ಕರ್ನಾಟಕ

karnataka

ETV Bharat / sports

ಧೋನಿ ಇನ್ಮುಂದೆ ನಮ್ಮ ಆಯ್ಕೆ ಅಲ್ಲ, ನಿವೃತ್ತಿ ಘೋಷಣೆಗೆ ಕಾಯುತ್ತಿದ್ದೇವೆ: ಪ್ರಸಾದ್​

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್​ ಧೋನಿ ತಮ್ಮ ಅಂತಿಮ ನಿರ್ಧಾರ ಘೋಷಣೆ ಮಾಡಬೇಕಾಗಿದೆ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ತಿಳಿಸಿದ್ದಾರೆ. ಈ ಮೂಲಕ ಮಾಜಿ ನಾಯಕನ ನಿವೃತ್ತಿಗೆ ಆಯ್ಕೆ ಸಮಿತಿ ಹಿಂಟ್​ ನೀಡಿದಂತಿದೆ.

ಎಂಎಸ್​ ಧೋನಿ

By

Published : Jul 15, 2019, 4:45 PM IST

ನವದೆಹಲಿ: ವಿಶ್ವಕಪ್​ ಸೆಮಿಫೈನಲ್​​ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದ ಬಳಿಕ ಅನೇಕ ಟೀಕೆ-ಟಿಪ್ಪಣಿಗಳು ಕೇಳಿ ಬರುತ್ತಿವೆ. ಈ ನಡುವೆ, ವೆಸ್ಟ್​ ಇಂಡೀಸ್​ ಟೂರ್​ಗಾಗಿ ಇಂಡಿಯಾ ತಂಡವನ್ನ ಪ್ರಕಟ ಮಾಡಬೇಕಾಗಿದ್ದು, ಇದೀಗ ಆಯ್ಕೆ ಸಮಿತಿ ಕೆಲವೊಂದು ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿದೆ.

ಸಧ್ಯಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಎಂಎಸ್​ ಧೋನಿ ಕ್ರಿಕೆಟ್​ ಜೀವನದ ಬಗ್ಗೆ ತಮ್ಮ ಅಂತಿಮ ನಿರ್ಧಾರ ಘೋಷಣೆ ಮಾಡಬೇಕಾಗಿದೆ ಎಂಬ ಮಾತನ್ನ ಆಯ್ಕೆ ಸಮಿತಿ ಹೇಳಿದೆ ಎಂದು ತಿಳಿದು ಬಂದಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್​ಕೆ ಪ್ರಸಾದ್​, ನಾನು ಆದಷ್ಟು ಬೇಗ ಎಂಎಸ್​ ಧೋನಿ ಜತೆ ಮಾತನಾಡಿ, ನಿಮ್ಮ ಅಂತಿಮ ನಿರ್ಧಾರ ತಿಳಿಸಿ ಎಂದು ಕೇಳುವೆ ಎಂದಿದ್ದಾರೆ. ಒಂದು ವೇಳೆ ತಂಡದಲ್ಲಿ ಅವರು ಮುಂದುವರಿಯಬೇಕಾದರೆ ಅದ್ಭುತ ಪ್ರದರ್ಶನ ನೀಡುವ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಮುಂದಿನ ಟೂರ್ನಿಗಳಲ್ಲಿ ಅವರು ನಮ್ಮ ಆಯ್ಕೆಯಾಗಿರುವುದಿಲ್ಲ ಎಂದಿದ್ದಾರೆ.

ಎಂಎಸ್​ಕೆ ಪ್ರಸಾದ್​​​

ಅವರ ಸ್ಥಾನಕ್ಕೆ ಆಯ್ಕೆಯಾಗಲು ರಿಷಭ್​ ಪಂತ್​ ಅವರಂತಹ ಯುವ ಪ್ಲೇಯರ್​​ಗಳು​​ ತುದಿಗಾಲಿನಲ್ಲಿ ನಿಂತಿದ್ದಾರೆ. ವಿಶ್ವಕಪ್​​ನಲ್ಲಿ ಅವರು ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡಿಲ್ಲ. ಅವರು ರನ್​ಗಳಿಕೆ ಮಾಡಲು ಹರಸಾಹಸ ಪಡುತ್ತಿದ್ದು, ತಂಡಕ್ಕೆ ಅದರಿಂದ ತೊಂದರೆಯಾಗುತ್ತಿದೆ ಎಂದು ಅವರು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

2014ರಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಏಕಾಏಕಿ ಧೋನಿ ನಿವೃತ್ತಿ ಘೋಷಣೆ ಮಾಡಿದ್ದರು. ಅದಾದ ಬಳಿಕ ನಿಗದಿತ ಓವರ್​ಗಳ ಕ್ರಿಕೆಟ್​​ನಲ್ಲಿ ಮಾತ್ರ ಧೋನಿ ಭಾಗಿಯಾಗುತ್ತಿದ್ದಾರೆ. ಈಗಾಗಲೇ ಧೋನಿ ನಿವೃತ್ತಿ ಬಗ್ಗೆ ಅನೇಕ ಪರ-ವಿರೋಧ ಪ್ರತಿಕ್ರಿಯೆಗಳು ಕೇಳಿ ಬಂದಿವೆ. ಇದಕ್ಕೀಗ ಆಯ್ಕೆ ಸಮಿತಿ ಸಹ ಸೇರಿಕೊಂಡಿದೆ. ಧೋನಿ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಅನ್ನೋದು ಈಗ ಕುತೂಹಲಕ್ಕೆ ಕಾರಣವಾಗಿದೆ.

ABOUT THE AUTHOR

...view details