ಕರ್ನಾಟಕ

karnataka

ETV Bharat / sports

ಧೋನಿ ಒಬ್ಬ ಚಾಂಪಿಯನ್​ ಆಟಗಾರ, ಆತನ ಸಾಧನೆ ನಿಜಕ್ಕೂ ಶ್ಲಾಘನೀಯ: ಕೂಲ್​ ಕ್ಯಾಪ್ಟನ್​​ ಮೆಚ್ಚಿದ ಪಾಕ್​ ಲೆಜೆಂಡ್​ - ವಿರಾಟ್​ ಕೊಹ್ಲಿ

ಭಾರತ ತಂಡವನ್ನು ಸೌರವ್​ ಗಂಗೂಲಿ ಕಟ್ಟಿ ಬೆಳೆಸಿದರೆ, ಧೋನಿ ಅವರ ಮಾರ್ಗದಲ್ಲಿಯೇ ನಡೆದು ಭಾರತ ತಂಡವನ್ನು ವಿಶ್ವದ ಅತ್ಯುತ್ತಮ ತಂಡವನ್ನಾಗಿಸಿದ್ದರು ಎಂದು ಪಾಕಿಸ್ತಾನದ ಪರ 373 ಟೆಸ್ಟ್​ ವಿಕೆಟ್​ ಹಾಗೂ 416 ಏಕದಿನ ವಿಕೆಟ್​ ಪಡೆದಿರುವ ವಾಕರ್ ಧೋನಿಯ ಸಾಧನೆಯನ್ನು ತಮ್ಮ ಯೂಟ್ಯೂಬ್​ ಚಾನೆಲ್​ ಹಾಡಿಹೊಗಳಿದ್ದಾರೆ.

ಎಂಎಸ್​ ಧೋನಿ
ಎಂಎಸ್​ ಧೋನಿ

By

Published : Jul 6, 2020, 7:48 PM IST

ನವದೆಹಲಿ: ಭಾರತ ತಂಡ ಕಂಡ ಶ್ರೇಷ್ಠ ನಾಯಕರಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವ ಎಂಎಸ್ ಧೋನಿಯನ್ನು ಪಾಕಿಸ್ತಾನದ ಬೌಲಿಂಗ್​ ಲೆಜೆಂಡ್​​ ವಾಕರ್​ ಯೂನಿಸ್ ಚಾಂಪಿಯನ್ ಆಟಗಾರ ಹೊಗಳಿದ್ದಾರೆ.

ಭಾರತ ತಂಡವನ್ನು ಸೌರವ್​ ಗಂಗೂಲಿ ಕಟ್ಟಿ ಬೆಳೆಸಿದರೆ, ಧೋನಿ ಅವರ ಮಾರ್ಗದಲ್ಲಿಯೇ ನಡೆದು ಭಾರತ ತಂಡವನ್ನು ವಿಶ್ವದ ಅತ್ಯುತ್ತಮ ತಂಡವನ್ನಾಗಿಸಿದ್ದರು ಎಂದು ಪಾಕಿಸ್ತಾನದ ಪರ 373 ಟೆಸ್ಟ್​ ವಿಕೆಟ್​ ಹಾಗೂ 416 ಏಕದಿನ ವಿಕೆಟ್​ ಪಡೆದಿರುವ ವಾಕರ್ ಧೋನಿಯ ಸಾಧನೆಯನ್ನು ತಮ್ಮ ಯೂಟ್ಯೂಬ್​ ಚಾನೆಲ್​ ಹಾಡಿಹೊಗಳಿದ್ದಾರೆ.

ಧೋನಿ ಭಾರತ ತಂಡದ ನೇತೃತ್ವ ವಹಿಸಿಕೊಂಡ ಮೇಲೆ ಭಾರತ ತಂಡದ ಮೊದಲ ಬಾರಿಗೆ ಟೆಸ್ಟ್​ ಕ್ರಿಕೆಟ್​ನಲ್ಲಿ ನಂಬರ್​ ಸ್ಥಾನಕ್ಕೇರಿತ್ತು. ಚೊಚ್ಚಲ ಟಿ20 ವಿಶ್ವಕಪ್(2007)​ ಹಾಗೂ 28 ವರ್ಷಗಳ ಬಳಿಕ ಏಕದಿನ ವಿಶ್ವಕ(2011)​ ಹಾಗೂ ಚಾಂಪಿಯನ್ ಟ್ರೋಫಿ(2013)ಯನ್ನು ಭಾರತಕ್ಕೆ ತಂದುಕೊಟ್ಟಿದ್ದಾರೆ.​

ವಾಕರ್​ ಯೂನಿಸ್​

ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ವಾಕರ್​, ಧೋನಿ ಒಬ್ಬ ಅದ್ಭುತ ಕ್ರಿಕೆಟರ್​, ಅವರು ತಂಡವನ್ನು ಮುನ್ನಡೆಸುತ್ತಿದ್ದ ರೀತಿಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಆತನೋರ್ವ ಅದ್ಭುತ ಹಾಗೂ ಬಹುದೊಡ್ಡ ನಾಯಕ. ಸಣ್ಣ ಹಳ್ಳಿಯಿಂದ ಬಂದು ಇಷ್ಟು ದೊಡ್ಡ ಸಾಧನೆ ಮಾಡಿರುವುದು ಪ್ರಶಂಸೆಗೆ ಅರ್ಹವಾಗಿದೆ ಎಂದು ವಾಕರ್​ ಹೇಳಿದ್ದಾರೆ.

ಕೊಹ್ಲಿ ಬಗ್ಗೆ ಕೇಳಿದಾಗ, ಯೂನಿಸ್ “ಟಿ 20 ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್​ನಲ್ಲಿ ಕೊಹ್ಲಿ ಉತ್ತಮರಾಗಿದ್ದಾರೆ. ಏಕದಿನ ಮಾದರಿಗೆ ಅವರು ತುಂಬಾ ಸರಿ ಹೊಂದುತ್ತಾರೆ ಮತ್ತು ಅವರು ಟೆಸ್ಟ್‌ನಲ್ಲಿ ಅದ್ಭುತವಾಗಿದ್ದಾರೆ. ಅವರು ಫಿಟ್‌ನೆಸ್‌ನಲ್ಲಿ ತಮ್ಮದೇ ಆದ ವರ್ಚಸ್ಸನ್ನು ಕಾಪಾಡಿಕೊಂಡಿದ್ದಾರೆ. ಅದೇ ಕಾರಣಕ್ಕೆ ಅವರು ಎಲ್ಲರಿಗೂ ಇಷ್ಟವಾಗುತ್ತಾರೆ. ಅವರು ತಾವೂ ಬೆಸ್ಟ್​ ಎಂದು ಸಾಬೀತು ಪಡಿಸಲು ಸಾಕಷ್ಟು ಶ್ರಮಿಸುತ್ತಾರೆ, ಅವನು ಒಬ್ಬ ಹೋರಾಟಗಾರ, ಆದ್ದರಿಂದಲೇ ನಾವೆಲ್ಲರೂ ಅವನನ್ನು ಇಷ್ಟಪಡುತ್ತೇವೆ ” ಎಂದು ವಕಾರ್​ ಭಾರತೀಯ ನಾಯಕನ ಬಗ್ಗೆ ಗುಣಗಾನ ಮಾಡಿದ್ದಾರೆ.

ABOUT THE AUTHOR

...view details