ಲಂಡನ್:ವಿಶ್ವಕಪ್ ಟೂರ್ನಿಗಾಗಿ ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಟಗಾರರು ಹೊಸ ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪಾಕ್ ವಿರುದ್ಧ ಗೆದ್ದು ಬೀಗಿದ ನಂತರ ಕೊಹ್ಲಿ, ಧೋನಿ, ಹಾರ್ದಿಕ್ ಹೀಗೆ ತಂಡದ ಸದಸ್ಯರು ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಯಾರದ್ದು ಕೂಲೆಸ್ಟ್ ಹೇರ್‌ಕಟ್ ಹೇಳಿ? ಎಂದು ಬಿಸಿಸಿಐ ಅಭಿಮಾನಿಗಳನ್ನು ಪ್ರಶ್ನೆ ಮಾಡಿದೆ.
ಪಾಕ್ ವಿರುದ್ಧದ ಪಂದ್ಯದ ನಂತರ ಭಾರತ ತಂಡದ ಆಟಗಾರರು ಹೊಸ ಹೇರ್ ಕಟ್ ಮಾಡಿಸಿದ್ದು, ಸಖತ್ ಟ್ರೆಂಡ್ ಆಗುತ್ತಿದೆ. ಸೆಲಬ್ರಿಟಿ ಹೇರ್ ಸ್ಟೈಲಿಸ್ಟ್ ಆಲಿಂ ಹಕಿಂ, ಹಾರ್ದಿಕ್ ಪಾಂಡ್ಯ ಮತ್ತು ಧೋನಿಗೆ ತಾವು ಮಾಡಿರುವ ಸ್ಟೈಲಿಸ್ಟ್ ಲುಕ್ಕನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.