ಕರ್ನಾಟಕ

karnataka

ETV Bharat / sports

ಧೋನಿ ಫಿಟ್​ನೆಸ್​ ಕಳೆದುಕೊಂಡಿದ್ದಾರೆ, ಯುವ ಆಟಗಾರರಿಗೆ ದಾರಿ ಮಾಡಿಕೊಡಲು ಇದು ಸಕಾಲ: ರೋಜರ್​ ಬಿನ್ನಿ

ಎಂಎಸ್​ ಧೋನಿ 2019ರ ವಿಶ್ವಕಪ್​ ಸೆಮಿಫೈನಲ್​ನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಮ್ಯಾಂಚೆಸ್ಟರ್​ನಲ್ಲಿ ಕೊನೆಯ ಬಾರಿ ಕ್ರಿಕೆಟ್​ನಲ್ಲಿ ಕಾಣಿಸಿಕೊಂಡಿದ್ದರು.

ಎಂಎಸ್​ ಧೋನಿ ನಿವೃತ್ತಿಗೆ ಸಕಾಲ
ಎಂಎಸ್​ ಧೋನಿ ನಿವೃತ್ತಿಗೆ ಸಕಾಲ

By

Published : Aug 2, 2020, 2:46 PM IST

ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ಚಾರ್ಮ್​ ಕಳೆದುಕೊಂಡಿದ್ದಾರೆ ಎಂದು ಭಾರತದ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಆಯ್ಕೆ ಸಮಿತಿ ಅಧ್ಯಕ್ಷ ರೋಜರ್​ ಬಿನ್ನಿ ಅಭಿಪ್ರಾಯಪಟ್ಟಿದ್ದಾರೆ.​

ಎಂಎಸ್​ ಧೋನಿ 2019ರ ವಿಶ್ವಕಪ್​ ಸೆಮಿಫೈನಲ್​ನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಮ್ಯಾಂಚೆಸ್ಟರ್​ನಲ್ಲಿ ಕೊನೆಯ ಬಾರಿ ಕ್ರಿಕೆಟ್​ನಲ್ಲಿ ಕಾಣಿಸಿಕೊಂಡಿದ್ದರು.

ಎಂಎಸ್​ ಧೋನಿ

" ಅವರು(ಧೋನಿ) ತಮ್ಮ ಫಿಟ್​ನೆಸ್​ ಕಳೆದುಕೊಂಡಿದ್ದಾರೆ. ಹಲವಾರು ಯುವ ಆಟಗಾರರು ವ್ಯವಸ್ಥೆಯ ಮೂಲಕ ರಾಷ್ಟ್ರೀಯ ತಂಡಕ್ಕೆ ಬರುತ್ತಿದ್ದಾರೆ. ಧೋನಿ ಯುವ ಪೀಳಿಗೆಯ ಆಟಗಾರರಿಗೆ ತಮ್ಮ ಗ್ಲೌಸ್​ ನೀಡುವುದಕ್ಕೆ ಇದು ಸಕಾಲ. ಆದರೆ ಧೋನಿ ಗತಕಾಲ ಅತ್ಯುತ್ತಮವಾದದ್ದು ಎಂದು ಫೇಸ್​ಬುಕ್​ ಸಂವಾದದ ವೇಳೆ ತಿಳಿಸಿದ್ದಾರೆ.

ಎಂಎಸ್​ ಧೋನಿ

"ಅವರನ್ನು(ಧೋನಿ) ಕಳೆದ ಕೆಲವು ವರ್ಷಗಳಿಂದ ನೋಡುತ್ತಿದ್ದೇನೆ. ಅವರು ಈ ಹಿಂದೆ ತಮ್ಮ ಅತ್ಯುತ್ತಮ ಕ್ರಿಕೆಟ್​ಅನ್ನು ಕಳೆದಿದ್ದಾರೆ. ಅವರು ತಮ್ಮ ಚಾಣಾಕ್ಷತನದಿಂದ ಹಲವಾರು ಪಂದ್ಯಗಳನ್ನು ಗೆದ್ದಕೊಟ್ಟಿದ್ದಾರೆ" ಎಂದು ಅವರು ತಿಳಿಸಿದ್ದಾರೆ.

ಸದ್ಯಕ್ಕೆ ಧೋನಿ 13ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಚೆನ್ನೈ ಮುನ್ನಡೆಸಸಲು ಸಿದ್ದರಿದ್ದರು. ಈಮೂಲಕ ಉತ್ತಮ ಪ್ರದರ್ಶನ ನೀಡಿ ಟಿ20 ವಿಶ್ವಕಪ್​ನಲ್ಲಿ ಅವಕಾಶ ಪಡೆಯುವ ಆಸೆ ಹೊಂದಿದ್ದರು. ಆದರೆ ಕೋವಿಡ್​ 19 ಭೀತಿಯಿಂದ ವಿಶ್ವಕಪ್​ ಮುಂದೂಡಲ್ಪಟ್ಟಿದೆ. ಆದರೂ ಐಪಿಎಲ್​ನಲ್ಲಿ ಅವರು ನೀಡುವ ಪ್ರದರ್ಶನದ ಮೇಲೆ ಅವರ ಅಂತಾರಾಷ್ಟ್ರೀಯ ಕ್ರಿಕೆಟ್​ ಜೀವನ ನಿಂತಿದೆ.

ABOUT THE AUTHOR

...view details