ಕರ್ನಾಟಕ

karnataka

ETV Bharat / sports

ಡಾಕ್ಟರ್ಸ್​ ಡೇ: ವೈದ್ಯರು, ಆರೋಗ್ಯ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದ ವಿರಾಟ್​​​​ ಪಡೆ - ವೈದ್ಯರ ದಿನಾಚರಣೆ

ಇಂದು ರಾಷ್ಟ್ರೀಯ ವೈದ್ಯರ ದಿನವಾದ್ದರಿಂದ ಭಾರತೀಯ ಕ್ರಿಕೆಟಿಗರು ತಾವು ಗಾಯಕ್ಕೊಳಗಾದ ಸಂದರ್ಭದಲ್ಲಿ ಚಿಕಿತ್ಸೆ ನೀಡಿದ ವೈದ್ಯರ ತಂಡ ಹಾಗೂ ದೇಶಕ್ಕಾಗಿ ದುಡಿಯುತ್ತಿರುವ ವೈದ್ಯರಿಗೆ ಶುಯಭಾಶಯ ಕೋರಿದ್ದಾರೆ.

ರಾಷ್ಟ್ರೀಯ ವೈದ್ಯರ ದಿನಾಚರಣೆ:
ವಿರಾಟ್​ ಕೊಹ್ಲಿ

By

Published : Jul 1, 2020, 7:08 PM IST

ಮುಂಬೈ: ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಸೇರಿದಂತೆ ಹಲವಾರು ಕ್ರಿಕೆಟಿಗರು ತಮ್ಮ ಕ್ರೀಡಾ ಬದುಕಿನಲ್ಲಿ ಅವಿಭಾಜ್ಯ ಅಂಗವಾಗಿರುವ ಹಾಗೂ ಪ್ರಪಂಚವನ್ನೇ ಅಲ್ಲೋಲಕಲ್ಲೋಲ ಮಾಡಿರುವ ಕೋವಿಡ್​-19 ಸಾಂಕ್ರಾಮಿಕದ ಮಧ್ಯೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಶುಭಾಶಯ ಕೋರಿದ್ದಾರೆ.

ಒಬ್ಬ ಕ್ರೀಡಾಪಟು ತನ್ನ ಕ್ರೀಡೆಯಲ್ಲಿ ಯಶಸ್ವಿಯಾಗಬೇಕಾದರೆ ಆತನ ಪರಿಶ್ರಮದ ಜೊತೆಗೆ ಫಿಟ್ನೆಸ್​​​ ಕೂಡ ಪ್ರಮುಖವಾಗಿರುತ್ತದೆ. ಅಲ್ಲದೆ ಸಾಕಷ್ಟು ಗಾಯಗಳಿಗೂ ಒಳಗಾಗಬೇಕಾಗುತ್ತದೆ. ಇವೆಲ್ಲವುಗಳನ್ನು ಕ್ರೀಡಾಪಟುವಿನ ಜೊತಗೆ ನಿಂತು ಅವರನ್ನು ಯಶಸ್ವಿ ದಾರಿಗೆ ತರುವುದರಲ್ಲಿ ವೈದ್ಯರ ಪಾತ್ರ ಕೂಡ ಮುಖ್ಯವಾಗಿರುತ್ತದೆ. ಇದಕ್ಕಾಗಿ ಇಂದು ರಾಷ್ಟ್ರೀಯ ವೈದ್ಯರ ದಿನವಾದ್ದರಿಂದ ಭಾರತೀಯ ಕ್ರಿಕೆಟಿಗರು ತಮಗೆ ಚಿಕಿತ್ಸೆ ನೀಡಿದ ವೈದ್ಯರ ತಂಡ ಹಾಗೂ ದೇಶಕ್ಕಾಗಿ ದುಡಿಯುತ್ತಿರುವ ವೈದ್ಯರಿಗೂ ಶುಯಭಾಶಯ ಕೋರಿದ್ದಾರೆ.

