ಕರ್ನಾಟಕ

karnataka

ETV Bharat / sports

ಬಿಸಿಸಿಐ ಮಾನ್ಯತೆ ಪಡೆದ ಕ್ರಿಕೆಟ್ ಸಂಸ್ಥೆಗೆ ಮೊದಲ ಮಹಿಳಾ ಅಧ್ಯಕ್ಷರಾಗಲಿದ್ದಾರೆ ಶ್ರೀನಿವಾಸನ್​ ಪುತ್ರಿ - ರೂಪ ಗುರುನಾಥ್​

ಶ್ರೀನಿವಾಸನ್​ ಪುತ್ರಿ ಹಾಗೂ ಸಿಎಸ್​ಕೆ ಮಾಜಿ ಮುಖ್ಯಸ್ಥ ಗುರುನಾಥ್​ ಮೇಯಪ್ಪನ್​ ಅವರ ಪತ್ನಿಯಾಗಿರುವ ರೂಪ ಗುರುನಾಥ್​ ಅವರು ತಮಿಳುನಾಡು ಕ್ರಿಕೆಟ್​ ಸಂಸ್ಥೆಯ ಅಧ್ಯಕ್ಷಗಾದಿಗೇರಲು ಎಲ್ಲಾ ತಯಾರಿ ನಡೆಸುತ್ತಿದ್ದಾರೆ.

Rupa Gurunath

By

Published : Sep 22, 2019, 9:43 AM IST

ಚೆನ್ನೈ: ಸುಪ್ರೀಂಕೋರ್ಟ್ ತಮಿಳುನಾಡು ಕ್ರಿಕೆಟ್ ಸಂಸ್ಥೆಯ ಚುನಾವಣೆಗೆ ಗ್ರೀನ್ ಸಿಗ್ನಲ್ ನೀಡಿದ್ದು, ಬಿಸಿಸಿಐ ಮಾಜಿ ಅಧ್ಯಕ್ಷ ಶ್ರೀನಿವಾಸನ್ ಟಿಎನ್​ಸಿಎ​ ಸಂಸ್ಥೆಯನ್ನು ತಮ್ಮ ಸಾರಥ್ಯದಲ್ಲಿ ಮುಂದುವರಿಸಲು ಸಜ್ಜಾಗಿದ್ದಾರೆ. ಈ ನಿಟ್ಟಿನಲ್ಲಿ ತಮ್ಮ ಮಗಳನ್ನು ಅಧ್ಯಕ್ಷಗಾದಿಗೇರಿಸಲು ಅವರು ನಿರ್ಧರಿಸಿದ್ದಾರೆ.

ಟಿಎನ್​ಸಿಎ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್​ ಮತ್ತೆ ಸಂಸ್ಥೆಯಲ್ಲಿ ಪಾರುಪತ್ಯ ಮುಂದುವರೆಸುವ ವಿಶ್ವಾಸದಲ್ಲಿದ್ದು, ಈ ಬಾರಿ ಅವರ ಪುತ್ರಿ ರೂಪ ಗುರುನಾಥ್ ಅವರನ್ನು ತಮಿಳುನಾಡು ಕ್ರಿಕೆಟ್ ಸಂಸ್ಥೆಯ ಚುನಾವಣೆಗೆ ನಿಲ್ಲಿಸಲು ತೀರ್ಮಾನಿಸಿದ್ದಾರೆ. ಟಿಎನ್​ಸಿಎ ಕ್ಲಬ್ ಪ್ರತಿನಿಧಿಗಳು ಸಹ ರೂಪ ಗುರುನಾಥ್​ಗೆ ಬೆಂಬಲ ಸೂಚಿಸುತ್ತಿದ್ದಾರೆ. ಹೀಗಾಗಿ ಸೋಮವಾರ ರೂಪ ಹೆಸರನ್ನು ಅಧಿಕೃತವಾಗಿ ಪ್ರಕಟಿಸಲು ಶ್ರೀನಿವಾಸನ್​ ಬಣ ಮುಂದಾಗಿದೆ.

ಚುನಾವಣೆಯಲ್ಲಿ ರೂಪ ಗುರುನಾಥ್​ಗೆ ಪ್ರತಿಸ್ಫರ್ಧಿಯಾಗಿ ಯಾವ ಬಣದಿಂದಲೂ ಪ್ರಭಾವಿಗಳು ನಿಲ್ಲುವ ಸೂಚನೆ ಇಲ್ಲದಿರುವುದರಿಂದ ಮುಂಬರುವ ಟಿಎನ್​ಸಿಎ ಚುನಾವಣೆಯಲ್ಲಿ ರೂಪ ಗುರುನಾಥ್​ ಅಧ್ಯರಾಗುವುದು ಬಹುತೇಕ ಖಚಿತ ಎಂದೇ ಹೇಳಲಾಗುತ್ತಿದೆ. ರೂಪ ಟಿಎನ್​ಸಿಎ ಅಧ್ಯಕ್ಷರಾದರೆ ಬಿಸಿಸಿಐ ಮಾನ್ಯತೆ ಪಡೆದ ಕ್ರಿಕೆಟ್ ಸಂಸ್ಥೆಗೆ ಆಯ್ಕೆಯಾದ ಮೊಟ್ಟ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ರೂಪ ಪಾತ್ರರಾಗಲಿದ್ದಾರೆ.

ABOUT THE AUTHOR

...view details