ಮುಂಬೈ : ಹೌದು ಕಣ್ರೀ.. ಮುಂಬೈ ಇಂಡಿಯನ್ಸ್ ಈಗಾಗಲೇ 11 ಸೀಸನ್‌ಗಳಲ್ಲಿ 3 ಬಾರಿ ಐಪಿಎಲ್ ಕಪ್ ತನ್ನ ಮುಡಿಗೇರಿಸಿಕೊಂಡಿದೆ. ಈಗ ನಾಲ್ಕನೇ ಬಾರಿಗೆ ಕಪ್ ಗೆದ್ದರೂ ಅಚ್ಚರಿಯಿಲ್ಲ. ಅದಕ್ಕೆ ಕಾರಣ ಐವರು ವಿದೇಶಿ ಪ್ಲೇಯರ್ಸ್.
ಮಾರ್ಚ್ 23ರಿಂದ ಚುಟುಕು ಕ್ರಿಕೆಟ್ ಹಬ್ಬ. ಐಪಿಎಲ್ 12ನೇ ಆವೃತ್ತಿಗೆ ಅವತ್ತೇ ಚಾಲನೆ. 8 ತಂಡಗಳ ಆಟಗಾರರ ತಾಲೀಮು ಜೋರಿದೆ. ಪ್ರತಿ IPL ಆವೃತ್ತಿಯಲ್ಲೂ ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ಗೆಲ್ಲುವ ಫೆವಿರೇಟ್ ತಂಡ ಆಗಿರುತ್ತವೆ. ಮುಂಬೈ ಇಂಡಿಯನ್ಸ್ 2013, 2015 ಮತ್ತು 2017 ಹೀಗೆ ಮೂರುಬಾರಿ ಚಾಂಪಿಯನ್ ಆಗಿದೆ. ಈ ಐವರು ವಿದೇಶಿ ಪ್ಲೇಯರ್ಸ್‌ನಿಂದಲೇ ಈಗ 4ನೇ ಬಾರಿ IPL ಚಾಂಪಿಯನ್ ಆಗಲು ಹೊರಟಿದೆ ಮುಂಬೈ ಇಂಡಿಯನ್ಸ್.
1. ಕ್ವಿಂಟನ್ ಡಿಕಾಕ್ :
ಸೌಥ್ ಆಫ್ರಿಕಾದ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮೆನ್. ಕಳೆದ ವರ್ಷ ಆರ್‌ಸಿಬಿ ಪರ ಆಡಿದ್ದ ದಾಂಡಿಗ. ಆದರೆ, ಈ ಸಾರಿ ರೋಹಿತ್ ಶರ್ಮಾ ಕ್ಯಾಪ್ಟೆನ್ಸಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಲಿದ್ದಾರೆ. ಕ್ವಿಂಟನ್ ಈಗ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಅದರ ಲಾಭ ಮುಂಬೈಗೆ ಸಿಕ್ಕಲಿದೆ. ಓಪನರ್ ಬ್ಯಾಟಿಂಗ್ ಜತೆ ವಿಕೆಟ್ ಕೀಪಿಂಗ್‌ನಿಂದಲೂ ತಂಡಕ್ಕೆ ನೆರವಾಗುತ್ತಾರೆ ಡಿಕಾಕ್. ಮುಂಬೈನ ವಾಂಖೆಡೆ ಒಳ್ಳೇ ಬೌನ್ಸಿಂಗ್ ಪಿಚ್. ಅದ್ಭುತ ಸ್ಟ್ರೈಕ್‌ರೇಟ್‌ನಿಂದ ಡಿಕಾಕ್ ಎದುರಾಳಿಗಳಿಗೆ ದುಃಸ್ವಪ್ನವಾಗಲಿದ್ದಾರೆ. ಶ್ರೀಲಂಕಾ ವಿರುದ್ಧ ತವರಿನಲ್ಲಿ ನಡೆದ ಸರಣಿಯಲ್ಲಿ ಡಿಕಾಕ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದರು. ಒಂದು ಶತಕ ಮತ್ತು 3 ಅರ್ಧಶತಕವೂ ಸೇರಿ 353 ರನ್‌ನ ಒಂದೇ ಸಿರೀಸ್‌ನಲ್ಲಿ ಸಿಡಿಸಿ, ಮ್ಯಾನ್ ಆಫ್ ದಿ ಸಿರೀಸ್ ಆಗಿದ್ದಾರೆ. ಡಿಕಾಕ್ ಆಟದಿಂದಲೇ ಐದು ಏಕದಿನ ಪಂದ್ಯ ಕ್ಲೀನ್‌ಸ್ವಿಪ್ ಮಾಡಿ ಹರಿಣಗಳು ಸರಣಿ ಗೆದ್ದಿವೆ.
2. ಬೆನ್ ಕಟಿಂಗ್ :
ಮುಂಬೈ ತಂಡದಲ್ಲೀಗ ಬೆನ್ ಕಟಿಂಗ್ ಆಲ್‌ರೌಂಡ್. ಕೆಳಕ್ರಮಾಂಕದಲ್ಲಿ ಬ್ಯಾಟಿಂಗಿಳಿದು ಎದುರಾಳಿಗೆ ಆಘಾತ ನೀಡ್ತಾರೆ. ತಂಡ ದೊಡ್ಡ ಮೊತ್ತ ಕಲೆಹಾಕಲು ಹೆಲ್ಪಾಗುತ್ತಾರೆ. 2016ರ IPL ಫೈನಲ್ ಪಂದ್ಯದಲ್ಲಿ ಬೆನ್ ಹೈದರಾಬಾದ್ ಸನ್‌ರೈಸರ್ಸ್ ಪರ 15 ಬಾಲ್‌ಗೆ 39 ರನ್ ಗಳಿಸಿದ್ದರು. 3 ಬೌಂಡರಿ ಮತ್ತು 4 ಸಿಕ್ಸರ್ ಸಿಡಿಸಿ ಆರ್‌ಸಿಬಿ ಬೆನ್ನುಮೂಳೆ ಮುರಿದಿದ್ದರು ಬೆನ್. ಅವತ್ತು ಅದೇ ಮೊದಲ ಬಾರಿಗೆ 8ರನ್‌ನಿಂದ ಹೈದರಾಬಾದ್ ಸನ್‌ರೈಸರ್ಸ್ ತಂಡ ಐಪಿಎಲ್ ಚಾಂಪಿಯನ್ ಆಗಿತ್ತು. ಬೆನ್ ಕಟಿಂಗ್ ಮ್ಯಾನ್ ಆಫ್ ದಿ ಮ್ಯಾಚ್ ಆಗಿದ್ದರು. ಈವರೆಗೂ 14 ಐಪಿಎಲ್ ಪಂದ್ಯ ಆಡಿರುವ ಬೆನ್ ಕಟಿಂಗ್ 177.42 ಸ್ಟ್ರೈಕ್‌ರೇಟ್‌ನಲ್ಲಿ 220 ರನ್ ಗಳಿಸಿದ್ದಾರೆ. ಅಲ್ಲದೇ 9 ವಿಕೆಟ್ ಕೂಡ ಕಿತ್ತಿದ್ದಾರೆ.