ರಾಂಚಿ:ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಸದ್ಯ ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆ ಜತೆ ಲೆಪ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದು, ಇದರ ಮಧ್ಯೆ ಅವರ ಮನೆಗೆ ಐಷಾರಾಮಿ ಕಾರು ಆಗಮನವಾಗಿದೆ.
ಧೋನಿ ಗ್ಯಾರೇಜ್ಗೆ ಬಂತು ಐಷಾರಾಮಿ ಕಾರು... ನಿಮ್ಮ ಆಗಮನಕ್ಕಾಗಿ ಕಾಯುತ್ತಿದೆ ಎಂದು ಸಾಕ್ಷಿ ಟ್ವೀಟ್! - ಧೋನಿ ಗ್ಯಾರೇಜ್
ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಧೋನಿ ಗ್ಯಾರೇಜ್ಗೆ ಐಷಾರಾಮಿ ಕಾರು ಆಗಮನವಾಗಿದ್ದು, ನಿಮ್ಮ ಬರುವಿಕೆಗಾಗಿ ಕಾಯುತ್ತಿದೆ ಎಂದು ಸಾಕ್ಷಿ ಟ್ವೀಟ್ ಮಾಡಿದ್ದಾರೆ.
ಮೊದಲಿನಿಂದಲೂ ಕಾರು, ಬೈಕ್ ಕ್ರೇಜ್ ಹೊಂದಿರುವ ಧೋನಿ ರಾಂಚಿಯಲ್ಲಿ ಖುದ್ದಾಗಿ ಗ್ಯಾರೇಜ್ ಹೊಂದಿದ್ದು, ಅಲ್ಲಿ ನೂರಾರು ವಿವಿಧ ಬೈಕ್ ಹಾಗೂ ಹತ್ತಾರು ಕಾರುಗಳಿವೆ. ಇದರ ಮಧ್ಯೆ ಇದೀಗ ಅತಿ ನೂತನ ಜೀಪ್ ಗ್ರ್ಯಾಂಡ್ ಚೆರೋಕಿ ಐಷಾರಾಮಿ ವಾಹನ ಧೋನಿ ಮನೆಗೆ ಬಂದಿದೆ. ಈ ಕಾರು ದೇಶದಲ್ಲಿ ಇನ್ನು ರಿಲೀಸ್ ಆಗಿಲ್ಲ. ಇದರ ಮಧ್ಯೆ ಧೋನಿ ಮನೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದೆ. ಭಾರತದಲ್ಲಿ ಇದರ ಬೆಲೆ ಸುಮಾರು 80 ರಿಂದ 90 ಲಕ್ಷ ಎಂದು ಹೇಳಲಾಗುತ್ತಿದೆ.
ಕೆಂಪು ಬಣ್ಣದಿಂದ ಕೂಡಿರುವ ಕಾರು ಇದಾಗಿದ್ದು, ಇದರ ಪೋಟೋ ಕ್ಲಿಕ್ ಮಾಡಿ ಸಾಕ್ಷಿ, ನಿಮ್ಮ ಆಗಮನಕ್ಕಾಗಿ ಈ ವಾಹನ ಕಾಯುತ್ತಿದೆ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ಈಗಾಗಲೇ ಧೋನಿ ಗ್ಯಾರೇಜ್ನಲ್ಲಿ ಐಕಾನಿಕ್ ರಾಜದೂತ್ ಬೈಕ್, ಅತ್ಯಂತ ದುಬಾರಿ ಹಮ್ಮರ್ ಆಫ್ ರೋಡ್ ಗಾಡಿ ಸಹ ಇದೆ. ಇದರ ಜತೆಗೆ ಹಮ್ಮರ್ ಎಚ್2,ಫೆರಾರಿ 599 ಜಿಟಿಒ, ಜಿಎಂಸಿ ಸಿಯೆರಾ, ಕವಾಸಕಿ ನಿಂಜಾ ಎಚ್2, ಕಾನ್ಫೆಡೇರೇಟ್ ಹೆಲ್‌ಕ್ಯಾಟ್, ಬಿಎಸ್‌ಎ, ಸುಜುುಕಿ ಹಯಾಬುಜಗಳು ಧೋನಿ ತಮ್ಮ ಗ್ಯಾರೇಜ್ನಲ್ಲಿ ಸಂಗ್ರಹವಾಗಿವೆ.