ಕರ್ನಾಟಕ

karnataka

ETV Bharat / sports

ಭಾರತ -ವಿಂಡೀಸ್ ಮೊದಲ ಟಿ-20 ಮುಂಬೈನಿಂದ ಸ್ಥಳಾಂತರ..! ಕಾರಣ? - ವಿಂಡೀಸ್ ಮೊದಲ ಟಿ20 ಶಿಫ್ಟ್​

ಭಾರತ-ವಿಂಡೀಸ್ ಟಿ-20 ಪಂದ್ಯಕ್ಕೆ ಭದ್ರತೆ ನೀಡಲು ಪೊಲೀಸರು ಅಸಾಧ್ಯ ಎಂದ ಕಾರಣದಿಂದ ಮುಂಬೈನಲ್ಲಿ ಡಿ.6ರಂದು ನಡೆಯಬೇಕಿದ್ದ ಪಂದ್ಯ ಹೈದರಾಬಾದ್​ಗೆ ಸ್ಥಳಾಂತರವಾಗಿದೆ.

ಭಾರತ-ವಿಂಡೀಸ್ ಮೊದಲ ಟಿ20 ಮುಂಬೈನಿಂದ ಸ್ಥಳಾಂತರ

By

Published : Nov 22, 2019, 11:45 PM IST

ಹೈದರಾಬಾದ್: ಭಾರತ-ವಿಂಡೀಸ್ ನಡುವಿನ ಮೊದಲ ಟಿ-20 ಪಂದ್ಯ ಸ್ಥಳಾಂತರಗೊಂಡಿದೆ. ವಿಂಡೀಸ್ ಪ್ರವಾಸದ ಮೊದಲ ಟಿ-20 ಪಂದ್ಯ ಮುಂಬೈ ಈ ಮೊದಲು ಆಯೋಜನೆಯಾಗಿತ್ತು.

ಭಾರತ-ವಿಂಡೀಸ್ ಟಿ-20 ಪಂದ್ಯಕ್ಕೆ ಭದ್ರತೆ ನೀಡಲು ಪೊಲೀಸರು ಅಸಾಧ್ಯ ಎಂದ ಕಾರಣದಿಂದ ಮುಂಬೈನಲ್ಲಿ ಡಿ.6ರಂದು ನಡೆಯಬೇಕಿದ್ದ ಪಂದ್ಯವನ್ನು ಹೈದರಾಬಾದ್​ಗೆ ಸ್ಥಳಾಂತರ ಮಾಡಲಾಗಿದೆ. ಡಿ.11ರಂದು ಹೈದರಾಬಾದ್​ನಲ್ಲಿ ಆಯೋಜನೆಯಾಗಿದ್ದ ಅಂತಿಮ ಟಿ-20 ಮುಂಬೈಗೆ ಶಿಫ್ಟ್​ ಮಾಡಲಾಗಿದೆ.

ಡಿ.6ರಂದು ಬಾಬ್ರಿ ಮಸೀದಿ ಧ್ವಂಸದ ವರ್ಷಾಚರಣೆ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಬಿಗಿ ಬಂದೋಬಸ್ತ್​​ ಕೈಗೊಳ್ಳಲಾಗುತ್ತದೆ. ಬಾಬ್ರಿ ಮಸೀದಿ ಧ್ವಂಸದ ವೇಳೆ ಮುಂಬೈನಲ್ಲಿ ಭಾರಿ ಗಲಭೆ ಹಲವಾರು ಮಂದಿ ಪ್ರಾಣಬಿಟ್ಟಿದ್ದರು. ಹೀಗಾಗಿ ಡಿ.6ರಂದು ಕ್ರಿಕೆಟ್​ ಪಂದ್ಯಕ್ಕೆ ಅಗತ್ಯವಿರುವ ಭದ್ರತೆ ನೀಡುವುದು ಅಸಾಧ್ಯ ಎಂದು ಕೆಲ ದಿನಗಳ ಹಿಂದೆ ಮುಂಬೈ ಪೊಲೀಸರು ಮುಂಬೈ ಕ್ರಿಕೆಟ್ ಅಸೋಸಿಯೇಷನ್​ಗೆ ತಿಳಿಸಿದ್ದರು.

ಸದ್ಯ ಮುಂಬೈ ಪೊಲೀಸರ ಮಾತಿಗೆ ಮನ್ನಣೆ ನೀಡಿರುವ ಬಿಸಿಸಿಐ ಸದ್ಯ ಮುಂಬೈ ಪಂದ್ಯವನ್ನು ಹೈದರಾಬಾದ್​​ಗೆ ಹಾಗೂ ಹೈದರಾಬಾದ್​ ಪಂದ್ಯವನ್ನು ಮುಂಬೈಗೆ ಸ್ಥಳಾಂತರ ಮಾಡಿದೆ.

ABOUT THE AUTHOR

...view details