ಕರ್ನಾಟಕ

karnataka

ETV Bharat / sports

ನವೆಂಬರ್ ತನಕ ಧೋನಿ ಅಲಭ್ಯ.. ಅಸಲಿ ಕಾರಣ ಇಲ್ಲಿದೆ! - ಗಾಯದಿಂದ ಧೋನಿ ಅಲಭ್ಯ

ವಿಂಡೀಸ್ ಪ್ರವಾಸದ ಬಳಿಕ ತವರಿನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಹಾಗೂ ಮುಂಬರುವ ತವರಿನ ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ಧೋನಿ ಅಲಭ್ಯರಾಗಿರುವುದಕ್ಕೆ ಅಸಲಿ ಕಾರಣ ಈಗ ದೊರೆತಿದೆ.

ನವೆಂಬರ್ ತನಕ ಧೋನಿ ಅಲಭ್ಯ

By

Published : Sep 27, 2019, 12:11 PM IST

ಹೈದರಾಬಾದ್: ವಿಂಡೀಸ್ ಪ್ರವಾಸದ ವೇಳೆ ಸೇನೆಯ ತರಬೇತಿ ಕಾರಣ ನೀಡಿ ಹೊರಗುಳಿದಿದ್ದ ಟೀಂ ಇಂಡಿಯಾದ ಹಿರಿಯ ಆಟಗಾರ ಎಂ ಎಸ್ ಧೋನಿ ತಮ್ಮ ವಿಶ್ರಾಂತಿ ಅವಧಿಯನ್ನು ನವೆಂಬರ್‌ತನಕ ವಿಸ್ತರಣೆ ಮಾಡಿರುವುದರ ಹಿಂದಿನ ಅಸಲಿ ಕಾರಣ ಇದೀಗ ಬಹಿರಂಗವಾಗಿದೆ.

ಎಂ ಎಸ್ ಧೋನಿ ಸೇನೆಯಲ್ಲಿ ಹದಿನೈದು ದಿನಗಳ ಕಾಲ ಸೇವೆ ಸಲ್ಲಿಸಿ ಈಗಾಗಲೇ ಮನೆಗೆ ಹಿಂತಿರುಗಿದ್ದಾರೆ. ಆದರೆ, ಕೆಲ ದಿನಗಳ ಹಿಂದೆ ತಮ್ಮ ವಿಶ್ರಾಂತಿ ಅವಧಿಯನ್ನು ವಿಸ್ತರಿಸಿದ್ದರು. ಈ ಅವಧಿ ವಿಸ್ತರಣೆಗೆ ಕಾರಣ ಗಾಯ ಎನ್ನುವ ವಿಚಾರ ತಿಳಿದು ಬಂದಿದೆ. ನವೆಂಬರ್​ನಲ್ಲಿ ಬಾಂಗ್ಲಾದೇಶ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ಧೋನಿ ಮೈದಾನಕ್ಕಿಳಿಯಲ್ಲ ಎನ್ನುವುದು ವಾರದ ಹಿಂದೆಯೇ ಸುದ್ದಿಯಾಗಿತ್ತು.

ಭಾರತದಲ್ಲಿ ಧೋನಿ ಅತ್ಯಂತ ಜನಪ್ರಿಯ ಕ್ರೀಡಾಳು, ಮಹಿಳೆಯರಲ್ಲಿ ಮೇರಿಗೆ ಅಗ್ರಸ್ಥಾನ

ಬಿಸಿಸಿಐ ಮೂಲಗಳ ಪ್ರಕಾರ ಹಿರಿಯ ಆಟಗಾರ ಧೋನಿ ವಿಶ್ವಕಪ್ ಟೂರ್ನಿ ವೇಳೆ ಮಣಿಕಟ್ಟಿನ ಗಾಯಕ್ಕೊಳಗಾಗಿದ್ದರು. ಈ ಗಾಯದಿಂದ ಸಂಪೂರ್ಣ ಗುಣಮುಖರಾಗದ ಕಾರಣ ಧೋನಿ ನವೆಂಬರ್ ತನಕ ಮೈದಾನಕ್ಕಿಳಿಯಲ್ಲ ಎನ್ನುವ ಮಾಹಿತಿ ಸದ್ಯ ಲಭ್ಯವಾಗಿದೆ.

ABOUT THE AUTHOR

...view details