ಕರ್ನಾಟಕ

karnataka

ETV Bharat / sports

2011ರ ವಿಶ್ವಕಪ್​ವರೆಗೂ ಧೋನಿ ನನ್ನ ಮೇಲೆ ಸಾಕಷ್ಟು ವಿಶ್ವಾಸ ಇಟ್ಟಿದ್ದರು: ಯುವರಾಜ್​ ಸಿಂಗ್​

ಧೋನಿ ಬಗ್ಗೆ ಮಾತನಾಡುತ್ತಾ, "ಎಂಎಸ್ 2011ರವರೆಗೂ ನನ್ನ ಮೇಲೆ ಸಾಕಷ್ಟು ನಂಬಿಕೆಯಿಟ್ಟಿದ್ದರು. ಆದರೆ ನಾನು ಕ್ಯಾನ್ಸರ್​ನಿಂದ ಹೊರಬಂದ ಬಳಿಕ ಅವರಲ್ಲಿದ್ದ ನಂಬಿಕೆ ಬದಲಾಯಿತು" ಎಂದರು.

ಎಂಎಸ್​ ಧೋನಿ
ಎಂಎಸ್​ ಧೋನಿ

By

Published : Aug 4, 2020, 4:23 PM IST

ನವದೆಹಲಿ: ಭಾರತ ತಂಡದ ಮಾಜಿ ಆಲ್​ರೌಂಡರ್​ ಯುವರಾಜ್​ ಸಿಂಗ್ ಅವರಿಗೆ ತಾವು​ 2019ರ ವಿಶ್ವಕಪ್​ಗೆ ಆಯ್ಕೆಯಾಗುವುದಿಲ್ಲ ಅನ್ನೋದು ಅರಿವಿಗೆ ಬಂದಿದ್ದು ಹೇಗೆ ಎಂಬುದನ್ನು ನೆನೆಪಿಸಿಕೊಂಡಿದ್ದಾರೆ.

ಯುವರಾಜ್​ ಸಿಂಗ್​ 2017ರಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ಕೊನೇಯ ಬಾರಿ ಕ್ರೀಡಾಂಗಣಕ್ಕೆ ಇಳಿದಿದ್ದರು. ಆ ವರ್ಷ ಯುವಿ ತಂಡಕ್ಕೆ​ ಕಮ್​ಬ್ಯಾಕ್​ ಮಾಡಿ 11 ಪಂದ್ಯಗಳಲ್ಲಿ 372 ರನ್ ​ಗಳಿಸಿದ್ದರು. ಟೂರ್ನಿಯಲ್ಲಿ ಇಂಗ್ಲೆಂಡ್​ ವಿರುದ್ಧ ಅವರು 150 ರನ್​ ಸಿಡಿಸಿದ್ದರು.

"ನಾನು ಭಾರತ ತಂಡಕ್ಕೆ ಮರಳಿ ಬಂದಾಗ ಕೊಹ್ಲಿ ಸಾಕಷ್ಟು ಬೆಂಬಲ ನೀಡಿದ್ದರು. ಆದರೆ, 2019ರ ವಿಶ್ವಕಪ್​ ತಂಡದಲ್ಲಿ ನನಗೆ ಅವಕಾಶವಿಲ್ಲ ಎಂಬುದನ್ನು ಧೋನಿ ಅರ್ಥವಾಗುವಂತೆ ಮಾಡಿದರು. 2019ರ ವಿಶ್ವಕಪ್‌ ಯೋಜನೆಯಲ್ಲಿ ಆಯ್ಕೆದಾರರು ನಿನ್ನನ್ನು ಪರಿಗಣಿಸುವುದಿಲ್ಲ ಎಂದು ತಿಳಿಸಿಕೊಟ್ಟಿದ್ದರು. ಈ ಮೂಲಕ ನನ್ನೊಳಗೆ ಸ್ಪಷ್ಟತೆ ಮೂಡುವಂತೆ ಮಾಡಿದ್ದೇ ಅವರು. ಅವರು ನನಗೆ ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡಿದ್ದರು" ಎಂದು ಯುವಿರಾಜ್​ ಸಿಂಗ್​ ಹೇಳಿದ್ದಾರೆ.

ಮುಂದುವರೆದು ಧೋನಿ ಬಗ್ಗೆ ಮಾತನಾಡುತ್ತಾ, "ಎಂಎಸ್ 2011ರವರೆಗೂ ನನ್ನ ಮೇಲೆ ಸಾಕಷ್ಟು ನಂಬಿಕೆಯಿಟ್ಟಿದ್ದರು. ಆದರೆ ನಾನು ಕ್ಯಾನ್ಸರ್​ನಿಂದ ಹೊರಬಂದ ಬಳಿಕ ಅವರಲ್ಲಿದ್ದ ನಂಬಿಕೆ ಬದಲಾಯಿತು" ಎಂದರು.

"ನೀನು ನನ್ನ ಪ್ರಮುಖ ಆಟಗಾರ" ಎಂದು ಅವರು ಹೇಳುತ್ತಿದ್ದರು. ಆದರೆ ಕ್ಯಾನ್ಸರ್​ ಚಿಕಿತ್ಸೆ ಮುಗಿಸಿ ಬಂದ ನಂತರ ಆಟದಲ್ಲಿ ಬದಲಾವಣೆ ಕಂಡುಬಂದಿತು. ಅಷ್ಟರಲ್ಲಿ ತಂಡದಲ್ಲೂ ಸಾಕಷ್ಟು ಬದಲಾವಣೆಯಾಗಿತ್ತು. ಹಾಗಾಗಿ, 2015ರ ವಿಶ್ವಕಪ್​ನಲ್ಲಿ ಅವಕಾಶ ಸಿಗದಿರುವುದಕ್ಕೆ ಯಾವುದೇ ಆಕ್ಷೇಪಣೆ ಇಲ್ಲ. ನಾಯಕನಾಗಿ ಕೆಲವೊಮ್ಮೆ ಎಲ್ಲವನ್ನೂ ಸಮರ್ಥಿಸಲು ಸಾಧ್ಯವಿಲ್ಲ ಅನ್ನೋದನ್ನು ನಾನು ಅರ್ಥಮಾಡಿಕೊಂಡಿದ್ದೇನೆ ಎಂದು ಯುವರಾಜ್​ ಸಿಂಗ್​ ತಿಳಿಸಿದ್ದಾರೆ.

ABOUT THE AUTHOR

...view details