ಒಟಾಗೋ: ಕ್ರಿಕೆಟ್ ಜಗತ್ತಿನಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಬಗೆಯ ಹೊಡೆತಗಳು ಅನ್ವೇಷಣೆಯಾಗುತ್ತಿರುತ್ತವೆ. ಅವು ಆಟಗಾರನ ಹೆಸರಿನಲ್ಲೇ ಪ್ರಸಿದ್ಧಿ ಪಡೆದದ್ದೂ ಇವೆ. ಇದೇ ರೀತಿ ಕಿವೀಸ್ ಕ್ರಿಕೆಟಿಗ ಪ್ರಯೋಗಿಸಿರುವ ಹೊಸ ಹೊಡೆತ ಇಂಟರ್ನೆಟ್ನಲ್ಲಿ ಸದ್ದು ಮಾಡುತ್ತಿದೆ.
ನ್ಯೂಜಿಲ್ಯಾಂಡ್ ಬ್ಯಾಟ್ಸ್ಮನ್ ನೈಲ್ ಬ್ರೂಮ್ ಕಿವೀಸ್ನ ಲಿಸ್ಟ್ ಎ ಪಂದ್ಯದಲ್ಲಿ ಹೊಸ ಅನಧಿಕೃತ ಹೊಡೆತ ಪ್ರಯೋಗಿಸಿದ್ದಾರೆ. ಒಟಾಗೋ ತಂಡದ ಪರ ಬ್ಯಾಟಿಂಗ್ ನಡೆಸುವ ವೇಳೆ ವೆಲ್ಲಿಂಗ್ಟನ್ ತಂಡದ ಬೌಲರ್ ಹ್ಯಾಮಿಶ್ ಬೆನ್ನೆಟ್ ಎಸೆದ ಬೌನ್ಸರ್ಅನ್ನು ಜಂಪ್ ಮಾಡಿ ಕೀಪರ್ನ ತಲೆ ಮೇಲಿಂದ ಬೌಂಡರಿ ಬಾರಿಸಿದ್ದಾರೆ. ಈ ಹೊಡೆತದ ವಿಡಿಯೋವನ್ನು ಒಟಾಗೋ ಕ್ರಿಕೆಟ್ ಕ್ಲಬ್ ತನ್ನ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡು "ಈ ಹೊಡೆತವನ್ನು ಹಿಂದೆ ಎಂದಾದರೂ ಕಂಡಿದ್ದೀರಾ?" ಎಂದು ಬರೆದುಕೊಂಡಿದೆ.