ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನ ಮುಂದಿನ ಆವೃತ್ತಿಗೋಸ್ಕರ ಎಲ್ಲಾ ಫ್ರಾಂಚೈಸಿಗಳು ಈಗಾಗಲೇ ತಯಾರಿ ನಡೆಸಿದ್ದು, ಕೆಲವೊಂದು ದೇಶಿ ಪ್ರತಿಭೆಗಳಿಗೆ ಅವಕಾಶ ನೀಡಲು ಪ್ಲಾನ್ ಹಾಕಿಕೊಂಡಿವೆ.
ಅದೇ ರೀತಿ ಮುಂಬೈ ಇಂಡಿಯನ್ಸ್ ತಂಡ ಕೂಡ ಇದೀಗ 16 ವರ್ಷದ ನಾಗಾಲ್ಯಾಂಡ್ ಸ್ಪಿನ್ನರ್ ಮೇಲೆ ಕಣ್ಣು ಹಾಕಿದ್ದು, ಟ್ರಯಲ್ಗೆ ಬರುವಂತೆ ಆಹ್ವಾನ ನೀಡಿದೆ. ಸಯ್ಯದ್ ಮುಸ್ತಾಕ್ ಅಲಿ ಕ್ರಿಕೆಟ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಖ್ರಿವಿಟ್ಸೊ ಕೆನ್ಸ್, ತಾವು ಆಡಿರುವ ನಾಲ್ಕು ಪಂದ್ಯಗಳಿಂದ 7 ವಿಕೆಟ್ ಪಡೆದುಕೊಂಡಿದ್ದು, ಇದರಲ್ಲಿ ಎರಡು ಪಂದ್ಯಗಳಿಂದ ಆರು ವಿಕೆಟ್ ಕಬಳಿಸಿದ್ದಾರೆ. ಇವರ ಪ್ರದರ್ಶನದಿಂದ ಫಿದಾ ಆಗಿರುವ ಮುಂಬೈ ಇಂಡಿಯನ್ಸ್, ಇದೀಗ ಈ ಚಾನ್ಸ್ ನೀಡಿದೆ.