ಹೈದರಾಬಾದ್: ಕೋವಿಡ್ ಕಾರಣದಿಂದಾಗಿ ಈ ವರ್ಷದ ಐಷಾರಾಮಿ ಕ್ರಿಕೆಟ್ ಟೂರ್ನಿ ಐಪಿಎಲ್ ದುಬೈನಲ್ಲಿ ನಡೆಯುತ್ತಿದೆ. ಆದರೆ, ಇದೇ ಮೊದಲ ಬಾರಿಗೆ ಐಪಿಎಲ್ನಲ್ಲಿ ಆ್ಯಂಟಿ ಡೋಪಿಂಗ್ ಟೆಸ್ಟ್ ನಡೆಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ 5 ಕಡೆಗಳಲ್ಲಿ ಡೋಪ್ ಕಂಟ್ರೋಲ್ ಸ್ಟೇಷನ್ ತೆರೆಯಲು ರಾಷ್ಟ್ರೀಯ ಡೋಪಿಂಗ್ ವಿರೋಧಿ ಸಂಸ್ಥೆ ನಿರ್ಧರಿಸಿದೆ.
ಇನ್ನು ಈಗಾಗಲೇ ದುಬೈನ ಶಾರ್ಜಾ ಮೈದಾನದಲ್ಲಿ ಒಂದು ಡೋಪ್ ಕಂಟ್ರೋಲ್ ಸ್ಟೇಷನ್ ಹಾಗೂ ಜಾಯೇದ್ ಮೈದಾನದಲ್ಲಿ 2 ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇನ್ನು ಆಟಗಾರರು ಅಭ್ಯಾಸ ನಡೆಸುವ ವೇಳೆ ಮಾತ್ರ ಡೋಪಿಂಗ್ ಟೆಸ್ಟ್ ನಡೆಸಲು ನಾಡಾ ತೀರ್ಮಾನಿಸಿದೆ ಎಂದು ಪ್ರಧಾನ ನಿರ್ದೇಶಕ ನವಿನ್ ಅಗರ್ವಾಲ್ ತಿಳಿಸಿದ್ದಾರೆ.