ಕರ್ನಾಟಕ

karnataka

ETV Bharat / sports

ವಯಸ್ಸು ಕೇವಲ ಸಂಖ್ಯೆ, ಧೋನಿ ಫಿಟ್​​ ಆಗಿರುವವರೆಗೆ ಟೀಂ ಇಂಡಿಯಾದಲ್ಲಿ ಆಡಲಿ: ಗಂಭೀರ್​! - ಟೀಂ ಇಂಡಿಯಾ

ಮಹೇಂದ್ರ ಸಿಂಗ್​ ಫಿಟ್​ ಆಗಿರುವವರೆಗೂ ಟೀಂ ಇಂಡಿಯಾದಲ್ಲಿ ಆಡಲಿ ಎಂದು ಬಿಜೆಪಿ ಸಂಸದ, ಮಾಜಿ ಬ್ಯಾಟ್ಸ್​ಮನ್​ ಗೌತಮ್​ ಗಂಭೀರ್​ ಅಭಿಪ್ರಾಯಪಟ್ಟಿದ್ದಾರೆ.

MS Dhoni
MS Dhoni

By

Published : Jul 25, 2020, 8:41 PM IST

ನವದೆಹಲಿ:2019ರ ವಿಶ್ವಕಪ್​ ಸೆಮಿಫೈನಲ್​​ನಲ್ಲಿ ಟೀಂ ಇಂಡಿಯಾ ಸೋಲು ಕಂಡ ಬಳಿಕ ಮಹೇಂದ್ರ ಸಿಂಗ್​ ಧೋನಿ ಮೈದಾನಕ್ಕಿಳಿದಿಲ್ಲ. ಆದರೆ ಐಪಿಎಲ್​​ನಲ್ಲಿ ಅಬ್ಬರಿಸಲು ತಯಾರಿ ನಡೆಸ್ತಿದ್ದಾಗಲೇ ಟೂರ್ನಿ ಮುಂದೂಡಿಕೆಯಾದ ಕಾರಣ ಅವರು ತಂಡದಲ್ಲಿ ಮತ್ತೊಮ್ಮೆ ಕಾಣಿಸಿಕೊಳ್ಳುವುದು ಬಹುತೇಕ ಡೌಟ್​ ಎಂಬ ಮಾತು ಎಲ್ಲೆಡೆಯಿಂದ ಗಂಭೀರವಾಗಿ ಕೇಳಿ ಬರಲು ಆರಂಭಿಸಿದ್ದವು. ಇದೀಗ ಇದೇ ವಿಷಯವಾಗಿ ಗೌತಮ್​​ ಗಂಭೀರ್​ ಮಾತನಾಡಿದ್ದಾರೆ.

ಎಂ.ಎಸ್​ ಧೋನಿ

ವಯಸ್ಸು ಕೇವಲ ಒಂದು ಸಂಖ್ಯೆ. ಧೋನಿ ಫಿಟ್​​ ಆಗಿರುವವರೆಗೆ ಮತ್ತು ಕ್ರೀಡೆ ಆನಂದಿಸುವವರೆಗೂ ಕ್ರಿಕೆಟ್​​ ಆಡಬೇಕು ಎಂದು ಗಂಭೀರ್​​ ಅಭಿಪ್ರಾಯಪಟ್ಟಿದ್ದಾರೆ. ಸ್ಟಾರ್​ ಸ್ಪೋರ್ಟ್ಸ್​ ಜೊತೆ ಮಾತನಾಡಿದ ಗಂಭೀರ್​, ಧೋನಿ ಉತ್ತಮ ಫಾರ್ಮ್​​ನಲ್ಲಿದ್ದು, ಆಟ ಆನಂದಿಸುತ್ತಿದ್ದರೆ, ಜತೆಗೆ ದೇಶಕ್ಕಾಗಿ ಪಂದ್ಯ ಗೆಲ್ಲಬಹುದು ಎಂದ ವಿಶ್ವಾಸವಿದ್ದರೆ ನಿವೃತ್ತಿ ಪಡೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದಿದ್ದಾರೆ. ಅವರ ಮೇಲೆ ಹೆಚ್ಚಿನ ಒತ್ತಡ ಬೀರಬಹುದು. ಆದರೆ ಇದು ಅವರ ವೈಯಕ್ತಿಕ ನಿರ್ಧಾರ. ನೀವು ಕ್ರಿಕೆಟ್​ ಆಡಲು ಪ್ರಾರಂಭಿಸಿದ್ದು ವೈಯಕ್ತಿಕ ನಿರ್ಧಾರವಾಗಿದ್ದು, ನಿವೃತ್ತಿ ಘೋಷಣೆ ಮಾಡುವುದು ವೈಯಕ್ತಿಕ ನಿರ್ಧಾರ ಎಂದಿದ್ದಾರೆ.

ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಮುನ್ನಡೆಸಲಿರುವ ಧೋನಿ, ಅದರಲ್ಲಿ ನೀಡುವ ಪ್ರದರ್ಶನದ ಮೇಲೆ ಅವರ ಕಮ್​ಬ್ಯಾಕ್​ ಭವಿಷ್ಯ ಕೂಡ ನಿರ್ಧಾರವಾಗಲಿದೆ. ಸೆಪ್ಟೆಂಬರ್​ 19ರಿಂದ ದುಬೈನಲ್ಲಿ ಮಹಾಟೂರ್ನಿ ಆರಂಭಗೊಳ್ಳಲಿದೆ.

ABOUT THE AUTHOR

...view details