ಕರ್ನಾಟಕ

karnataka

ETV Bharat / sports

2006ರಲ್ಲಿ ಧೋನಿ ಮೇಲೆ ಉಗ್ರರೂಪ ತಾಳಿದ್ದ ರಾಹುಲ್ ದ್ರಾವಿಡ್​​ ಘಟನೆ ನೆನೆದ ಸೆಹ್ವಾಗ್ - ಭಾರತ ತಂಡದ ಪಾಕ್ ಪ್ರವಾಸ 2006

ಎರಡು ದಿನಗಳ ಹಿಂದೆ ವಾಣಿಜ್ಯ ಜಾಹೀರಾತಿನಲ್ಲಿ ಕೋಪದಿಂದ ವರ್ತಿಸಿದ್ದು, ಸಾಮಾಜಿಕ ಜಾಲಾತಾಣದಲ್ಲಿ ಕಿಚ್ಚೆಬ್ಬಿಸಿತ್ತು. ಇದಕ್ಕೆ ಕೊಹ್ಲಿ ಸೇರಿದಂತೆ ಹಲವಾರು ಹಾಲಿ-ಮಾಜಿ ಕ್ರಿಕೆಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದರು. ಈ ಕುರಿತು ಸಂದರ್ಶನವೊಂದರಲ್ಲಿ ರಾಹುಲ್​ ದ್ರಾವಿಡ್​ ಈ ಹಿಂದೆ ಆ ರೀತಿ ಕೋಪದಿಂದ ವರ್ತಿಸಿದ್ದ ಬಗ್ಗೆ ಸೆಹ್ವಾಗ್ ಹೇಳಿಕೊಂಡಿದ್ದಾರೆ.

ಧೋನಿ ಮೇಲೆ ದ್ರಾವಿಡ್ ಕೋಪ
ಧೋನಿ ಮೇಲೆ ದ್ರಾವಿಡ್ ಕೋಪ

By

Published : Apr 11, 2021, 10:27 PM IST

ನವದೆಹಲಿ: ರಾಹುಲ್ ದ್ರಾವಿಡ್​ ಕೋಪಿಷ್ಠರಲ್ಲ ಎನ್ನುವುದು ಕ್ರಿಕೆಟ್ ಜಗತ್ತಿಗೆ ಗೊತ್ತಿದೆ. ಆದರೆ 2006ರಲ್ಲಿ ಮಿಸ್ಟರ್ ಕೂಲ್ ಖ್ಯಾತಿಯ ಧೋನಿ ಮೇಲೆ ರಾಹುಲ್ ಉಗ್ರರೂಪ ತಾಳಿದ್ದ ಸ್ವಾರಸ್ಯಕರ ಘಟನೆಯನ್ನು ಭಾರತದ ಮಾಜಿ ಆರಂಭಿಕ ಬ್ಯಾಟ್ಸ್​ಮನ್ ಸೆಹ್ವಾಗ್​ ನೆನೆದಿದ್ದಾರೆ.

ಎರಡು ದಿನಗಳ ಹಿಂದೆ ವಾಣಿಜ್ಯ ಜಾಹೀರಾತಿನಲ್ಲಿ ಕೋಪದಿಂದ ವರ್ತಿಸಿದ್ದು, ಸಾಮಾಜಿಕ ಜಾಲಾತಾಣದಲ್ಲಿ ಕಿಚ್ಚೆಬ್ಬಿಸಿತ್ತು. ಇದಕ್ಕೆ ಕೊಹ್ಲಿ ಸೇರಿದಂತೆ ಹಲವಾರು ಹಾಲಿ-ಮಾಜಿ ಕ್ರಿಕೆಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದರು. ಈ ಕುರಿತು ಸಂದರ್ಶನವೊಂದರಲ್ಲಿ ರಾಹುಲ್​ ದ್ರಾವಿಡ್​ ಈ ಹಿಂದೆ ಆ ರೀತಿ ಕೋಪದಿಂದ ವರ್ತಿಸಿದ್ದ ಬಗ್ಗೆ ಸೆಹ್ವಾಗ್ ಹೇಳಿಕೊಂಡಿದ್ದಾರೆ.

