ಕರ್ನಾಟಕ

karnataka

ETV Bharat / sports

2020 ರ ಐಪಿಎಲ್​ಗಾಗಿ ನೂತನ ಜರ್ಸಿ​ ಬಿಡುಗಡೆ ಮಾಡಿದ ಮುಂಬೈ ಇಂಡಿಯನ್ಸ್​ - Rohit sharma

ಈ ಜರ್ಸಿ ಮೊದಲಿದ್ದ ನೀಲಿಬಣ್ಣದ ಬದಲಾಗಿ ತಿಳಿ ನೀಲಿಯಿಂದ ಕೂಡಿದೆ. ಜೊತೆಗೆ ಭುಜದಲ್ಲಿ ಚಿನ್ನದ ಬಣ್ಣದ ಗೆರೆಗಳಿವೆ. ಪ್ಯಾಂಟ್​ ಕೂಡ ಕಪ್ಪು ನೀಲಿ ಬಣ್ಣ ಮಿಶ್ರಿತವಾಗಿದೆ.

ಮುಂಬೈ ಇಂಡಿಯನ್ಸ್​
ಮುಂಬೈ ಇಂಡಿಯನ್ಸ್​

By

Published : Aug 30, 2020, 6:25 PM IST

ಅಬುಧಾಬಿ: ಮುಂಬೈ ಇಂಡಿಯನ್ಸ್​ ತಂಡ ಸೆಪ್ಟೆಂಬರ್​ 18ರಿಂದ ಆರಂಭವಾಗಲಿರುವ 13ನೇ ಆವೃತ್ತಿಯ ಐಪಿಎಲ್​ಗಾಗಿ ನೂತನ ಜರ್ಸಿ ಬಿಡುಗಡೆ ಮಾಡಿದೆ.

ಅಬುಧಾಬಿಯಲ್ಲಿ ನಿನ್ನೆಯಷ್ಟೆ ಅಭ್ಯಾಸ ಶುರುಮಾಡಿರುವ ಹಾಲಿ ಚಾಂಪಿಯನ್​ ನೂತನ ಜರ್ಸಿ ಘೋಷಣೆಯ ವಿಚಾರವನ್ನು ಟೀಸರ್​ ಮೂಲಕ ತಮ್ಮ ಜಾಲಾತಾಣದಲ್ಲಿ ಹಂಚಿಕೊಂಡಿದೆ.

ಈ ಜರ್ಸಿ ಮೊದಲಿದ್ದ ನೀಲಿಬಣ್ಣದ ಬದಲಾಗಿ ತಿಳಿ ನೀಲಿಯಿಂದ ಕೂಡಿದೆ. ಜೊತೆಗೆ ಭುಜದಲ್ಲಿ ಚಿನ್ನದ ಬಣ್ಣದ ಗೆರೆಗಳಿವೆ. ಪ್ಯಾಂಟ್​ ಕೂಡ ಕಪ್ಪು ನೀಲಿ ಬಣ್ಣ ಮಿಶ್ರಿತವಾಗಿದೆ.

6 ದಿನಗಳ ಕ್ವಾರಂಟೈನ್​ ಮುಗಿಸಿರುವ ರೋಹಿತ್ ಪಡೆ ಅಬುಧಾಬಿ ಕ್ರಿಕೆಟ್​ ಅಸೋಸಿಯೇಷನ್​ನಲ್ಲಿ ತರಬೇತಿ ಆರಂಭಿಸಿದೆ.ಶನಿವಾರ ನಾಯಕ ಹಿಟ್​ಮ್ಯಾನ್ ಕೂಡ ನೆಟ್ಸ್​ನಲ್ಲಿ ಬ್ಯಾಟಿಂಗ್​ ಅಭ್ಯಾಸ ನಡೆಸಿದ್ದಾರೆ.

ಮುಂಬೈ ಇಂಡಿಯನ್ಸ್​ ಬಿಡುಗಡೆ ಮಾಡಿದ್ದ ವಿಡೀಯೋದಲ್ಲಿ ಮಾತನಾಡಿದ್ದ ರೋಹಿತ್​, ಇದು ನಮ್ಮ ಮೊದಲ ತರಬೇತಿ ಸೆಷನ್​. ದೀರ್ಘ ಸಮಯದ ನಂತರ ನೆಟ್ಸ್​ನಲ್ಲಿ ಅಭ್ಯಾಸ ಮಾಡಲಿದ್ದೇವೆ. ಕೇವಲ ಒಂದು ಗಂಟೆ ಮಾತ್ರ ಅವಕಾಶವಿದೆ. ಈ ಸಮಯವನ್ನು ನಾವು ಸಂಪೂರ್ಣವಾಗಿ ಬಳಿಸಿಕೊಳ್ಳಲಿದ್ದೇವೆ ಎಂದು ತಿಳಿಸಿದ್ದರು.

ABOUT THE AUTHOR

...view details