ಕರ್ನಾಟಕ

karnataka

ETV Bharat / sports

ಟೆಸ್ಟ್​ ಕ್ರಿಕೆಟ್​ನಲ್ಲೂ ಫೇಲ್​: ಸ್ಮಿತ್​ಗೆ ಹೋಲಿಸಿ ಕೊಹ್ಲಿ ಟ್ರೋಲ್​ ಮಾಡಿದ ಟ್ವಿಟ್ಟಿಗರು - ವಿರಾಟ್​ ಕೊಹ್ಲಿ ಟ್ರೋಲ್

ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 2 ರನ್​ಗೆ ವಿಕೆಟ್​ ಒಪ್ಪಿಸಿದ್ದ ಕೊಹ್ಲಿ, ಎರಡನೇ ಇನ್ನಿಂಗ್ಸ್​ನಲ್ಲಿ 19 ರನ್​ಗಳಿಗೆ ವಿಕೆಟ್​ ಒಪ್ಪಿಸಿದ್ದಾರೆ. ಈಗಾಗಲೇ ಭಾರತ ತಂಡ 183 ರನ್​ಗಳಿಂದ ಮೊದಲ ಇನ್ನಿಂಗ್ಸ್​ ಹಿನ್ನಡೆ ಅನುಭವಿಸಿದ್ದು, ಎರಡನೇ ಇನ್ನಿಂಗ್ಸ್​ನಲ್ಲೂ 144ರನ್​ಗಳಿಗೆ ಪ್ರಮುಖ 4 ವಿಕೆಟ್​ ಕಳೆದುಕೊಂಡು ಸೋಲಿನತ್ತ ಮುಖಮಾಡಿದೆ. ಹೀಗಾಗಿ ಕ್ಯಾಪ್ಟನ್​ ಕೊಹ್ಲಿ ಟ್ರೋಲ್​ಗೆ ತುತ್ತಾಗಿದ್ದಾರೆ.

Kohli troll
ವಿರಾಟ್​ ಕೊಹ್ಲಿ

By

Published : Feb 23, 2020, 5:48 PM IST

ವೆಲ್ಲಿಂಗ್ಟನ್​: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ನ್ಯೂಜಿಲ್ಯಾಂಡ್​ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಕಡಿಮೆ ಮೊತ್ತಕ್ಕೆ ವಿಕೆಟ್​ ಒಪ್ಪಿಸುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿ ಪ್ರದರ್ಶನಕ್ಕೆ ಟೀಕೆಗಳು ಶುರುವಾಗಿವೆ.

ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 2 ರನ್​ಗೆ ವಿಕೆಟ್​ ಒಪ್ಪಿಸಿದ್ದ ಕೊಹ್ಲಿ, ಎರಡನೇ ಇನ್ನಿಂಗ್ಸ್​ನಲ್ಲಿ 19 ರನ್​ಗಳಿಗೆ ವಿಕೆಟ್​ ಒಪ್ಪಿಸಿದ್ದಾರೆ. ಈಗಾಗಲೇ ಭಾರತ ತಂಡ 183 ರನ್​ಗಳಿಂದ ಮೊದಲ ಇನ್ನಿಂಗ್ಸ್​ ಹಿನ್ನಡೆ ಅನುಭವಿಸಿದ್ದು, ಎರಡನೇ ಇನ್ನಿಂಗ್ಸ್​ನಲ್ಲೂ 144ರನ್​ಗಳಿಗೆ ಪ್ರಮುಖ 4 ವಿಕೆಟ್​ ಕಳೆದುಕೊಂಡು ಸೋಲಿನತ್ತ ಮುಖಮಾಡಿದೆ.

