ಕರ್ನಾಟಕ

karnataka

ETV Bharat / sports

ಚೆನ್ನೈ ವಿರುದ್ಧ ಗೆದ್ದು ಸೇಡು ತೀರಿಸಿಕೊಂಡ ಮುಂಬೈ: ನಾಕ್​ ಔಟ್​ ರೇಸ್​ನಿಂದ ಧೋನಿ ಪಡೆ ಔಟ್​! - ನಾಕ್​ಔಟ್​ ಹಂತದಿಂದ ಹೊರಬಿದ್ದ ಚೆನ್ನೈ

ಇಂಡಿಯನ್​ ಪ್ರೀಮಿಯರ್ ಲೀಗ್​ ಟೂರ್ನಿ ಇತಿಹಾಸದಲ್ಲೇ ಕಳಪೆ ಪ್ರದರ್ಶನ ನೀಡುವ ಮೂಲಕ ಧೋನಿ ನೇತೃತ್ವದ ಚೆನ್ನೈ ಸೂಪರ್​ ಕಿಂಗ್ಸ್​​ ನಾಕ್ ​ಔಟ್​ ಹಂತದಿಂದ ಮೊದಲ ಬಾರಿಗೆ ಹೊರಬಿದ್ದಿದೆ.

Mumbai Indians beat Chennai Super Kings
Mumbai Indians beat Chennai Super Kings

By

Published : Oct 23, 2020, 10:58 PM IST

ಶಾರ್ಜಾ: ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಚೆನ್ನೈ ಮೇಲೆ ಸವಾರಿ ನಡೆಸಿರುವ ಮುಂಬೈ ಇಂಡಿಯನ್ಸ್​ ತಂಡ 10 ವಿಕೆಟ್​ಗಳ ಭರ್ಜರಿ ಗೆಲುವು ದಾಖಲು ಮಾಡಿ ಪ್ಲೇ-ಆಫ್​ ಹೊಸ್ತಿಲಿಗೆ ಬಂದು ನಿಂತಿದೆ. ಇದರ ಜತೆಗೆ ಸೋಲು ಕಂಡಿರುವ ಚೆನ್ನೈ ತಂಡ ನಾಕ್​ಔಟ್​ ರೇಸ್​​ನಿಂದ ಹೊರಬಿದ್ದಿದೆ.

ಬೌಲ್ಟ್​​​ ಮಾರಕ ಬೌಲಿಂಗ್​ಗೆ ಚೆನ್ನೈ ತತ್ತರ... ಮುಂಬೈ ಗೆಲುವಿಗೆ 115ರನ್​ ಟಾರ್ಗೆಟ್​

ಚೆನ್ನೈ ಸೂಪರ್​ ಕಿಂಗ್ಸ್​ ನೀಡಿದ್ದ 115 ರನ್​ಗಳ ಟಾರ್ಗೆಟ್​ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್​​ ಯಾವುದೇ ವಿಕೆಟ್​ ಕಳೆದುಕೊಳ್ಳದೇ ಕೇವಲ 12.2 ಓವರ್​​ಗಳಲ್ಲಿ 116ರನ್​ಗಳಿಕೆ ಮಾಡುವ ಮೂಲಕ ಗೆಲುವಿನ ನಗೆ ಬೀರಿತು. ಇದರ ಜತೆಗೆ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ವಿರುದ್ಧ ಸೋತಿದ್ದ ಮುಂಬೈ ತಿರುಗೇಟು ನೀಡಿತು. ಇದರ ಜತೆಗೆ ಅಂಕ ಪಟ್ಟಿಯಲ್ಲಿ 14 ಅಂಕಗಳೊಂದಿಗೆ ಮೊದಲ ಸ್ಥಾನಕ್ಕೆ ಲಗ್ಗೆ ಹಾಕಿದೆ.

ಅದ್ಭುತ ಬೌಲಿಂಗ್​ ಪ್ರದರ್ಶನ ನೀಡಿದ ಬೌಲ್ಟ್​​

ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಇಶಾನ್​ ಕಿಶನ್​​ 37 ಎಸೆತಗಳಲ್ಲಿ 5 ಸಿಕ್ಸರ್​, 6 ಬೌಂಡರಿ ಸೇರಿ ಅಜೇಯ 68 ರನ್​ಗಳಿಕೆ ಮಾಡಿದ್ರೆ, ಡಿಕಾಕ್​​ 37 ಎಸೆತಗಳಲ್ಲಿ 2 ಸಿಕ್ಸರ್​, 5 ಬೌಂಡರಿ ಸೇರಿ ಅಜೇಯ 46ರನ್​ಗಳಿಕೆ ಮಾಡಿದರು. ಇಶಾನ್​ ಕಿಶನ್​ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು.

ಇದಕ್ಕೂ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಚೆನ್ನೈ ತಂಡ ಬೌಲ್ಟ್​ ದಾಳಿಗೆ ತತ್ತರಿಸಿ ಕೇವಲ 43 ರನ್​ಗಳಿಕೆ ಮಾಡುವಷ್ಟರಲ್ಲಿ 7ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೊಳಗಾಗಿತ್ತು. ಈ ವೇಳೆ, ಕರನ್​​ 52ರನ್​ಗಳಿಕೆ ಮಾಡಿ ತಂಡ 114 ರನ್​ಗಳಿಕೆ ಮಾಡುವಂತೆ ಮಾಡಿದ್ದರು.

ಸ್ಯಾಮ್​ ಕರನ್​ ಬ್ಯಾಟಿಂಗ್​​

ಬೌಲ್ಟ್‌ ಜೀವನಶ್ರೇಷ್ಠ ಬೌಲಿಂಗ್‌ ಪ್ರದರ್ಶನ ನೀಡಿ 18ಕ್ಕೆ 4 ವಿಕೆಟ್‌ ಪಡೆದು ಅಬ್ಬರಿಸಿದ್ರೆ, ಸಾಥ್‌ ನೀಡಿದ ಜಸ್‌ಪ್ರೀತ್‌ ಬುಮ್ರಾ (25ಕ್ಕೆ 2) ಮತ್ತು ರಾಹುಲ್ ಚಹರ್‌ (22ಕ್ಕೆ 2) ತಲಾ 2 ವಿಕೆಟ್‌ ಪಡೆದರೆ, ನೇಥನ್‌ ಕೌಲ್ಟರ್‌ ನೈಲ್‌ (25ಕ್ಕೆ 1) ಒಂದು ವಿಕೆಟ್‌ ಕಿತ್ತರು.

13ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್​​ ಲೀಗ್​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಆಡಿರುವ 11 ಪಂದ್ಯಗಳಿಂದ ಕೇವಲ ಮೂರಲ್ಲಿ ಗೆಲುವು ಸಾಧಿಸಿ 6 ಅಂಕಗಳಿಕೆ ಮಾಡಿ ಕೊನೆ ಸ್ಥಾನದಲ್ಲಿದೆ. ಜತೆಗೆ ನಾಕ್​ಔಟ್​ ಹಂತದಿಂದ ಹೊರಬಿದ್ದಿದೆ.

ABOUT THE AUTHOR

...view details