ಹೈದರಾಬಾದ್:ಮುಂಬೈ ಮತ್ತು ಅಹ್ಮದಾಬಾದ್ನಲ್ಲಿ 2021ರ ಐಪಿಎಲ್ ಟೂರ್ನಿಯನ್ನು ಆಯೋಜಿಸುವ ಸಾಧ್ಯತೆ ಇದೆ. ಮುಂಬೈನ 4 ಸ್ಟೇಡಿಯಂಗಳಲ್ಲಿ ಗುಂಪು ಹಂತದ ಪಂದ್ಯಗಳು ಮತ್ತು ಮೊಟೆರಾದಲ್ಲಿ ಪ್ಲೇ ಆಫ್ ಪಂದ್ಯಗಳು ನಡೆಯಲಿವೆ ಎನ್ನಲಾಗುತ್ತಿದೆ.
ಮೂಲಗಳ ಪ್ರಕಾರ ಏಪ್ರಿಲ್ ಮಧ್ಯಂತರ ಅಥವಾ 2ನೇ ವಾರದಿಂದ ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳನ್ನು ಮುಂಬೈನ 4 ಸ್ಟೇಡಿಯಂಗಳಲ್ಲಿ ಆಯೋಜಿಸಲು ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
"ಪ್ರಸ್ತುತ ಲೀಗ್ ಪಂದ್ಯಗಳನ್ನು ಮುಂಬೈ - ಬ್ರಾಡ್ಬೋರ್ನ್ ಸ್ಟೇಡಿಯಂ, ವಾಂಖೆಡೆ ಸ್ಟೇಡಿಯಂ, ಡಿ.ವೈ.ಪಾಟೀಲ್ ಸ್ಟೇಡಿಯಂ ಮತ್ತು ರಿಲಯನ್ಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಯೋಜಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಪ್ಲೇ-ಆಫ್ ಪಂದ್ಯಗಳು ನವೀಕರಿಸಲಾಗಿರುವ ಮೊಟೆರಾದ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ನಡೆಯುವ ನಿರೀಕ್ಷೆಯಿದೆ" ಎಂದು ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.