ಹೈದರಾಬಾದ್:ವಿಶ್ವಕಪ್ ಟೂರ್ನಿ ಮುಕ್ತಾಯವಾಗುತ್ತಿದ್ದಂತೆ ಟೀಮ್ ಇಂಡಿಯಾದ ಹಿರಿಯ ಆಟಗಾರ ಎಂ.ಎಸ್.ಧೋನಿ ನಿವೃತ್ತಿಯ ಬಗ್ಗೆ ಮಾತುಗಳು ಕೇಳಿಬರುತ್ತಿದ್ದು, ನಿವೃತ್ತಿ ಬಳಿಕ ಬಿಜೆಪಿ ಸೇರುವ ಮೂಲಕ ರಾಜಕೀಯಕ್ಕೆ ಧುಮುಕಲಿದ್ದಾರೆ ಎನ್ನುವ ಸುದ್ದಿಯೂ ಕೇಳಿಬಂದಿದೆ.
ಧೋನಿ ನಿವೃತ್ತಿಯ ಬಳಿಕ ಏನು ಮಾಡಲಿದ್ದಾರೆ ಎನ್ನುವ ಮಾಹಿಯ ಕೋಟ್ಯಂತರ ಅಭಿಮಾನಿಗಳ ಸಹಜ ಕುತೂಹಲಕ್ಕೆ ಧೋನಿಯ ಮ್ಯಾನೇಜರ್ ಅಚ್ಚರಿಯ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಧೋನಿ ವಿದಾಯದ ಬಳಿಕ ಕೋಚ್ ಇಲ್ಲವೇ ಕ್ರಿಕೆಟ್ಗೆ ಸಂಬಂಧಿಸಿದ ಯಾವುದೇ ವಿಚಾರದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎನ್ನುವುದೇ ಅಚ್ಚರಿಯ ಸಂಗತಿ.
ಭಾರತೀಯ ಯೋಧರ 'ಬಲಿದಾನ' ಲೋಗೋವಿರುವ ಗ್ಲೌಸ್ ತೊಟ್ಟ ಧೋನಿ: ದೇಶದೆಲ್ಲೆಡೆ ಶ್ಲಾಘನೆ
ಮಾಹಿ ಮ್ಯಾನೇಜರ್ ಹೇಳುವಂತೆ, ನಿವೃತ್ತಿಯ ಬಳಿಕ ಧೋನಿ ಭಾರತೀಯ ಸೇನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಯೋಜನೆ ಹಾಕಿಕೊಂಡಿದ್ದಾರೆ. ಈಗಾಗಲೇ ಲೆಫ್ಟಿನೆಂಟ್ ಕರ್ನಲ್ ಗೌರವ ಪಡೆದಿರುವ ಧೋನಿ ಸೇನೆಯ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ.
ವಿಶ್ವಕಪ್ ಟೂರ್ನಿಯ ದಕ್ಷಿಣ ಆಪ್ರಿಕಾ ವಿರುದ್ಧದ ಪಂದ್ಯದಲ್ಲಿ ಧೋನಿ ಬಲಿದಾನ್ ಲಾಂಛನವಿರುವ ಗ್ಲೌಸ್ ಧರಿಸಿ ಸೇನೆ ಹಾಗೂ ಯೋಧರಿಗೆ ವಿಶೇಷ ಗೌರವ ಸಲ್ಲಿಸಿದ್ದರು. ಇದು ಧೋನಿ ಭಾರತೀಯ ಸೇನೆ ಮೇಲೆ ಹೊಂದಿರುವ ಅಭಿಮಾನಕ್ಕೆ ತಾಜಾ ಉದಾಹರಣೆ.
ಬಲಿದಾನ್ ಗ್ಲೌಸ್ ಧರಿಸಿರುವ ಎಂ.ಎಸ್.ಧೋನಿ ಲೆಫ್ಟಿನೆಂಟ್ ಕರ್ನಲ್ ಆಗಿರುವ ಧೋನಿ ಇದಕ್ಕಾಗಿ ಆಗ್ರಾದಲ್ಲಿ ವಿಶೇಷ ತರಬೇತಿಯನ್ನೂ ಪಡೆದಿದ್ದಾರೆ. ಈ ತರಬೇತಿ ಸಂದರ್ಭದಲ್ಲಿ ಪ್ಯಾರಾಚೂಟ್ ಜಂಪಿಂಗ್ ಸಹ ನಡೆಸಿ ಯಶ ಕಂಡಿದ್ದಾರೆ.