ರಾಂಚಿ:ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ವಿಕೆಟ್‌ಗಳ ಮೂಟೆ ಕಟ್ಟಿದ್ದರೂ ಭಾರತ ಟೆಸ್ಟ್ ತಂಡದ ಪರ ಆಡಲು 15 ವರ್ಷ ತೆಗೆದುಕೊಂಡಿರುವ ಎಡಗೈ ಸ್ಪಿನ್ನರ್ ಶಹಬಾಜ್ ನದೀಮ್, ತಮ್ಮ ತವರೂರಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿ ವಿಕೆಟ್ ಪಡೆದು ಆಯ್ಕೆ ಸಮಿತಿ ಗಮನ ಸೆಳೆದಿದ್ದಾರೆ.
ರಾಂಚಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಟೆಸ್ಟ್ ಪಂದ್ಯ ಗೆಲ್ಲುತ್ತಿದ್ದಂತೆ ಎಡಗೈ ಸ್ಪಿನ್ನರ್ ನದೀಮ್, ಟೀಂ ಇಂಡಿಯಾದ ಹಿರಿಯ ಆಟಗಾರ ಎಂಎಸ್ ಧೋನಿ ಜತೆ ಡ್ರೆಸ್ಸಿಂಗ್ ರೂಮ್ನಲ್ಲಿ ಕೆಲ ನಿಮಿಷಗಳ ಕಾಲ ಮಾತನಾಡಿದ್ದರು.
ಮಹಿ ಭಾಯ್ ನಾನು ಹೇಗೆ ಬೌಲಿಂಗ್ ಮಾಡಿದೆ? ಎಂದು ಕೇಳಿದೆ. ಅದಕ್ಕೆ ಉತ್ತರಿಸಿದ ಅವರು, ಶಹಬಾಜ್ ಇದೀಗ ನೀವು ಪ್ರಬುದ್ಧರಾಗಿದ್ದೀರಿ. ನೀವು ಬೌಲಿಂಗ್ ಮಾಡುವುದನ್ನ ನಾನು ನೋಡುತ್ತಿದ್ದೇನೆ. ನಿಮ್ಮ ಬೌಲಿಂಗ್ನಲ್ಲಿ ಈಗ ಪ್ರಬುದ್ಧತೆ ಇದೆ ಎಂದರು.
ಜತೆಗೆ ದೇಶೀಯ ಕ್ರಿಕೆಟ್‌ನಲ್ಲಿ ಹೆಚ್ಚು ಅನುಭವ ಹೊಂದಿರುವ ಕಾರಣ, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಹೆಚ್ಚಿನ ಪ್ರಯೋಗ ಮಾಡಬೇಡಿ. ನೀವು ಆಡುತ್ತಿರುವ ರೀತಿಯಲ್ಲಿ ಆಟವಾಡಿ ಎಂದು ಸಲಹೆ ನೀಡಿದ್ದಾರೆ ಎಂದು ತಿಳಿಸಿದ್ದಾಗಿ ಹೇಳಿಕೊಂಡಿದ್ದಾರೆ.
ಜಾರ್ಖಂಡ್ನ ರಾಂಚಿ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ 4 ವಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದ ನದೀಮ್, ಅದ್ಭುತವಾಗಿ ರನೌಟ್ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.