ನೇಪಿಯರ್ :ಬಾಂಗ್ಲಾದೇಶದ ವಿರುದ್ಧ 2ನೇ ಟಿ20 ಪಂದ್ಯವನ್ನು 28ರನ್ಗಳಿಂದ ಗೆಲ್ಲುವ ಮೂಲಕ ನ್ಯೂಜಿಲ್ಯಾಂಡ್ ಇನ್ನೂ ಒಂದು ಪಂದ್ಯವಿರುವಂತೆ ಟಿ20 ಸರಣಿಯನ್ನು ವಶಪಡಿಸಿಕೊಂಡಿದೆ.
ಟಾಸ್ ಗೆದ್ದ ಬಾಂಗ್ಲಾದೇಶ ಅತಿಥೇಯರಿಗೆ ಬ್ಯಾಟಿಂಗ್‌ಗೆ ಆಹ್ವಾನಿಸಿತು. ಆರಂಭಿಕರಾದ ಅಲೆನ್ ಮತ್ತು ಗಫ್ಟಿಲ್ ಮೊದಲ ವಿಕೆಟ್‌ಗೆ 36 ರನ್ ಸೇರಿಸಿದರು. ಆರ್ಸಿಬಿ ಸೇರಿರುವ ಅಲೆನ್ ಕೇವಲ 17ರನ್ಗಳಿಗೆ ವಿಕೆಟ್ ಒಪ್ಪಿಸಿ ನಿರಾಶೆಯನುಭವಿಸಿದರು. ಇವರ ಬೆನ್ನಲ್ಲೇ ಗಫ್ಟಿಲ್(21) ಮತ್ತು ಕಾನ್ವೆ(15) ವಿಲ್ ಯಂಗ್(14)ಮತ್ತು ಚಾಂಪ್ಮನ್(7) ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ.
ಆದರೆ, 6ನೇ ವಿಕೆಟ್‌ಗೆ ಒಂದಾದ ಗ್ಲೇನ್ ಫಿಲಿಫ್ಸ್ ಮತ್ತು ಆಲ್ರೌಂಡರ್ ಡೇರಿಲ್ ಮಿಚೆಲ್ 62 ರನ್ಗಳ ಜೊತೆಯಾಟ ನೀಡಿದರು. ಫಿಲಿಫ್ಸ್ 31 ಎಸೆತಗಳಲ್ಲಿ 57 ರನ್ಗಳಿಸಿದರೆ, ಮಿಚೆಲ್ 16 ಎಸೆತಗಳಲ್ಲಿ 34 ರನ್ಗಳಿಸಿದರು. ಈ ಸಂದರ್ಭದಲ್ಲಿ ಮಳೆ ಬಂದಿದ್ದರಿಂದ ಕಿವೀಸ್ ಇನ್ನಿಂಗ್ಸ್ 17.5 ಓವರ್ಗಳಿಗೆ ಮುಗಿಸಿ ಬಾಂಗ್ಲಾದೇಶಕ್ಕೆ 16 ಓವರ್ಗಳಲ್ಲಿ 171ರನ್ಗಳ ಟಾರ್ಗೆಟ್ ನೀಡಲಾಯಿತು.