ಕರ್ನಾಟಕ

karnataka

ETV Bharat / sports

ಧೋನಿ ನಿವೃತ್ತಿಯಿಂದ ಒಂದು ಯುಗದ ಅಂತ್ಯವಾಗಿದೆ: ಎನ್.ಶ್ರೀನಿವಾಸನ್ - ಬಿಸಿಸಿಐ ಮಾಜಿ ಅಧ್ಯಕ್ಷ ಎನ್ ಶ್ರೀನಿವಾಸನ್

ಧೋನಿ ಮತ್ತೆ ಟೀಂ ಇಂಡಿಯಾ ಜರ್ಸಿ ಧರಿಸುವುದಿಲ್ಲ ಎಂಬ ಬಗ್ಗೆ ನನಗೆ ಬೇಸರವಿದೆ. ಆದರೆ, ಅವರು ಸಿಎಸ್​ಕೆ ಜರ್ಸಿ ಧರಿಸುವುದನ್ನು ಮುಂದುವರಿಸಲಿದ್ದಾರೆ ಎಂಬ ಬಗ್ಗೆ ನನಗೆ ಸಂತೋಷವಿದೆ ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ಎನ್ ಶ್ರೀನಿವಾಸನ್ ಹೇಳಿದ್ದಾರೆ

ormer BCCI president N Srinivasan
ಧೋನಿ ಬಗ್ಗೆ ಎನ್ ಶ್ರೀನಿವಾಸನ್ ಹೇಳಿಕೆ

By

Published : Aug 19, 2020, 11:30 AM IST

ಚೆನ್ನೈ:ಎರಡು ವಿಶ್ವಕಪ್ ವಿಜೇತ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸಾಧಿಸಲು ಏನೂ ಉಳಿದಿಲ್ಲ. ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿರುವುದು ಒಂದು ಯುಗದ ಅಂತ್ಯವಾದಂತಿದೆ ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ಎನ್ ಶ್ರೀನಿವಾಸನ್ ಹೇಳಿದ್ದಾರೆ.

ಐಸಿಸಿಯ ಎಲ್ಲ ಟ್ರೋಫಿಗಳನ್ನು ಗೆದ್ದ ಏಕೈಕ ನಾಯಕ ಧೋನಿ ಶನಿವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಮಾಹಿ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅವರ ನಾಯಕತ್ವದಲ್ಲಿ ಮೂರು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದುಕೊಂಡಿದೆ.

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸಾಧನೆ

ಧೋನಿ ಅವರು ನಿವೃತ್ತಿ ಹೊಂದಿದ್ದಾರೆ ಎಂದು ಹೇಳಿದಾಗ, ಅದು ಒಂದು ಯುಗದ ಅಂತ್ಯವಾದಂತಿದೆ. 2007 ರ ಟಿ-20 ವಿಶ್ವಕಪ್ ಗೆಲುವಿಗೆ ಅವರು ಭಾರತದ ನಾಯಕತ್ವ ವಹಿಸಿಕೊಂಡಿದ್ದರು. 2011ರಲ್ಲಿ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದಾರೆ. ಈ ನಡುವೆ ಚಾಂಪಿಯನ್ಸ್ ಟ್ರೋಫಿ ಕೂಡ ಗೆದ್ದಿದ್ದಾರೆ. ಧೋನಿ ಅತ್ಯುತ್ತಮ ನಾಯಕ, ಉತ್ತಮ ವಿಕೆಟ್ ಕೀಪರ್, ಆಕ್ರಮಣಕಾರಿ ಬ್ಯಾಟ್ಸ್‌ಮನ್. ಇಡೀ ತಂಡವನ್ನು ಪ್ರೇರೇಪಿಸಿದ ವ್ಯಕ್ತಿ ಎಂದು ಶ್ರೀನಿವಾಸನ್ ನೆನಪು ಮಾಡಿಕೊಂಡಿದ್ದಾರೆ.

ಅವರು ಸಾಧಿಸಲು ಇನ್ನೇನಿದೆ? ಪ್ರತಿಯೊಬ್ಬ ಕ್ರೀಡಾಪಟುವೂ ಒಂದಲ್ಲ ಒಂದು ಸಮಯದಲ್ಲಿ ತಾನು ನಿವೃತ್ತಿ ಹೊಂದುತ್ತೇನೆ ಎಂದು ತಿಳಿದಿರುತ್ತಾನೆ. ಧೋನಿ ಮತ್ತೆ ಟೀಂ ಇಂಡಿಯಾ ಜರ್ಸಿ ಧರಿಸುವುದಿಲ್ಲ ಎಂಬ ಬಗ್ಗೆ ನನಗೆ ಬೇಸರವಿದೆ. ಆದರೆ, ಅವರು ಸಿಎಸ್​ಕೆ ಜರ್ಸಿ ಧರಿಸುವುದನ್ನು ಮುಂದುವರಿಸಲಿದ್ದಾರೆ ಎಂಬ ಬಗ್ಗೆ ನನಗೆ ಸಂತಸವಿದೆ ಎಂದಿದ್ದಾರೆ.

ಧೋನಿ ಎಷ್ಟು ಸಮಯದವರೆಗೆ ಆಟವಾಡಬಹುದು ಎಂದು ಕೇಳಿದಾಗ, 2008 ರಿಂದ 2014 ರವರೆಗೆ ಸಿಎಸ್‌ಕೆ ಒಡೆತನದ ಇಂಡಿಯಾ ಸಿಮೆಂಟ್ಸ್‌ನ ಮುಖ್ಯಸ್ಥರಾದ ಶ್ರೀನಿವಾಸನ್ ಅವರು ಶಾಶ್ವತವಾಗಿ ಆಡುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ABOUT THE AUTHOR

...view details