ಶಾರ್ಜಾ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ, ಹೈದರಾಬಾದ್ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಎರಡು ತಂಡಗಳು 13ನೇ ಆವೃತ್ತಿಯಲ್ಲಿ 4 ಪಂದ್ಯಗಳನ್ನಾಡಿದ್ದು, 2 ಗೆಲುವು ಹಾಗೂ 2 ಸೋಲು ಕಂಡಿವೆ. ಬ್ಯಾಟಿಂಗ್ ಸ್ವರ್ಗ ಎನಿಸಿಕೊಂಡಿರು ಶಾರ್ಜಾ ಕ್ರೀಡಾಂಗಣದಲ್ಲಿ ಎರಡು ತಂಡಗಳಿಂದಲೂ ಬೃಹತ್ ಮೊತ್ತ ನಿರೀಕ್ಷೆ ಮಾಡಬಹುದಾಗಿದೆ. ಕಳೆದ 3 ಪಂದ್ಯಗಳಲ್ಲೂ ಇಲ್ಲಿ 200+ ರನ್ ದಾಖಲಾಗಿದೆ.
ಇಂದಿನ ಪಂದ್ಯದಲ್ಲಿ ಮುಂಬೈ, ಪಂಜಾಬ್ ವಿರುದ್ಧ ಆಡಿಸಿದ್ದ ತಂಡವನ್ನೇ ಕಣಕ್ಕಿಳಿಸುತ್ತಿದ್ದರೆ, ಹೈದರಾಬಾದ್ ತಂಡ ಎರಡು ಪ್ರಮುಖ ಬದಲಾವಣೆ ಮಾಡಿಕೊಂಡಿದೆ. ಗಾಯಾಳು ಭುವನೇಶ್ವರ್ ಬದಲು ಸಿದ್ದಾರ್ಥ್ ಕೌಲ್ ಹಾಗೂ ಖಲೀಲ್ ಅಹ್ಮದ್ ಬದಲು ಸಂದೀಪ್ ಶರ್ಮಾರನ್ನು ಕಣಕ್ಕಿಳಿಸುತ್ತಿದೆ.