2006ರಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ವೇಳೆ ದ್ರಾವಿಡ್​ ಆಗಷ್ಟೇ ಭಾರತ ತಂಡ ಸೇರಿದ್ದ ಯುವ ವಿಕೆಟ್​ ಕೀಪರ್ ಧೋನಿ ವಿರುದ್ಧ ಒಮ್ಮೆ ತಮ್ಮ ವಿರುದ್ಧವೂ ಕೋಪಗೊಂಡಿದ್ದರು ಎಂದು ಸೆಹ್ವಾಗ್ ನೆನಪಿಸಿಕೊಂಡಿದ್ದಾರೆ.

"ನಾನು ರಾಹುಲ್ ದ್ರಾವಿಡ್​ ಕೋಪಗೊಂಡಿದ್ದನ್ನು ನೋಡಿದ್ದೇನೆ. ನಾವು ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದಾಗ ಧೋನಿ ಹೊಸಬರಾಗಿದ್ದರು. ಪಂದ್ಯವೊಂದರಲ್ಲಿ ಧೋನಿ ಶಾಟ್​ ಮಾಡಲು ಹೋಗಿ ಪಾಯಿಂಟ್​ನಲ್ಲಿ ಕ್ಯಾಚ್​ ನೀಡಿ ವಿಕೆಟ್​ ಒಪ್ಪಿಸಿದ್ದರು. ಅದಕ್ಕೆ ಕೋಪಗೊಂಡ ದ್ರಾವಿಡ್, ನೀವು ಆಡುವ ರೀತಿ ಅದು? ನೀವು ಪಂದ್ಯವನ್ನು ಫಿನಿಶ್ ಮಾಡಬೇಕು" ಎಂದು ಕೋಪದಿಂದ ಹೇಳಿದ್ದರು.

ನಂತರದ ಪಂದ್ಯದಲ್ಲಿ ಧೋನಿ ತುಂಬಾ ಶಾಟ್​ಗಳನ್ನು ಹೊಡೆಯುತ್ತಿರಲಿಲ್ಲ. ನಾನು ಏನಾಗಿದೆ ನಿಮಗೆ ಎಂದು ಅವರ ಬಳಿ ಕೇಳಿದೆ. ಅದಕ್ಕೆ ಧೋನಿ, "ನಾನು ಮತ್ತೆ ದ್ರಾವಿಡ್​ ಕೈಯಲ್ಲಿ ಬೈಸಿಕೊಳ್ಳಲು ಬಯಸುವುದಿಲ್ಲ. ಆಟವನ್ನು ಸದ್ದಿಲ್ಲದೆ ಮುಗಿಸಿ ಹಿಂತಿರುಗೋಣ"​ಎಂದು ಧೋನಿ ನನಗೆ ಹೇಳಿದರೆಂದು ಸೆಹ್ವಾಗ್​ ನೆನಪಿಸಿಕೊಂಡರು.

ಇನ್ನು ಧೋನಿ ಮೇಲಷ್ಟೆ ಅಲ್ಲದೆ, ನನ್ನ ಮೇಲೂ ಒಂದು ಬಾರಿ ಕೋಪಗೊಂಡು ಇಂಗ್ಲಿಷ್​ನಲ್ಲಿ ಬೈಯ್ದಿದ್ದರು. ಆದರೆ ನನಗೆ ಅದರಲ್ಲಿ ಅರ್ಧದಷ್ಟು ಅರ್ಥವಾಗಿರಲಿಲ್ಲ ಎಂದು ಸ್ವಾರಸ್ಯಕರ ಸಂಗತಿಯನ್ನು ಡೆಲ್ಲಿ ಡ್ಯಾಶರ್ ಬಿಚ್ಚಿಟ್ಟಿದ್ದಾರೆ.

ಇದನ್ನು ಓದಿ:ಟ್ರಾಫಿಕ್​ ವೇಳೆ ಉಗ್ರರೂಪ ತಾಳಿದ 'ದಿ ವಾಲ್'​ ದ್ರಾವಿಡ್​.. ರಾಹುಲ್​​ ಕೋಪಕ್ಕೆ ವಿರಾಟ್​​ ಥಂಡಾ!

ABOUT THE AUTHOR

...view details