ಕರ್ನಾಟಕ

karnataka

ETV Bharat / sports

ನಾಯಕತ್ವ ಬದಲಾದ್ರೂ ಬದಲಾಗದ ಲಕ್​​... ಮುಂಬೈ ವಿರುದ್ಧ ಸೋಲುಂಡ ಕೆಕೆಆರ್​! - ಕೊಲ್ಕತ್ತಾ ವಿರುದ್ಧ ಗೆದ್ದ ಮುಂಬೈ

ಇಂಡಿಯನ್​ ಪ್ರೀಮಿಯರ್​ ಲೀಗ್​ನ ಇಂದಿನ ಪಂದ್ಯದಲ್ಲಿ ಕೋಲ್ಕತ್ತಾ ಮೇಲೆ ಮುಂಬೈ ಇಂಡಿಯನ್ಸ್​ ಸವಾರಿ ನಡೆಸಿದ್ದು, ಮತ್ತೊಂದು ಸುಲಭ ಗೆಲುವು ಸಾಧಿಸಿದೆ.

Mumbai Indians win
Mumbai Indians win

By

Published : Oct 16, 2020, 11:06 PM IST

ದುಬೈ:ಇಂಡಿಯನ್​ ಪ್ರೀಮಿಯರ್​​ ಲೀಗ್​​ನಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​​​ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸುವ ಮೂಲಕ ಅಂಕ ಪಟ್ಟಿಯಲ್ಲಿ ನಂಬರ್​ 1ಸ್ಥಾನಕ್ಕೆ ಲಗ್ಗೆ ಹಾಕಿದೆ.

ಕೊಲ್ಕತ್ತಾ ನೀಡಿದ್ದ 149ರನ್​ಗಳ ಟಾರ್ಗೆಟ್​ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್​ ಕೇವಲ 16.5 ಓವರ್​ಗಳಲ್ಲಿ 2ವಿಕೆಟ್​ ಕಳೆದುಕೊಂಡು 149ರನ್​​ ಗುರಿಮುಟ್ಟಿದೆ. ತಂಡದ ಪರ ಡಿಕಾಕ್​ ಅಜೇಯ 78 ರನ್​ ಗಳಿಸಿದರು.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಕೋಲ್ಕತ್ತಾ ತಂಡ ಮುಂಬೈ ಇಂಡಿಯನ್ಸ್​ ಬೌಲಿಂಗ್​ ದಾಳಿಗೆ ತತ್ತರಿಸಿ ನಿಗದಿತ 20 ಓವರ್​ಗಳಲ್ಲಿ 5ವಿಕೆಟ್​ ಕಳೆದುಕೊಂಡು 148ರನ್​​ಗಳಿಕೆ ಮಾಡ್ತು. ತಂಡದ ಪರ ಕಮ್ಮಿನ್ಸ್​​​ ಅಜೇಯ 53ರನ್​ ಹಾಗೂ ಕ್ಯಾಪ್ಟನ್​ ಮಾರ್ಗನ್​​ 39ರನ್​ಗಳಿಕೆ ಮಾಡಿದ್ರು.

ಇದರ ಬೆನ್ನತ್ತಿದ್ದ ರೋಹಿತ್​ ಪಡೆ ಉತ್ತಮ ಆರಂಭ ಪಡೆದುಕೊಳ್ತು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್​- ಡಿಕಾಕ್​ ಜೋಡಿ ಮೊದಲ ವಿಕೆಟ್​ಗೆ 94ರನ್​ಗಳ ಜೊತೆಯಾಟ ಆಡಿದ್ರು. ಈ ವೇಳೆ 35ರನ್​​ಗಳಿಸಿದ್ದ ರೋಹಿತ್​ ವಿಕೆಟ್​ ಒಪ್ಪಿಸಿದರು. ಇದಾದ ಬೆನ್ನಲ್ಲೇ ಸೂರ್ಯಕುಮಾರ್​​ 10ರನ್​ಗಳಿಕೆ ಮಾಡಿ ಪೆವಿಲಿಯನ್​​ ಸೇರಿಕೊಂಡರು. ಆದರೆ ಡಿಕಾಕ್​​ ತಮ್ಮ ಸ್ಫೋಟಕ ಬ್ಯಾಟಿಂಗ್​ ಮುಂದುವರಿಸಿದರು. ಕೇವಲ 44 ಎಸೆತಗಳಲ್ಲಿ 3 ಸಿಕ್ಸರ್​, 9 ಬೌಂಡರಿ ಸೇರಿ ಅಜೇಯ 78ರನ್​ಗಳಿಕೆ ಮಾಡಿದರು. ಇವರಿಗೆ ಸಾಥ್​ ನೀಡದ ಹಾರ್ದಿಕ್​​ 11 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್​​ನೊಂದಿಗೆ ಅಜೇಯ 21ರನ್​ಗಳಿಕೆ ಮಾಡಿದರು.

ತಂಡ ಕೊನೆಯದಾಗಿ 16.5 ಓವರ್​ಗಳಲ್ಲಿ 149ರನ್​ಗಳಿಕೆ ಮಾಡಿ ಗೆಲುವಿನ ನಗೆ ಬೀರಿ, ಅಂಕಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರಸ್ಥಾನಕ್ಕೆ ಲಗ್ಗೆ ಹಾಕಿದ್ದು, 12 ಅಂಕಗಳಿಸಿದೆ. ಕೋಲ್ಕತ್ತಾ ಪರ ವರುಣ್​, ಶಿವಂ ತಲಾ 1ವಿಕೆಟ್​ ಕಂಬಳಿಸಿದ್ರೆ, ಉಳಿದ ಬೌಲರ್ಸ್​ ಯಶಸ್ವಿಯಾಗಲಿಲ್ಲ. ಇನ್ನು ಮಾರಕ ಬೌಲಿಂಗ್​ ದಾಳಿ ನಡೆಸಿದ ಮುಂಬೈ ತಂಡ ರಾಹುಲ್​ ಚಹರ್​​ 2ವಿಕೆಟ್​ ಪಡೆದರೆ, ಬೊಲ್ಟ್​,ನಾಥನ್​ ಹಾಗೂ ಬುಮ್ರಾ ತಲಾ 1ವಿಕೆಟ್​ ಪಡೆದುಕೊಂಡರು. ದಿನೇಶ್​ ಕಾರ್ತಿಕ್​ ನಾಯಕತ್ವ ಜವಾಬ್ದಾರಿ ಬಿಟ್ಟುಕೊಟ್ಟಿರುವ ಕಾರಣ ಇಯಾನ್​ ಮಾರ್ಗನ್​ ತಂಡ ಮುನ್ನಡೆಸಿದ್ದರು.

ABOUT THE AUTHOR

...view details