ಕರ್ನಾಟಕ

karnataka

ETV Bharat / sports

ಸ್ಟಂಪಿಂಗ್​​ ಬಲೆಗೆ ಬಿದ್ದ ಮಾಹಿ... 8 ವರ್ಷದ ಬಳಿಕ ಧೋನಿ ಹೆಸರಿಗೆ ಕಳಪೆ ರೆಕಾರ್ಡ್​! - ಟೀಂ ಇಂಡಿಯಾ

ವಿಕೆಟ್​ ಹಿಂದೆ ಸದಾ ಚುರುಕಾಗಿ ಸ್ಟಂಪಿಂಗ್​ ಮಾಡುವ ಎಂಎಸ್​ ಧೋನಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ತಾವೇ ಸ್ಟಂಪಿಂಗ್​ ಬಲೆಗೆ ಬಿದ್ದು, ನಿರಾಸೆ ಮೂಡಿಸಿದ್ದಾರೆ.

ಧೋನಿ ಸ್ಟಂಪಿಂಗ್​

By

Published : Jun 23, 2019, 5:32 AM IST

ಸೌತಮ್​ಟನ್:ಅಫ್ಘಾನಿಸ್ತಾನದ ವಿರುದ್ಧ ಆಮೆಗತಿಯ ಬ್ಯಾಟಿಂಗ್​ ಪ್ರದರ್ಶನ ನೀಡಿ, ಟೀಕೆಗೊಳಗಾಗಿದ್ದ ಟೀಂ ಇಂಡಿಯಾ ಅನುಭವಿ ಎಂಎಸ್​ ಧೋನಿ ಇದೀಗ ಇದೇ ಪಂದ್ಯದಲ್ಲಿ ಕಳಪೆ ರೆಕಾರ್ಡ್​ ನಿರ್ಮಿಸಿದ್ದಾರೆ.

52 ಎಸೆತಗಳಲ್ಲಿ 28ರನ್​ಗಳಿಕೆ ಮಾಡಿ ಬ್ಯಾಟಿಂಗ್​ ಮಾಡುತ್ತಿದ್ದ ವೇಳೆ ಧೋನಿ ರಶೀದ್​ ಖಾನ್​ ಬೌಲಿಂಗ್​​ನಲ್ಲಿ ಸ್ಟಂಪಿಂಗ್​​ಗೆ ಬಲಿಯಾಗಿದ್ದರು. ಈ ಮೂಲಕ ಕಳೆಪೆ ರೆಕಾರ್ಡ್​ ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ. ಈ ಹಿಂದೆ 2011ರಲ್ಲಿ ಅಂದರೆ ಬರೋಬ್ಬರಿ 8 ವರ್ಷಗಳ ಹಿಂದೆ ವೆಸ್ಟ್​ ಇಂಡೀಸ್​ ವಿರುದ್ಧದ ವಿಶ್ವಕಪ್​ ಪಂದ್ಯದಲ್ಲಿ 22ರನ್​ಗಳಿಸಿದ್ದ ವೇಳೆ ಮಾಹಿ ಸ್ಟಂಪಿಂಗ್​ ಬಲೆಗೆ ಬಿದ್ದಿದ್ದರು. ಇದೇ ವಿಷಯವನ್ನಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಧೋನಿ ವಿರುದ್ಧ ಆಕ್ರೋಶ ಸಹ ವ್ಯಕ್ತಪಡಿಸಿದ್ದಾರೆ.

ಮೈದಾನದಲ್ಲಿ ಮಿಂಚಿನ ಸ್ಟಂಪಿಂಗ್​ ಮಾಡಿ ಎದುರಾಳಿ ಆಟಗಾರರನ್ನು ಅಖಾಡಕ್ಕೆ ಬೀಳಿಸುತ್ತಿದ್ದ ಧೋನಿ ಇದೀಗ ತಾವೇ ಬಲಿಯಾಗಿ ನಿರಾಸೆ ಅನುಭವಿಸಿದ್ದು, ಸ್ವಲ್ಪ ಕಸಿವಿಸಿ ಮಾಡಿದೆ.

ABOUT THE AUTHOR

...view details