ಕರ್ನಾಟಕ

karnataka

ETV Bharat / sports

ಲಂಡನ್​ಗೆ ಭೇಟಿ ಕೊಟ್ಟು ಹಾರ್ದಿಕ್​​​​ ಪಾಂಡ್ಯರ ಆರೋಗ್ಯ ವಿಚಾರಿಸಿದ ನೀತಾ ಅಂಬಾನಿ! - ಪಾಂಡ್ಯ ಆರೋಗ್ಯ ವಿಚಾರಿಸಿದ ಮುಂಬೈ ಇಂಡಿಯನ್ಸ್​ನ ಮಾಲಕಿ ನೀತಾ ಅಂಬಾನಿ

ಲಂಡನ್​ನಲ್ಲಿ ಸರ್ಜರಿಗೆ ಒಳಗಾಗಿರುವ ಭಾರತದ ಸ್ಟಾರ್​ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯರನ್ನು ಮುಂಬೈ ಇಂಡಿಯನ್ಸ್ ತಂಡದ​ ಒಡತಿ ನೀತಾ ಅಂಬಾನಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

Hardik pandya

By

Published : Oct 10, 2019, 4:22 PM IST

ಲಂಡನ್​: ಲಂಡನ್​ನಲ್ಲಿ ಬೆನ್ನು ಸರ್ಜರಿಗೆ ಒಳಗಾಗಿರುವ ಭಾರತದ ಸ್ಟಾರ್​ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯರನ್ನು ಮುಂಬೈ ಇಂಡಿಯನ್ಸ್​ ತಂಡದ ಒಡತಿ ನೀತಾ ಅಂಬಾನಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

ದೀರ್ಘಕಾಲದಿಂದ ಕೆಳ ಬೆನ್ನು(ಲೋಯರ್​ ಬ್ಯಾಕ್​) ನೋವಿನಿಂದ ಬಳಲುತ್ತಿದ್ದ ಪಾಂಡ್ಯ ವಾರದ ಹಿಂದೆಯಷ್ಟೇ ಲೋಯರ್​ ಬ್ಯಾಕ್​ ಸರ್ಜರಿಗೆ ಒಳಗಾಗಿದ್ದರು. ಈ ವೇಳೆ ಬಿಸಿಸಿಐ ಸೇರಿದಂತೆ ಹಲವು ಕ್ರಿಕೆಟಿಗರು ಬೇಗ ಸುಧಾರಿಸಿಕೊಳ್ಳುವಂತೆ ಟ್ವೀಟ್ ಮೂಲಕ ಹಾರೈಸಿದ್ದರು.

ಆದರೆ ಒಂದು ಹೆಜ್ಜೆ ಮುಂದು ಹೋಗಿರುವ ಮುಂಬೈ ಇಂಡಿಯನ್ಸ್​ ಒಡತಿ ನೀತಾ ಅಂಬಾನಿ ಲಂಡನ್​ ಆಸ್ಪತ್ರೆಗೆ ಭೇಟಿ ನೀಡಿ ಪಾಂಡ್ಯ ಆರೋಗ್ಯ ವಿಚಾರಿಸಿದ್ದಾರೆ. ನೀತಾ ಅಂಬಾನಿಯೊಂದಗಿನ ಸೆಲ್ಫಿಯನ್ನು ಸಾಮಾಜಿಕ ಜಾಲಾತಾಣದಲ್ಲಿ ಪೋಸ್ಟ್​ ಮಾಡಿ ಧನ್ಯವಾದ ತಿಳಿಸಿದ್ದಾರೆ ಪಾಂಡ್ಯ.

"ಲಂಡನ್​ಗೆ ಬಂದು ನನ್ನನ್ನು ಭೇಟಿಯಾಗಿದ್ದಕ್ಕೆ ಧನ್ಯವಾದಗಳು ಭಾಬಿ. ನಿಮ್ಮ ಗುಣಕ್ಕೆ ನಾನು ಯಾವಾಗಲು ಆಭಾರಿಯಾಗಿರುತ್ತೇನೆ. ನಿಮ್ಮ ಪ್ರೋತ್ಸಾಹದಾಯಕ ಮಾತುಗಳೇ ನನಗೆ ಯಾವಾಗಲೂ ಸ್ಫೂರ್ತಿಯಾಗಿದೆ" ಎಂದು ಬರೆದುಕೊಂಡಿದ್ದಾರೆ.

ಪಾಂಡ್ಯರಿಗೆ 2018ರ ಇಂಗ್ಲೆಂಡ್ ಪ್ರವಾಸದ ವೇಳೆ ಮೊದಲ ಬಾರಿಗೆ ಬೆನ್ನು ನೋವಿನ ಸಮಸ್ಯೆ ಎದುರಾಗಿತ್ತು. ಚೇತರಿಸಿಕೊಂಡಿದ್ದ ಅವರು ಐಪಿಎಲ್, ವಿಶ್ವಕಪ್ ಟೂರ್ನಿಯಲ್ಲಿ ಆಡಿದ ನಂತರ ಎರಡು ತಿಂಗಳ ವಿಶ್ರಾಂತಿ ಪಡೆಯುವ ಮೂಲಕ ವೆಸ್ಟ್​ ಇಂಡೀಸ್ ಸರಣಿಯಿಂದ ಹೊರಗುಳಿದಿದ್ದರು.

ದ. ಆಫ್ರಿಕಾ ವಿರುದ್ಧದ ಟಿ-20 ಸರಣಿಯಲ್ಲಿ ಕಮ್​ಬ್ಯಾಕ್ ಮಾಡಿದ್ದರು. ಆದರೆ, ಹಾರ್ದಿಕ್​ಗೆ ಮತ್ತೆ ಬೆನ್ನು ನೋವಿನ ಸಮಸ್ಯೆ ಕಾಡಿದ್ದರಿಂದ ಲಂಡನ್​ಗೆ ತೆರಳಿ ಸರ್ಜರಿ ಮಾಡಿಸಿಕೊಂಡಿದ್ದಾರೆ. ಇವರು ಬಾಂಗ್ಲಾದೇಶದ ವಿರುದ್ಧದ ಸರಣಿಯಿಂದಲೂ ಹೊರಗುಳಿಯಲಿದ್ದಾರೆ.

ABOUT THE AUTHOR

...view details