ಇತ್ತ ನಾಯಕ ಈ ಟೂರ್ನಿಯಲ್ಲಿ ಕೇವಲ ಒಂದೇ ಒಂದು ಅರ್ಧ ಶತಕ ಗಳಿಸಿದ್ದು ಬಿಟ್ಟರೆ, ನ್ಯೂಜಿಲ್ಯಾಂಡ್​ನಲ್ಲಿ ಕೊಹ್ಲಿ ಸಾಧನೆ ಅತ್ಯಂತ ಕಳೆಪೆಯಾಗಿದೆ. ಅಲ್ಲದೆ 2018ರ ಬಳಿಕ ಕೊಹ್ಲಿ ವಿದೇಶಿ ಟೆಸ್ಟ್​ನಲ್ಲಿ ಒಂದೇ ಒಂದು ಶತಕ ಗಳಿಸಲು ಸಾಧ್ಯವಾಗಿಲ್ಲ.

ನ್ಯೂಜಿಲ್ಯಾಂಡ್​ ಪ್ರವಾಸದಲ್ಲಿ ಕೊಹ್ಲಿ ಟಿ20ಯಲ್ಲಿ 45, 11, 38, 11 ರನ್ ​ಗಳಿಸಿದರೆ, ಏಕದಿನ ಸರಣಿಯಲ್ಲಿ 51, 15, 9 ರನ್​ಗಳಿಗೆ ವಿಕೆಟ್​ ಒಪ್ಪಿಸಿದ್ದರು. ಇದೀಗ ಟೆಸ್ಟ್​ ಕ್ರಿಕೆಟ್​ನಲ್ಲಿ 2, 19 ರನ್​ಗಳಿಗೆ ವಿಕೆಟ್​ ಒಪ್ಪಿಸಿರುವುದು ಭಾರತೀಯ ಅಭಿಮಾನಿಗಳಿಗೆ ಬೇಸರ ತರಿಸಿದೆ. ಈಗಾಗಲೇ ಏಕದಿನ ಸರಣಿ ಕ್ಲೀನ್​ ಸ್ವೀಪ್​ ಅವಮಾನಕ್ಕೆ ತುತ್ತಾಗಿರುವುದನ್ನೇ ಸಹಿಸದಿರುವ ಈ ಸಂದರ್ಭದಲ್ಲಿ ಟೆಸ್ಟ್​ ಸರಣಿಯ ಕಳಪೆ ಪ್ರದರ್ಶನ ಟ್ವಿಟ್ಟಿಗರನ್ನು ಮತ್ತಷ್ಟು ಕೆರಳಿಸಿದೆ.

ಇದಕ್ಕಾಗಿ ಟ್ವಿಟ್ಟರ್​ನಲ್ಲಿ ಕೊಹ್ಲಿ ಕಳಪೆ ಫಾರ್ಮ್​ ಕುರಿತು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವಿಶ್ವದ ಅದ್ಭುತ ಬ್ಯಾಟ್ಸ್​ಮನ್​ ಎನ್ನಿಸಿಕೊಂಡಿರುವ ಕೊಹ್ಲಿಯಿಂದ ಇಂತಹ ಕಳಪೆ ಪ್ರದರ್ಶನ ನಿರೀಕ್ಷಿಸಿರಲಿಲ್ಲ. ತಂಡ ಸಂಕಷ್ಟದಲ್ಲಿರುವಾಗ ಕೆಟ್ಟ ಹೊಡೆತಕ್ಕೆ ಕೈ ಹಾಕಿ ವಿಕೆಟ್​ ಕೈಚೆಲ್ಲಿರುವುದು ಕೊಹ್ಲಿಯ ಬೇಜಾವಾಬ್ದಾರಿತನ ಎಂದು ಕೆಲವರು ಪೋಸ್ಟ್​ ಮಾಡಿದ್ದಾರೆ.

ಇನ್ನು, ಟೆಸ್ಟ್​ ಕ್ರಿಕೆಟ್​ನಲ್ಲಿ ಸ್ಟಿವ್​ ಸ್ಮಿತ್​ ಅತ್ಯುತ್ತಮ ಬ್ಯಾಟ್ಸ್​ಮನ್​, ಕೊಹ್ಲಿಯಿಂದ ಟೆಸ್ಟ್​ ಕ್ರಿಕೆಟ್​ನಲ್ಲಿ ಏನನ್ನು ಬಯಸಬೇಡಿ ಎಂದು ಟ್ವೀಟ್​ ಮಾಡಿ ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.

ABOUT THE AUTHOR

...view details