ಕರ್ನಾಟಕ

karnataka

ETV Bharat / sports

ಈ ಬಾರಿ ಧೋನಿ ಕಂಬ್ಯಾಕ್ ಬಹುತೇಕ ಪಕ್ಕಾ..! ಯಾವಾಗ ಗೊತ್ತಾ..? - ಏಷ್ಯಾ ಇಲೆವೆನ್ ಪರ ಧೋನಿ ಆಟ

ಧೋನಿ ಮತ್ತೆ ಮೈದಾನಕ್ಕಿಳಿಯುವ ಸುದ್ದಿ ಅಭಿಮಾನಿಗಳಿಗೆ ಖುಷಿ ತಂದಿದ್ದರೂ ಭಾರತದ ಪರವಾಗಿ ಅಲ್ಲ ಎನ್ನುವುದು ಉಲ್ಲೇಖನೀಯ. ಇದಲ್ಲದೇ ಧೋನಿ ಕಂಬ್ಯಾಕ್​ ಮುಂದಿನ ವರ್ಷ ಮಾರ್ಚ್​ನಲ್ಲಿ ಎನ್ನಲಾಗಿದೆ.

MS Dhoni news
ಧೋನಿ

By

Published : Nov 26, 2019, 12:56 PM IST

ಹೈದರಾಬಾದ್: ಟೀಂ ಇಂಡಿಯಾದ ಹಿರಿಯ ಆಟಗಾರ ಎಂ.ಎಸ್.ಧೋನಿ ಮೈದಾನಕ್ಕಿಳಿಯದೇ ಸುಮಾರು ನಾಲ್ಕು ತಿಂಗಳುಗಳೇ ಕಳೆದಿದೆ. ಧೋನಿ ಕಂಬ್ಯಾಕ್​ ಬಗ್ಗೆ ಆಗಾಗ್ಗೆ ಸುದ್ದಿ ಹರಿದಾಡುತ್ತಲೇ ಇದ್ದು, ಈ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿದೆ.

ಧೋನಿ ಮತ್ತೆ ಮೈದಾನಕ್ಕಿಳಿಯುವ ಸುದ್ದಿ ಅಭಿಮಾನಿಗಳಿಗೆ ಖುಷಿ ತಂದಿದ್ದರೂ ಭಾರತದ ಪರವಾಗಿ ಅಲ್ಲ ಎನ್ನುವುದು ಉಲ್ಲೇಖನೀಯ. ಇದಲ್ಲದೇ ಧೋನಿ ಕಂಬ್ಯಾಕ್​ ಮುಂದಿನ ವರ್ಷ ಮಾರ್ಚ್​ನಲ್ಲಿ ಎನ್ನಲಾಗಿದೆ.

13ನೇ ಆವೃತ್ತಿಯ ಐಪಿಎಲ್​​ಗೂ ಮುನ್ನ ನಡೆಯಲಿರುವ ಏಷ್ಯಾ ಇಲೆವೆನ್ ಹಾಗೂ ವಿಶ್ವ ಇಲೆವೆನ್ ನಡುವಿನ ಎರಡು ಟಿ-20 ಪಂದ್ಯದಲ್ಲಿ ಧೋನಿ ಏಷ್ಯಾ ತಂಡದ ಪರ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನುವ ಮಾತು ಕೇಳಿಬಂದಿದೆ. ಆದರೆ, ಬಿಸಿಬಿ ಮನವಿಗೆ ಬಿಸಿಸಿಐ ಹಾಗೂ ಧೋನಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

2020ರ ಮಾರ್ಚ್​ 18 ಹಾಗೂ 21ರಂದು ಏಷ್ಯಾ ಇಲೆವೆನ್ ಹಾಗೂ ವಿಶ್ವ ಇಲೆವೆನ್ ನಡುವಿನ ಪಂದ್ಯದಲ್ಲಿ ಧೋನಿ ಸೇರಿದಂತೆ ಭಾರತದ ಏಳು ಆಟಗಾರರು ನೀಡಬೇಕು ಎಂದು ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್​(ಬಿಸಿಬಿ) ಬಿಸಿಸಿಐಗೆ ಮನವಿ ಮಾಡಿದೆ.

ಐಸಿಸಿ ಮಾನ್ಯತೆ ಪಡೆದಿರುವ ಈ ಪಂದ್ಯಕ್ಕೆ ಧೋನಿ ಹೊರತಾಗಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್ ಹಾಗೂ ರವೀಂದ್ರ ಜಡೇಜಾ ಅವಶ್ಯಕತೆ ಇದೆ ಎಂದು ಬಿಸಿಬಿ ಹೇಳಿದೆ.

ವಿಶ್ವಕಪ್​ ಸೆಮಿಫೈನಲ್​ ಬಳಿಕ ಧೋನಿ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಕಾಣಿಸಿಕೊಂಡಿಲ್ಲ. ವಿಂಡೀಸ್ ಪ್ರವಾಸ, ದ.ಆಫ್ರಿಕಾ ಹಾಗೂ ಬಾಂಗ್ಲಾ ಸರಣಿಯಿಂದ ಧೋನಿ ದೂರ ಉಳಿದಿದ್ದರು. ಮುಂದಿನ ತಿಂಗಳು ಭಾರತದಲ್ಲಿ ನಡೆಯಲಿರುವ ವಿಂಡೀಸ್​ ಸರಣಿಯಲ್ಲೂ ಧೋನಿ ಆಡುತ್ತಿಲ್ಲ.

ABOUT THE AUTHOR

...view details