"ಇಂದು ಮಾತ್ರವಲ್ಲ ಪ್ರತಿದಿನ ನಾವು ನಮ್ಮ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ದಿನವನ್ನು ಉತ್ಸಾಹದಿಂದ ಆಚರಿಸಬೇಕು. ಎಷ್ಟೋ ಜನರಿಗೆ ಸಹಾಯ ಮಾಡುವ ನಿಮ್ಮ ಬದ್ಧತೆಗೆ ಧನ್ಯವಾದಗಳು. ನಿಮ್ಮ ಮನೋಭಾವ ಮತ್ತು ಸಮರ್ಪಣೆಗೆ ನಾನು ಸೆಲ್ಯೂಟ್​ ಮಾಡುತ್ತೇನೆ" ಎಂದು ವಿರಾಟ್​​ ಕೊಹ್ಲಿ ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.

ಭಾರತ ಸೀಮಿತ ಓವರ್​ಗಳ ತಂಡದ ಉಪ ನಾಯಕ ರೋಹಿತ್ ಶರ್ಮಾ ಕೂಡ ಟ್ವೀಟ್​ ಮಾಡಿದ್ದು, "ಈ ಕಷ್ಟದ ಸಮಯದಲ್ಲಿ ನಮ್ಮ ವೈದ್ಯರು ತೋರಿಸಿದ ತ್ಯಾಗ ಹಾಗೂ ಧೈರ್ಯವನ್ನು ನಾವಲ್ಲರೂ ತಿಳಿದಿದ್ದೇವೆ. ಅವರ ಪ್ರಯತ್ನವನ್ನು ನಾವು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ನಾನು ಅವರ ಶ್ರೇಯೋಭಿವೃದ್ಧಿಯನ್ನು ಬಯಸುತ್ತೇನೆ. ಎಲ್ಲಾ ನಾಗರಿಕರು ಪ್ರೋಟೋಕಾಲ್​ಗಳನ್ನು ಪಾಲಿಸಿ ಅವರಿಗೆ ನೆರವಾಗಬೇಕು" ಎಂದು ಕೋರಿಕೊಂಡಿದ್ದಾರೆ.

ಭಾರತ ಕ್ರಿಕೆಟ್​ನ ಲೆಜೆಂಡ್​ ಸಚಿನ್​ ತೆಂಡೂಲ್ಕರ್​ ಕೂಡ "ವೈದ್ಯರ ದಿನಾಚರಣೆಯಂದು ನಿಶ್ವಾರ್ಥತೆಯಿಂದ 24X7 ಸೇವೆ ಸಲ್ಲಿಸುತ್ತಿರುವ ನಮ್ಮ ವೈದ್ಯರ ಪ್ರಯತ್ನಗಳನ್ನು ನಾವೆಲ್ಲರು ಪ್ರಶಂಸಿಸೋಣ. ಅವರ ಆರೋಗ್ಯ ಹಾಗೂ ಸುರಕ್ಷತೆಗಾಗಿ ಪ್ರಾರ್ಥಿಸೋಣ" ಎಂದು ಟ್ವೀಟ್​ ಮೂಲಕ ದೇಶ ಹಾಗೂ ಪ್ರಪಂಚದಾದ್ಯಂತ ಇರುವ ಎಲ್ಲಾ ವೈದ್ಯರಿಗೂ ಶುಭ ಕೋರಿದ್ದಾರೆ.

ಇದೇ ರೀತಿ ಹಾರ್ದಿಕ್​ ಪಾಂಡ್ಯ, ಸುರೇಶ್​ ರೈನಾ ಹಾಗೂ ಕೃನಾಲ್ ಪಾಂಡ್ಯ ತಮ್ಮ ಗಾಯದ ಸಂದರ್ಭದಲ್ಲಿ ನೆರವಾದ ವೈದ್ಯರ ಫೋಟೋ ಹಾಗೂ ವಿಡಿಯೋಗಳನ್ನು ಶೇರ್​ ಮಾಡಿಕೊಂಡು ವೈದ್ಯರನ್ನು ಅಭಿನಂದಿಸಿದ್ದಾರೆ.

ABOUT THE AUTHOR

...view details