ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ನಲ್ಲಿ ಪದಾರ್ಪಣೆ ಮಾಡಿರುವ ಟಿ.ನಟರಾಜನ್ ಭಾರತ ತಂಡಕ್ಕೆ ಪ್ರಸ್ತುತ ಯಾವ ರೀತಿಯ ಬೌಲಿಂಗ್ ಅಗತ್ಯವಿದೆ ಎನ್ನುವುದನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ ಎಂದು ಉಪನಾಯಕ ರೋಹಿತ್ ಶರ್ಮಾ ತಿಳಿಸಿದ್ದಾರೆ.
ಭಾರತ ತಂಡದ ವೇಗಿಗಳು ಆಸ್ಟ್ರೇಲಿಯಾ ತಂಡವನ್ನು ಮೊದಲ ಇನ್ನಿಂಗ್ಸ್ನಲ್ಲಿ 369 ರನ್ಗಳಿಗೆ ಆಲೌಟ್ ಮಾಡಿದ್ದಾರೆ. ಎರಡು ವರ್ಷಗಳ ನಂತರ ಟೆಸ್ಟ್ ಕ್ರಿಕೆಟ್ಗೆ ಮರಳಿದ ಶಾರ್ದುಲ್ ಠಾಕೂರ್ ಮತ್ತು ಇದೇ ಟೆಸ್ಟ್ನಲ್ಲಿ ಪದಾರ್ಪಣೆ ಮಾಡಿದ್ದ ಟಿ ನಟರಾಜನ್ ಹಾಗೂ ವಾಷ್ಟಿಂಗ್ಟನ್ ಸುಂದರ್ ತಲಾ ಮೂರು ವಿಕೆಟ್ ಪಡೆದು ಮಿಂಚಿದ್ದರು. ಅದರಲ್ಲೂ ನಟರಾಜನ್ ಶತಕ ಸಿಡಿಸಿದ್ದ ಲಾಬುಶೇನ್ ಸೇರಿದಂತೆ 3 ವಿಕೆಟ್ ಪಡೆದು ಭಾರತಕ್ಕೆ ಮುನ್ನಡೆ ದೊರೆಕಿಸಿಕೊಟ್ಟಿದ್ದರು.
" ನಟರಾಜನ್ ನಮ್ಮ ನಂಬಿಕಾರ್ಹ ಬೌಲರ್ ಆಗಿದ್ದಾರೆ. ಅವರು ವೈಟ್ ಬಾಲ್ ಕ್ರಿಕೆಟ್ನಲ್ಲಿ ಆಡಿದಾಗ ಸಾಕಷ್ಟು ಶಿಸ್ತು ಪ್ರದರ್ಶಿಸಿದ್ದಾರೆ. ಅವರು ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ನಂತರ ಅದೇ ವಿಶ್ವಾಸವನ್ನು ಆಸ್ಟ್ರೇಲಿಯಾ ವಿರುದ್ಧ ಸೀಮಿತ ಓವರ್ಗಳ ಕ್ರಿಕೆಟ್ನಲ್ಲೂ ಮುಂದುವರಿಸಿದರು. ಅದೇ ರೀತಿ ಟೆಸ್ಟ್ ಕ್ರಿಕೆಟ್ನಲ್ಲೂ ಅವಕಾಶ ಪಡೆದು, ಮೊದಲ ಸ್ಪೆಲ್ನಲ್ಲೇ ತುಂಬಾ ನಿಖರತೆಯಿಂದ ಬೌಲಿಂಗ್ ಮಾಡಿದ್ದಾರೆ" ಎಂದು ರೋಹಿತ್ ಶರ್ಮಾ 2ನೇ ದಿನದ ನಂತರ ನಡೆದ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
" ಮೊದಲ ಟೆಸ್ಟ್ ಆಡುತ್ತಿರುವ ಬೌಲರ್, ತಮ್ಮ ಬೌಲಿಂಗ್ ಅನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ ಎಂದು ನಾವು ನಿಜವಾಗಿಯೂ ಹೇಳಬಹುದು. ಇದು ಭಾರತ ತಂಡ ಕೂಡ ಬಯಸುತ್ತಿರುವ ಸಂಗತಿಯಾಗಿದೆ. ನಟರಾಜನ್, ನಾವು ಅವರಿಂದ ನಿರೀಕ್ಷಿಸಿದ್ದನ್ನು ಮಾಡಲು ಪ್ರಯತ್ನಿಸುತ್ತಿದ್ದಾರೆ. ಆತ ಖಚಿತವಾಗಿ ನಮಗೆ ನಂಬಿಕಾರ್ಹ ಬೌಲರ್ನಂತೆ ಕಾಣುತ್ತಿದ್ದಾರೆಂದು ನಾನು ಭಾವಿಸುತ್ತೇನೆ " ಎಂದು ಹಿಟ್ಮ್ಯಾನ್ ಹೇಳಿದ್ದಾರೆ.
ಆಸ್ಟ್ರೇಲಿಯಾದ 369 ರನ್ಗಳ ಹಿಂಬಾಲಿಸುತ್ತಿರುವ ಭಾರತ ತಂಡ 2ನೇ ದಿನಂದತ್ಯಕ್ಕೆ 2 ವಿಕೆಟ್ ಕಳೆದುಕೊಂಡು 62 ರನ್ಗಳಿಸಿದೆ. ಗಿಲ್ ಕೇವಲ 7 ರನ್ಗೆ ವಿಕೆಟ್ ಒಪ್ಪಿಸಿದರೆ, ರೋಹಿತ್ ಶರ್ಮಾ 44 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಪ್ರಸ್ತುತ ನಾಯಕ ರಹಾನೆ 2ರನ್ ಹಾಗೂ ಚೇತೇಶ್ವರ್ ಪೂಜಾರ 8 ರನ್ಗಳಿಸಿ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.