ಕ್ರೈಸ್ಟ್ಚರ್ಚ್: ಡಿವೋನ್ ಕಾನ್ವೆ ಮತ್ತು ಬೌಲರ್ಗಳು ತೋರಿದ ಅದ್ಭುತ ಪ್ರದರ್ಶನದ ನೆರವಿನಿಂದ ಅತಿಥೇಯ ನ್ಯೂಜಿಲ್ಯಾಂಡ್ ತಂಡ 53 ರನ್ಗಳ ಅಂತರದಲ್ಲಿ ಆಸ್ಟ್ರೇಲಿಯಾ ಮೊದಲ ಪಂದ್ಯ ಗೆದ್ದು ಬೀಗಿದೆ.
ಕ್ರೈಸ್ಟ್ಚರ್ಚ್ನಲ್ಲಿ ನಡೆದ 5 ಪಂದ್ಯಗಳ ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ ತಂಡ ಟಿವೋನ್ ಕಾನ್ವೆ ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ 5 ವಿಕೆಟ್ ಕಳೆದುಕೊಂಡು 184 ರನ್ಗಳಿಸಿತ್ತು.
ಕೇವಲ 11 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಕ್ರೀಸ್ಗೆ ಆಗಮನಿಸಿದ ಕಾನ್ವೆ 59 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 10 ಬೌಂಡರಿ ಸಮೇತ ಅಜೇಯ 99 ರನ್ಗಳಿಸಿದರು. ಇವರಿಗೆ ಸಾಥ್ ನೀಡಿದ ಗ್ಲೇನ್ ಫಿಲಿಫ್ಸ್ 20 ಎಸೆತಗಳಲ್ಲಿ 30 ಮತ್ತು ನಿಶಾಮ್ 15 ಎಸೆತಗಳಲ್ಲಿ 26 ರನ್ಗಳಿಸಿದರು.
ನಾಯಕ ವಿಲಿಯಮ್ಸನ್ 12, ಸೀಫರ್ಟ್ 1 ಹಾಗೂ ಗಪ್ಟಿಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು. ಆಸ್ಟ್ರೇಲಿಯಾ ಪರ ಡೇನಿಯಲ್ಸ್ ಸ್ಯಾಮ್ಸ್ 40ಕ್ಕೆ2, ಜೇ ರಿಚರ್ಡ್ಸನ್ 31ಕ್ಕೆ 2, ಸ್ಟೋಯ್ನಿಸ್ 17ಕ್ಕೆ 1 ವಿಕೆಟ್ ಪಡೆದರು.