ಕರ್ನಾಟಕ

karnataka

ETV Bharat / sports

ಪಂದ್ಯ ಕೈಚೆಲ್ಲಿದ್ರೂ ಎಲ್ಲರ ಹೃದಯ ಗೆದ್ದ ಮಾಹಿ! - ಪೃಥ್ವಿ ಶಾ ಸುದ್ದಿ

ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ ಪಂದ್ಯದಲ್ಲಿ ಮಹೇಂದ್ರ ಸಿಂಗ್​ ಧೋನಿ ನಡೆದುಕೊಂಡಿರುವ ನಡೆಗೆ ಇದೀಗ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

CSK vs DC
CSK vs DC

By

Published : Sep 26, 2020, 3:10 PM IST

ದುಬೈ: ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್​ ಮೈದಾನದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡ 44ರನ್​ಗಳ ಸೋಲು ಕಂಡಿದೆ. ಆದರೆ ಮೈದಾನದಲ್ಲಿ ಧೋನಿ ಮಾಡಿರುವ ಕೆಲಸವೊಂದು ಎಲ್ಲರ ಹೃದಯ ಗೆದ್ದಿದೆ.

ಹೃದಯ ಗೆದ್ದ ಮಹೇಂದ್ರ ಸಿಂಗ್​ ಧೋನಿ

ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಆರಂಭಿಕ ಬ್ಯಾಟ್ಸ್​ಮನ್​ ಪೃಥ್ವಿ ಶಾ ಬ್ಯಾಟಿಂಗ್​ ನಡೆಸುತ್ತಿದ್ದ ವೇಳೆ ಅವರ ಕಣ್ಣಲ್ಲಿ ಧೂಳು ಬಿದ್ದಿದೆ. ತಕ್ಷಣವೇ ಅವರ ಬಳಿ ತೆರಳಿದ ಧೋನಿ ಪೃಥ್ವಿ ಶಾಗೆ ಸಹಾಯ ಮಾಡಿದ್ದಾರೆ. 9ನೇ ಓವರ್​​ ವೇಳೆ ಈ ಘಟನೆ ನಡೆದಿದ್ದು, ಮೈದಾನಕ್ಕೆ ಫಿಜಿಯೋ ಪ್ಯಾಟ್ರಿಕ್​​ ಬರುವುದಕ್ಕೂ ಮುಂಚಿತವಾಗಿ ಧೋನಿ ಅವರು ಪೃಥ್ವಿ ಶಾ ಬಳಿ ಹೋಗಿ ಸಹಾಯ ಮಾಡಿದ್ದಾರೆ.

ಧೋನಿ ಅವರ ಈ ಕೆಲಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಿನ್ನೆಯ ಪಂದ್ಯದಲ್ಲಿ ಪೃಥ್ವಿ ಶಾ 43 ಎಸೆತಗಳಲ್ಲಿ ಬರೋಬ್ಬರಿ 64ರನ್​ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ABOUT THE AUTHOR

...view details