ಲಾಹೋರ್( ಪಾಕಿಸ್ತಾನ): ಪಾಕಿಸ್ತಾನದಲ್ಲಿ ನಡೆಯುವ ಏಷ್ಯಾಕಪ್ನಲ್ಲಿ ಭಾರತ ಪಾಲ್ಗೊಳ್ಳದೇ ಇದ್ದರೆ, 2021ರಲ್ಲಿ ನಡೆಯುವ ಟಿ-20 ವಿಶ್ವಕಪ್ ನಲ್ಲಿ ಪಾಕಿಸ್ತಾನ ಆಡುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ನ ಸಿಇಒ ವಾಸಿಂ ಖಾನ್ ಘೋಷಣೆ ಮಾಡಿದ್ದಾರೆ.
ಪಾಕ್ ಟೂರ್ಗೆ ಭಾರತ ನಿರಾಕರಿಸಿದರೆ ಟಿ-20 ವಿಶ್ವಕಪ್ನಲ್ಲಿ ಆಡಲ್ಲ: ಪಾಕ್ ಪಟ್ಟು!
ಪಾಕಿಸ್ತಾನದಲ್ಲಿ ನಡೆಯುವ ಏಷ್ಯಾಕಪ್ನಲ್ಲಿ ಭಾರತ ಪಾಲ್ಗೊಳ್ಳದೇ ಇದ್ದರೆ, 2021ರಲ್ಲಿ ನಡೆಯುವ ಟಿ-20 ವಿಶ್ವಕಪ್ ನಲ್ಲಿ ಪಾಕಿಸ್ತಾನ ಆಡುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ನ ಸಿಇಒ ವಾಸಿಂ ಖಾನ್ ಘೋಷಣೆ ಮಾಡಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು, ಏಷ್ಯಾ ಕಪ್ ಆಯೋಜನೆ ಕುರಿತಂತೆ ನಾವು ಬಾಂಗ್ಲಾದೇಶದೊಂದಿಗೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಏಷ್ಯನ್ ಕ್ರಿಕೆಟ್ ಮಂಡಳಿ ನಿರ್ಧರಿಸಿರುವ ವೇಳಾ ಪಟ್ಟಿ ಮತ್ತು ನಿರ್ಧಾರವನ್ನ ಪಿಸಿಬಿ ಆಗಲಿ ಐಸಿಸಿ ಆಗಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ಏಷ್ಯಾಕಪ್ಗೆ ನಾವು ಎರಡು ಸ್ಥಳಗಳನ್ನ ಗುರುತಿಸಿದ್ದೇವೆ. ಹಾಗಾಗಿ ಒಂದೊಮ್ಮೆ ಭಾರತ ಪಾಕಿಸ್ತಾನದಲ್ಲಿ ನಡೆಯುವ ಸರಣಿಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದರೆ, ಟಿ-20 ವಿಶ್ವಕಪ್ ನಲ್ಲಿ ಆಡುವುದಿಲ್ಲ ಎಂದು ಪಾಕ್ ಕ್ರಿಕೆಟ್ ಮಂಡಳಿ ಖಡಕ್ಕಾಗೇ ಹೇಳಿದೆ.
ಇದೇ ವರ್ಷದ ಸೆಪ್ಟೆಂಬರ್ನಲ್ಲಿ ಪಾಕಿಸ್ತಾನದಲ್ಲಿ ಏಷ್ಯಾಕಪ್ ನಡೆಸಲು ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. ಆದರೆ ಭಾರತ ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡುವುದು ಅನುಮಾನವಾಗಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಈ ಹೇಳಿಕೆ ಭಾರಿ ಮಹತ್ವ ಪಡೆದುಕೊಂಡಿದೆ.