ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ತಂಡ ಕ್ವಾರಂಟೈನ್ನಲ್ಲಿದೆ. ಕೆಲವೊಂದು ತೆರಬೇತಿ ಸೆಷನ್ ನಡೆಸುವ ಆಟಗಾರರು ಉಳಿದ ಸಮಯದಲ್ಲಿ ಜಿಮ್ನಲ್ಲಿ, ಕೆಲವು ಸಮಯ ವೆಬ್ ಸಿರೀಸ್ ನೋಡುವುದರಲ್ಲಿ ಕಾಲ ಕಳೆಯುತ್ತಿದ್ದಾರೆ. ಅವರಲ್ಲಿ ಟೀಮ್ ಇಂಡಿಯಾ ನಾಯಕ ಕೊಹ್ಲಿ ಕೂಡ ಹೊರತಾಗಿಲ್ಲ.
ವಿಶ್ವ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಅತ್ಯಂತ ಹೆಚ್ಚು ಜನಪ್ರಿಯ ಮತ್ತು ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕ್ರಿಕೆಟಿಗ. ಕ್ರಿಕೆಟ್ನಲ್ಲಿ ದಾಖಲೆಗಳನ್ನು ಬ್ರೇಕ್ ಮಾಡುವಂತೆ ಸಾಮಾಜಿಕ ಜಾಲಾತಾಣದಲ್ಲಿ ಅವರ ಅಭಿಮಾನಿಗಳ ಸಂಖ್ಯೆ ದಾಖಲೆ ಮೀರಿ ಬೆಳೆಯುತ್ತಿದೆ. ಅವರ ಜೊತೆಗೆ ಫೋಟೋ, ಒಂದು ಆಟೋಗ್ರಾಫ್ಗಾಗಿ ಸಾವಿರಾರು ಮಂದಿ ಹಾತೊರೆಯುತ್ತಿರುತ್ತಾರೆ. ಮೈದಾನದಲ್ಲಿ ಇದಕ್ಕಾಗಿ ನೂಕುನುಗ್ಗಲಾಗಿರುವ ಎಷ್ಟೋ ಸಂದರ್ಭಗಳಿವೆ.
ಇದೀಗ ಒಟಿಟಿ ವೇಧಿಕೆಯ ದಿಗ್ಗಜನಾಗಿರುವ ನೆಟ್ಫ್ಲಿಕ್ಸ್ ಕೂಡ ವಿರಾಟ್ ಕೊಹ್ಲಿ ಅಭಿಮಾನಿಯಾಗಿದ್ದು, ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಬೇಕೆಂಬ ಕನಸಿತ್ತು. ಅದು ಇಂದಿಗೆ ನೆರವೇರಿದೆ ಎಂದು ಟ್ವೀಟ್ ಮಾಡಿದೆ.
ಕ್ವಾರಂಟೈನ್ನಲ್ಲಿರುವ ಕೊಹ್ಲಿ ನಿನ್ನೆ ಒಂದು ಟ್ವೀಟ್ ಮಾಡಿದ್ದರು. ಅದರಲ್ಲಿ, "ಕ್ವಾರಂಟೈನ್ ಡೈರಿ, ಐರನ್ ಇಲ್ಲದ ಟಿ-ಶರ್ಟ್, ಆರಾಮದಾಯಕ ಮಂಚ, ಇವೆಲ್ಲಾ ವೆನ್ ಸಿರೀಸ್ ನೋಡಲು ಉತ್ತಮವಾಗಿವೆ" ಎಂದು ಟ್ವೀಟ್ ಮಾಡಿದ್ದರು.
ಈ ಫೋಟೋದಲ್ಲಿ ವಿರಾಟ್ ಕೊಹ್ಲಿಯ ಲ್ಯಾಪ್ಟ್ಯಾಪ್ನಲ್ಲಿ ನೆಟ್ಫ್ಲಿಕ್ಸ್ ವೆಬ್ಸೈಟ್ ಸ್ಪಷ್ಟವಾಗಿ ಕಾಣುತ್ತಿದೆ. ಅದಕ್ಕಾಗಿ ನೆಟ್ಫ್ಲಿಕ್ಸ್ ಇಂಡಿಯಾ, ತನ್ನ ಟ್ವಿಟರ್ನಲ್ಲಿ" ಆ ಕಂಪ್ಯೂಟರ್ ಪರದೆಯಲ್ಲಿರುವುದು ನಮ್ಮದು(ವೆಬ್ಸೈಟ್). ವಿರಾಟ್ ಕೊಹ್ಲಿ ಜೊತೆ ಫೋಟೋ ತೆಗೆಸಿಕೊಳ್ಳಬೇಕೆಂಬ ಕನಸು ಅಂತಿಮವಾಗಿ ನನಸಾಗಿದೆ" ಎಂದು ಬರೆದುಕೊಂಡಿದೆ.