊಳ್ಳಲು ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಭಾರತ 22 ರನ್ಗಳ ಸೋಲು ಕಾಣುವ ಮೂಲ ಸರಣಿ ಕಳೆದುಕೊಂಡಿದೆ.
ಆಕ್ಲೆಂಡ್ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ನ್ಯೂಜಿಲ್ಯಾಂಡ್‌ಗೆ ಬ್ಯಾಟಿಂಗ್ ಆಹ್ವಾನ ನೀಡಿತು. ತವರಿನ ಲಾಭ ಪಡೆದ ಗಪ್ಟಿಲ್(79) ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದರೆ, ರಾಸ್ ಟೇಲರ್ ಔಟಾಗದೇ 73, ಹೆನ್ರಿ ನಿಕೋಲ್ಸ್ 41 ಹಾಗೂ ಇಂದೇ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಕೈಲ್ ಜಮೀಸನ್ 25 ರನ್ ಗಳಿಸಿದರು. ನಿಗದಿತ 50 ಓವರ್ಗಳಲ್ಲಿ ಕಿವಿಸ್ 8 ವಿಕೆಟ್ ಕಳೆದುಕೊಂಡು 273 ರನ್ಗಳಿಸಿತು.
ಶಾರ್ದೂಲ್ ಠಾಕೂರ್ 60 ರನ್ ನೀಡಿ 2 ವಿಕೆಟ್ ಪಡೆದರೆ, ಚಹಾಲ್ 58 ರನ್ ನೀಡಿ 3 ವಿಕೆಟ್ ಕಿತ್ತರು. ಜಡೇಜಾ 35 ರನ್ ನೀಡಿ 1 ವಿಕೆಟ್ ಸಾಧನೆ ಮಾಡಿದರು.
274 ರನ್ಗಳ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಭಾರತೀಯ ತಂಡ ಬ್ಯಾಟ್ಸ್ಮನ್ಗಳ ವೈಫಲ್ಯ ಅನುಭವಿಸಿ 251 ರನ್ಗಳಿಗೆ ಸರ್ವ ಪತನ ಕಂಡಿತು. ಈ ಮೂಲಕ 22 ರನ್ಗಳ ಸೋಲು ಅನುಭವಿಸಬೇಕಾಯಿತು. ಶ್ರೇಯಸ್ ಅಯ್ಯರ್ 52 (57 ಎಸೆತ), ರವೀಂದ್ರ ಜಡೇಜಾ55 (73), ನವದೀಪ್ ಸೈನಿ 45 (49) ಠಾಕೂರ್(18) ಗೆಲುವಿಗಾಗಿ ನಡೆಸಿದ ಹೋರಾಟ ವಿಫಲವಾಯಿತು.
ಬ್ಯಾಟ್ಸ್ಮನ್ಗಳಾದ ಪೃಥ್ವಿ ಶಾ(24), ಮಯಾಂಕ್ ಅಗರ್ವಾಲ್(3), ಕೊಹ್ಲಿ(15), ರಾಹುಲ್(4), ಕೇದಾರ್ ಜಾದವ್(9) ರನ್ಗಳಿಗೆ ವಿಕೆಟ್ ಒಪ್ಪಿಸಿದ್ದು ಕೊಹ್ಲಿ ಟೀಂ ಸೋಲಿಗೆ ಕಾರಣವಾಯಿತು.
ನ್ಯೂಜಿಲ್ಯಾಂಡ್ ಪರ ಹೇಮಿಸ್ ಬ್ಯಾನೆಟ್ 2, ಟಿಮ್ ಸೌಥಿ 2, ಕೈಲ್ ಜಮೀಸನ್ 2, ಕಾಲಿನ್ ಗ್ರ್ಯಾಂಡ್ಹೋಮ್ 2 ಹಾಗೂ ಜೇಮ್ಸ್ ನೀಶಾಮ್ 1 ವಿಕೆಟ್ ಪಡೆದು ಮಿಂಚಿದರು.
ಮೊದಲ ಪಂದ್ಯದಲ್ಲೇ 25 ರನ್ ಹಾಗೂ 2 ವಿಕೆಟ್ ಪಡೆದ ಕೈಲ್ ಜಮೀಸನ್ ಪಂದ್ಯಶ್ರೇಷ್ಠ ಪ್ರಶಸ್ತಿ ಗೌರವಕ್ಕೆ ಪಾತ್ರರಾದರು. ಮೂರನೇ ಹಾಗೂ ಕೊನೆಯ ಔಪಚಾರಿಕ ಪಂದ್ಯ ಮಂಗಳವಾರ ಮಾಂಗುನಾಯ್ನಲ್ಲಿ ನಡೆಯಲಿದೆ.