ಲಂಡನ್: ಕ್ರಿಕೆಟ್ ಬೈಬಲ್ ಎಂದೇ ಕರೆಸಿಕೊಳ್ಳುವ ವಿಸ್ಡನ್ ಪ್ರಕಟಿಸಿದ ದಶಕದ ಏಕದಿನ ತಂಡದಲ್ಲಿ ಭಾರತದ ಮೂವರು ಆಟಗಾರರು ಅವಕಾಶ ಪಡೆದಿದ್ದಾರೆ.
ಕ್ರಿಕೆಟ್ ಇತಿಹಾಸದ ಅತ್ಯಂತ ಹಳೆಯ ಪ್ರಶಸ್ತಿಯಾದ ವಿಸ್ಡನ್ ಕಳೆದು 10 ವರ್ಷಗಳ ಪ್ರದರ್ಶನದ ಮೇರೆಗೆ ತನ್ನ ಸಲಹಾ ಸಮಿತಿಯ ಚರ್ಚೆಯ ಆಧಾರದ ಮೇಲೆ 11 ಆಟಗಾರರ ಹೆಸರನ್ನು ಶನಿವಾರ ಪ್ರಕಟಿಸಿದೆ.
ಭಾರತದ ಏಕದಿನ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಪ್ರಸ್ತುತ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ವಿಸ್ಡನ್ ದಶಕಗಳ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಇನ್ನು, ರೋಹಿತ್ ಜೊತೆ ಆರಂಭಿಕನಾಗಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 4 ರಲ್ಲಿ ಎಬಿ ಡಿ ವಿಲಿಯರ್ಸ್, 5 ಇಂಗ್ಲೆಂಡ್ ತಂಡದ ಜೋಸ್ ಬಟ್ಲರ್ 6ನೇ ಕ್ರಮಾಂಕದಲ್ಲಿ, ಎಂಎಸ್ ಧೋನಿ 7ನೇ ಸ್ಥಾನದಲ್ಲಿದ್ದರೆ ಬಾಂಗ್ಲಾ ಆಲ್ರೌಂಡರ್ ಶಕಿಬ್ ಅಲ್ ಹಸನ್ ಸಹ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.