ಕರ್ನಾಟಕ

karnataka

ETV Bharat / sports

ಕಾರು ಗಿಫ್ಟ್​ ಕೊಟ್ಟ ಮಹೀಂದ್ರಾಗೆ ಕ್ರಿಕೆಟರ್​ ನಟರಾಜನ್ ಕೃತಜ್ಞತೆ ಅರ್ಪಿಸಿದ್ದು ಹೀಗೆ! - ಗಬ್ಬಾ ಜರ್ಸಿ ನಟರಾಜನ್​

ಟೆಸ್ಟ್​ ಸೀರಿಸ್​ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ತಂಡದ ಆರು ಮಂದಿ ಆಟಗಾರರಿಗೆ ಮಹೀಂದ್ರ ಗ್ರೂಪ್​ ಚೇರ್​ಮನ್​ ಆನಂದ್​ ಮಹೀಂದ್ರ ಎಸ್​​​ಯುವಿ ಕಾರು ಗಿಫ್ಟ್​ ಘೋಷಣೆ ಮಾಡಿದ್ದರು. ಇದೀಗ ಉಡುಗೊರೆಯ ಕಾರು ಆಟಗಾರರ ಮನೆ ತಲುಪಿವೆ. ಇದಕ್ಕೆ ಪ್ರತಿಯಾಗಿ ಯಾರ್ಕರ್​ ಕಿಂಗ್ ನಟರಾಜನ್​, ಆನಂದ್ ಮಹೀಂದ್ರಾ ಅವರಿಗೆ ವಿಶೇಷ ಉಡುಗೊರೆ ನೀಡಿ ಗಮನ ಸೆಳೆದಿದ್ದಾರೆ.

Natarajan
Natarajan

By

Published : Apr 1, 2021, 9:28 PM IST

ಚೆನ್ನೈ:ಆಸ್ಟ್ರೇಲಿಯಾ ವಿರುದ್ಧದ ಐತಿಹಾಸಿಕ ಬಾರ್ಡರ್-ಗವಾಸ್ಕರ್​ ಟ್ರೋಫಿಯಲ್ಲಿ ಟೀಂ ಇಂಡಿಯಾ ಐತಿಹಾಸಿಕ ಗೆಲುವು ದಾಖಲಿಸಿತ್ತು. ಈ ಸರಣಿಯ ಪದಾರ್ಪಣೆ ಪಂದ್ಯದಲ್ಲೇ ಎಲ್ಲರ ಗಮನ ಸೆಳೆದಿದ್ದ ಭಾರತದ ಐವರು ಆಟಗಾರರು ಸೇರಿ ಆರು ಕ್ರಿಕೆಟಿಗರಿಗೆ ಮಹೀಂದ್ರ ಗ್ರೂಪ್​ ಚೇರ್​ಮನ್​ ಆನಂದ್​ ಮಹೀಂದ್ರ ಎಸ್​​​ಯುವಿ ಕಾರು ಗಿಫ್ಟ್​ ಘೋಷಣೆ ಮಾಡಿದ್ದರು.

ಟೆಸ್ಟ್​ ಸೀರಿಸ್​ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಮೊಹಮ್ಮದ್​ ಸಿರಾಜ್​, ಶುಭಮನ್​ ಗಿಲ್​, ವಾಷಿಂಗ್ಟನ್​ ಸುಂದರ್​​, ಟಿ. ನಟರಾಜನ್​​, ನವದೀಪ್​ ಸೈನಿ ಹಾಗೂ ಶಾರ್ದೂಲ್​ ಠಾಕೂರ್​ಗೆ ಈ ವಿಶೇಷ ಉಡುಗೊರೆ ನೀಡುವುದಾಗಿ ತಿಳಿಸಿದ್ದರು.

ಇದೀಗ ಉಡುಗೊರೆಯ ಕಾರು ಆಟಗಾರರ ಮನೆ ತಲುಪಿವೆ. ಇದಕ್ಕೆ ಪ್ರತಿಯಾಗಿ ಯಾರ್ಕರ್​ ಕಿಂಗ್ ನಟರಾಜನ್​ ಆನಂದ್ ಮಹೀಂದ್ರಾ ಅವರಿಗೆ ವಿಶೇಷ ಉಡುಗೊರೆ ನೀಡಿ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ನಿತೀಶ್​ ರಾಣಾಗೆ ಕೊರೊನಾ ಬಂದಿದ್ದು ನಿಜ, ಆದ್ರೀಗ ವರದಿ ನೆಗೆಟಿವ್​ ಬಂದಿದೆ- ಕೆಕೆಆರ್

ಐತಿಹಾಸಿಕ ಗಬ್ಬಾ ಟೆಸ್ಟ್ ಪಂದ್ಯದ ವೇಳೆ ತಾವು ಹಾಕಿಕೊಂಡಿದ್ದ ಟೀಂ ಇಂಡಿಯಾ ಜರ್ಸಿ ಮೇಲೆ 'ಥ್ಯಾಂಕ್ಸ್' ಎಂದು ಬರೆದು, ಆನಂದ್​ ಮಹೀಂದ್ರಾಗೆ ಕಳುಹಿಸಿದ್ದಾರೆ. ​ಇದಕ್ಕೆ ಸಂಬಂಧಿಸಿದಂತೆ ಟ್ವಿಟರ್​ನಲ್ಲಿ ಅವರು​ ಮಾಹಿತಿ ಶೇರ್​ ಮಾಡಿದ್ದಾರೆ.

ನಟರಾಜನ್​ ಟ್ವೀಟ್ ಇಂತಿದೆ..

'ಭಾರತಕ್ಕಾಗಿ ಕ್ರಿಕೆಟ್​​ ಆಡುವುದು ನನ್ನ ಜೀವನದ ದೊಡ್ಡ ಸೌಭಾಗ್ಯ. ದಾರಿಯುದ್ದಕ್ಕೂ ನಾನು ಸ್ವೀಕರಿಸಿದ ಪ್ರೀತಿ ಮತ್ತು ವಾತ್ಸಲ್ಯಕ್ಕೆ ಆಭಾರಿ. ಜನರ ಬೆಂಬಲ ಹಾಗೂ ಪ್ರೋತ್ಸಾಹ ನನಗೆ ಹೊಸ ಮಾರ್ಗ ಹುಡುಕಲು ಸಹಕಾರಿಯಾಗಿದೆ'.

'ಇದೀಗ ಸುಂದರವಾದ ಮಹೀಂದ್ರಾ ಥಾರ್​ ಅನ್ನು ಗಿಫ್ಟ್​ ಆಗಿ ಪಡೆದುಕೊಂಡಿದ್ದೇನೆ. ಆನಂದ್ ಮಹೀಂದ್ರಾ ಅವರಿಗೆ ಅಪಾರ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಜರ್ನಿಯನ್ನು ಗುರುತಿಸಿದ್ದಕ್ಕಾಗಿ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕಾಗಿ ಧನ್ಯವಾದಗಳು. ಇದೀಗ ನಾನು ಗಬ್ಗಾ ಟೆಸ್ಟ್​​ನಲ್ಲಿ ಹಾಕಿಕೊಂಡಿದ್ದ ಜರ್ಸಿ ಮೇಲೆ ಸಹಿ ಮಾಡಿ ನಿಮಗೆ ನೀಡುತ್ತಿದ್ದೇನೆ' ಎಂದಿದ್ದಾರೆ.

ABOUT THE AUTHOR

...view details