ಅಬುಧಾಬಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ ಸಿಎಸ್ಕೆ ಪರ ಐಪಿಎಲ್ನಲ್ಲಿ 4000 ರನ್ ಪೂರ್ಣಗೊಳಿಸಿದ್ದಾರೆ.
ಎಂಎಸ್ ಧೋನಿ ಈ ಪಂದ್ಯದಲ್ಲಿ 12ನೇ ಓವರ್ನ 6 ರನ್ಗಳಿಸುತ್ತಿದ್ದಂತೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಿ 4000 ರನ್ ಪೂರೈಸಿದರು. 2016 ಹಾಗೂ2017ರ ಆವೃತ್ತಿಗಳನ್ನು ಹೊರೆತುಪಡಿಸಿ 2008 ರಿಂದ 2020ರವರೆಗೆ ಸಿಎಸ್ಕೆ ಪರ ಧೋನಿ 170 ಪಂದ್ಯಗಳನ್ನಾಡಿದ್ದಾರೆ. ಉಳಿದ 30 ಪಂದ್ಯಗಳನ್ನ ರೈಸಿಂಗ್ ಪುಣೆ ಸೂಪರ್ ಜೇಂಟ್ಸ್ ಪರ ಆಡಿದ್ದಾರೆ.
ಇಂದಿನ ಪಂದ್ಯ ಆರಂಭಗೊಳ್ಳುತ್ತಿದ್ದಂತೆ ಐಪಿಎಲ್ನಲ್ಲಿ 200ನೇ ಪಂದ್ಯವನ್ನಾಡುತ್ತಿರುವ ಮೊದಲ ಕ್ರಿಕೆಟರ್ ಎಂಬ ಖ್ಯಾತಿಗೆ ಪಾತ್ರರಾಗಿರುವ ಧೋನಿ ಒಟ್ಟಾರೆ ಲೀಗ್ನಲ್ಲಿ 23 ಅರ್ಧಶತಕಗಳ ಸಹಿತ 4596 ರನ್ಗಳಿಸಿದ್ದಾರೆ. ಧೋನಿಯನ್ನು ಹೊರೆತುಪಡಿಸಿದರೆ, ಸಿಎಸ್ಕೆ ತಂಡದ ಪರ ಸುರೇಶ್ ರೈನಾ 4527 ರನ್ಗಳಿಸಿದ್ದಾರೆ. 3ನೇ ಸ್ಥಾನದಲ್ಲಿ ಫಾಫ್ ಡು ಪ್ಲೆಸಿಸ್ 2004 ರನ್ಗಳಿಸಿದ್ದಾರೆ.
ಐಪಿಎಲ್ನಲ್ಲಿ ಧೋನಿ ಹೊರೆತುಪಡಿಸಿದರೆ, ಆರ್ಸಿಬಿ ತಂಡದ ಎಂಎಸ್ ಧೋನಿ, ಸಿಎಸ್ಕೆ ತಂಡದ ರೈನಾ, ಮುಂಬೈ ತಂಡದ ರೋಹಿತ್ ಶರ್ಮಾ, ಆರ್ಸಿಬಿ ತಂಡದ ಎಬಿ ಡಿ ವಿಲಿಯರ್ಸ್ ತಮ್ಮ ಫ್ರಾಂಚೈಸಿ ಪರ 4000 ರನ್ಗಳಿಸಿದ್ದಾರೆ.