ನವದೆಹಲಿ:ಬಿಸಿಸಿಐ ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ತಡೆ ಘಟಕದ ವ್ಯಾಪ್ತಿಗೆ ಒಳಪಟ್ಟ ಮೇಲೆ ಇದೇ ಮೊದಲ ಬಾರಿಗೆ ರಣಜಿ ಕ್ರಿಕೆಟ್ನ ಇಬ್ಬರು ಆಟಗಾರರ ಮೂತ್ರದ ಸ್ಯಾಂಪಲ್ಅನ್ನು ನಾಡಾ ಪಡೆದುಕೊಂಡಿದೆ.
ಚೊಚ್ಚಲ ಬಾರಿಗೆ ನಾಡಾದಿಂದ ಕ್ರಿಕೆಟಿಗರ ಡೋಪಿಂಗ್ ಪರೀಕ್ಷೆ: ಇಬ್ಬರು ರಣಜಿ ಆಟಗಾರರ ಸ್ಯಾಂಪಲ್ ಕಲೆಕ್ಟ್ - ರಣಜಿ ಕ್ರಿಕೆಟಿಗರ ಡೂಪಿಂಗ್ ಪರೀಕ್ಷೆ
ನಾಡಾ ಅಧಿಕಾರಿಗಳು ಹೈದರಾಬಾದ್ ತಂಡದ ತನ್ಮಯ್ ಅಗರ್ವಾಲ್ ಹಾಗೂ ಡೆಲ್ಲಿಯ ಕುನಾಲ್ ಚಂಡೇಲಾ ಅವರ ಮೂತ್ರದ ಸ್ಯಾಂಪಲ್ ಪಡೆದಿದ್ದು, ಇದೇ ಮೊದಲ ಬಾರಿಗೆ ಕ್ರಿಕೆಟಿಗರನ್ನು ಡೋಪಿಂಗ್ ಪರೀಕ್ಷೆಗೆ ಒಳಪಡಿಸಿದೆ.
ಬಿಸಿಸಿಐ ನಾಡಾ ವ್ಯಾಪ್ತಿಗೆ ಸೇರಿದ ಮೇಲೆ ಇದೇ ಮೊದಲ ಬಾರಿಗೆ ಡೋಪ್ ಕಂಟ್ರೋಲ್ ಅಧಿಕಾರಿಗಳು ರಣಜಿ ಕ್ರಿಕೆಟಿಗರನ್ನು ಪರೀಕ್ಷೆ ಮಾಡಲು ಮುಂದಾಗಿದ್ದಾರೆ. ದೆಹಲಿಯ ಫೀರೋಜ್ ಶಾ ಕೋಟ್ಲಾ ಮೈದಾನದಕ್ಕೆ ಧಾವಿಸಿದ ನಾಡಾ ಅಧಿಕಾರಿಗಳು, ಹೈದರಾಬಾದ್ ತಂಡದ ತನ್ಮಯ್ ಅಗರ್ವಾಲ್ ಹಾಗೂ ಡೆಲ್ಲಿಯ ಕುನಾಲ್ ಚಂಡೇಲಾ ಅವರ ಮೂತ್ರದ ಸ್ಯಾಂಪಲ್ ತೆಗೆದುಕೊಂಡು ಹೋಗಿದ್ದಾರೆ ಎಂದು ಡೆಲ್ಲಿ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕೇವಲ ರಣಜಿ ಕ್ರಿಕೆಟ್ ಆಟಗಾರರಲ್ಲದೆ ಅಂಡರ್ 19, ಅಂಡರ್ 23 ಮತ್ತು ಮಹಿಳಾ ಕ್ರಿಕೆಟಿಗರನ್ನು ಕೂಡ ನಾಡಾ ಪರೀಕ್ಷೆ ನಡೆಸಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಷ್ಟು ದಿನ ಸ್ವೀಡನ್ ಮೂಲದ ಐಡಿಟಿಎಂ ಎನ್ನುವ ಖಾಸಗಿ ಸಂಸ್ಥೆ ಭಾರತೀಯ ಕ್ರಿಕೆಟಿಗರ ಡೋಪಿಂಗ್ ಪರೀಕ್ಷೆ ನಡೆಸಿ, ರಾಷ್ಟ್ರೀಯ ಡೋಪಿಂಗ್ ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸುತ್ತಿತ್ತು. ಆದರೆ ಕಳೆದ ಆಗಸ್ಟ್ನಲ್ಲಿ ಕ್ರೀಡಾ ಸಚಿವಾಲಯ ಬಿಸಿಸಿಐಗೆ ಒಪ್ಪಿಸಿ ಡೋಪಿಂಗ್ ಪರೀಕ್ಷೆಯನ್ನು ನಾಡಾ ವ್ಯಾಪ್ತಿಗೆ ಸೇರಿಸುವಲ್ಲಿ ಯಶಸ್ವಿಯಾಗಿತ್ತು.