ಮುಂಬೈ: 2019ರ ವಿಶ್ವಕಪ್ನಂತರ ಕ್ರಿಕೆಟ್ನಿಂದ ದೂರ ಉಳಿದಿರುವ ಭಾರತ ತಂಡದ ನಾಯಕ ಎಂಎಸ್ ಧೋನಿಯನ್ನು ಬಿಸಿಸಿಐ 2020ರ ವಾರ್ಷಿಕ ಒಪ್ಪಂದದಿಂದ ಕೈಬಿಡಲಾಗಿದೆ. ಈ ಮೂಲಕ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನ ಬಹುತೇಕ ಅಂತ್ಯವಾಗಿದೆ.
ಎಂಎಸ್ ಧೋನಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ನಿಂದ 2014ರಲ್ಲಿ ನಿವೃತ್ತಿ ಹೊಂದಿದ್ದರು. ನಂತರ 2017ರಲ್ಲಿ ಸೀಮಿತ ಓವರ್ಗಳ ನಾಯಕತ್ವದಕ್ಕೆ 2017ರಲ್ಲಿ ರಾಜಿನಾಮೆ ನೀಡಿ ಕೇವಲ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಕಾಣಿಸಿಕೊಂಡಿದ್ದರು. ಇನ್ನು ಇಂಗ್ಲೆಂಡ್ನಲ್ಲಿ ನಡೆದಿದ್ದ ವಿಶ್ವಕಪ್ ಸೆಮಿಫೈನಲ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಸೋಲುಕಂಡ ನಂತರ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ಧೋನಿ ಹೊರಗುಳಿದಿದ್ದರು.
ಧೋನಿ ಟಿ20 ವಿಶ್ವಕಪ್ ಆಡ್ತಾರಾ, ಇಲ್ವಾ ಎನ್ನುವ ಗೊಂದಲದಲ್ಲಿರುವಾಗಲೇ ಬಿಸಿಸಿಐ ತನ್ನ ವಾರ್ಷಿಕ ಒಪ್ಪಂದದ 17 ಆಟಗಾರರ ಪಟ್ಟಿಯಿಂದ ಧೋನಿ ಹೆಸರನ್ನು ತೆಗೆದಿದೆ. ಧೋನಿ ಅಲ್ಲದೆ ಹಿರಿಯ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್, ಅಂಬಾಟಿ ರಾಯುಡು, ಖಲೀಲ್ ಅಹ್ಮದ್ರನ್ನು ಕೂಡ ಬಿಸಿಸಿಐ ಗುತ್ತಿಗೆಯಿಂದ ಹೊರಬಿದ್ದಿದ್ದಾರೆ.