ಕರ್ನಾಟಕ

karnataka

ETV Bharat / sports

ಇಮ್ರಾನ್​ ನಝೀರ್​ ಅವರಲ್ಲಿ ಸೆಹ್ವಾಗ್​ಗಿಂತ ಹೆಚ್ಚು ಪ್ರತಿಭೆಯಿತ್ತು: ಶೋಯೆಬ್ ಅಖ್ತರ್

ಇಮ್ರಾನ್ ನಝೀರ್ ಅವರ​ರಲ್ಲಿ ವೀರೇಂದ್ರ ಸೆಹ್ವಾಗ್​ಗಿಂತ ಉತ್ತಮ ಆಟಗಾರನನ್ನು ನಾವು ಕಾಣಬಹುದಿತ್ತು. ಅವರನ್ನು ನಾವು ಅದ್ಭುತವಾಗಿ ಬಳಸಿಕೊಳ್ಳಬಹುದಿತ್ತು. ಆದರೆ, ನಮ್ಮ ದೇಶದ ಕ್ರಿಕೆಟ್​ ಮಂಡಳಿ ಪ್ರತಿಭೆಗಳನ್ನು ಸರಿಯಾಗಿ ಬಳಸಿಕೊಂಡಿಲ್ಲ ಎಂದು ಪಾಕಿಸ್ತಾನ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.

Nazir had more talent than Sehwag but Indian was more brainy: Akhtar
Nazir had more talent than Sehwag but Indian was more brainy: Akhtar

By

Published : Apr 29, 2020, 2:54 PM IST

ಕರಾಚಿ :ವೀರೇಂದ್ರ ಸೆಹ್ವಾಗ್ ಅವರಿಗೆ ಸಮಕಾಲೀನ ಆಟಗಾರ ಪಾಕಿಸ್ತಾನದಲ್ಲಿದ್ದರೆ ಅದು ಇಮ್ರಾನ್ ನಝೀರ್. ಆದರೆ, ಅವರನ್ನು ನಮ್ಮ ದೇಶದ ಕ್ರಿಕೆಟ್​ ಮಂಡಳಿ ಸರಿಯಾಗಿ ಬಳಸಿಕೊಂಡಿಲ್ಲ ಎಂದು ಪಾಕಿಸ್ತಾನ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.

ಸೆಹ್ವಾಗ್ ಹೊಂದಿದಷ್ಟು ಬುದ್ಧಿ ಇಮ್ರಾನ್ ನಝೀರ್​ಗಿತ್ತು ಎಂದು ನಾನು ಭಾವಿಸುವುದಿಲ್ಲ. ಆದೇ ರೀತಿ, ಇಮ್ರಾನ್​ ನಝೀರ್​ಗೆ ಇರುವಷ್ಟು ಪ್ರತಿಭೆ ಸೆಹ್ವಾಗ್​ಗೆ ಇದೆ ಎಂದೂ ನಾನು ಭಾವಿಸುವುದಿಲ್ಲ ಎಂದು ಹೇಳಿದ್ದಾರೆ.

ದೇಸಿ​ ಪಂದ್ಯವೊಂದರಲ್ಲಿ ಶತಕ ಬಾರಿಸಿದಾಗ ಆಟ ಮುಂದುವರೆಸುವಂತೆ ನಾನು ನಝೀರ್​ ಅವರನ್ನು ಮನವಿ ಮಾಡಿದ್ದೆ. ಆದರೆ, ಅವರು ನನ್ನ ಮಾತು ಕೇಳಿಲ್ಲ. ದೇಶದ ಕ್ರಿಕೆಟ್​ ಮಂಡಳಿ ಕೂಡ ನಮ್ಮ ಪ್ರತಿಭೆಗಳನ್ನು ಸರಿಯಾಗಿ ಬಳಸಿಕೊಂಡಿಲ್ಲ ಎಂದು 44 ವರ್ಷದ ರಾವಲ್ಪಿಂಡಿ ಎಕ್ಸ್​​ಪ್ರೆಸ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಜೀರ್ ಪಾಕಿಸ್ತಾನ ಪರ ಕೇವಲ 8 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 427 ರನ್ ಗಳಿಸಿದ್ದಾರೆ ಮತ್ತು 79 ಏಕದಿನ ಪಂದ್ಯಗಳಲ್ಲಿ 1,895 ರನ್ ಗಳಿಸಿದ್ದಾರೆ.

ಮತ್ತೊಂದೆಡೆ, ಸೆಹ್ವಾಗ್ 104 ಪಂದ್ಯಗಳಿಂದ 8,586 ಟೆಸ್ಟ್ ರನ್ ಗಳಿಸಿದ್ದಾರೆ ಮತ್ತು 251 ಏಕದಿನ ಪಂದ್ಯಗಳಿಂದ 8,273 ರನ್ ಗಳಿಸಿದ್ದಾರೆ.

ABOUT THE AUTHOR

...view details