ಹೈದರಾಬಾದ್:2019ರ ವಿಶ್ವಕಪ್ ಕ್ರಿಕೆಟ್ ಟೂರ್ನಿ ಬಳಿಕ ಮತ್ತೆ ಮೈದಾನಕ್ಕಿಳಿಯದ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಜಾಲಿ ಮೂಡ್ನಲ್ಲಿದ್ದಾರೆ. ಮಾಲ್ಡೀವ್ಸ್ ದೇಶದ ರಸ್ತೆಬದಿಯಲ್ಲಿ ಅವರು ಪಾನಿಪೂರಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ರಸ್ತೆ ಬದಿಯ ಅಂಗಡಿಯಲ್ಲಿ ಧೋನಿ ಸಹ ಆಟಗಾರರಾದ ಆರ್.ಪಿ.ಸಿಂಗ್ ಮತ್ತು ಪಿಯೂಶ್ ಚಾವ್ಲಾಗೆ ಪಾನಿಪೂರಿ ಮಾಡಿ ಸರ್ವ್ ಮಾಡುತ್ತಿರುವುದು ವಿಡಿಯೋದಲ್ಲಿದೆ.