ಹೈದರಾಬಾದ್:ವಿಂಡೀಸ್ ಪ್ರವಾಸದಿಂದ ಹಿಂದೆ ಸರಿದಿದ್ದ ಟೀಮ್ ಇಂಡಿಯಾದ ಹಿರಿಯ ಆಟಗಾರ ಎಂ.ಎಸ್.ಧೋನಿ ಭಾರತೀಯ ಸೇನೆಯ ಪ್ಯಾರಾಚೂಟ್ ರೆಜಿಮೆಂಟ್ನಲ್ಲಿ ತರಬೇತಿ ಪಡೆಯುವ ಇಚ್ಛೆ ವ್ಯಕ್ತಪಡಿಸಿದ್ದರು.
ಸದ್ಯ ಲಭ್ಯವಾಗಿರುವ ಮಾಹಿತಿಯಂತೆ ಪ್ಯಾರಾಚೂಟ್ ರೆಜಿಮೆಂಟ್ನಲ್ಲಿ ತರಬೇತಿಗಾಗಿ ಧೋನಿ ಸಲ್ಲಿಸಿರುವ ಮನವಿಯನ್ನು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅಂಗೀಕಾರ ಮಾಡಿದ್ದಾರೆ.
ಸೇನೆಯ ಉನ್ನತ ಮೂಲದ ಹೇಳಿಕೆಯಂತೆ, ಧೋನಿಯ ಮನವಿಯನ್ನು ಅಂಗೀಕಾರ ಮಾಡಲಾಗಿದೆ. ಧೋನಿ ಪ್ಯಾರಾಚೂಟ್ ರೆಜಿಮೆಂಟ್ ತರಬೇತಿಯ ಒಂದಷ್ಟು ಭಾಗ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಲಿದೆ.
ಧೋನಿಗೆ ತರಬೇತಿಗೆ ಅವಕಾಶ ನೀಡಲಾಗಿದ್ದರೂ ಯಾವುದೇ ಕಾರ್ಯಾಚರಣೆಯಲ್ಲಿ ಭಾಗವಹಿಸುವ ಅವಕಾಶ ಇರುವುದಿಲ್ಲ ಎಂದು ಸೇನೆ ಸ್ಪಷ್ಟನೆ ನೀಡಿದೆ.
ಸೇನಾ ಸಮವಸ್ತ್ರದಲ್ಲಿ ಎಂ.ಎಸ್.ಧೋನಿ
2011ರಲ್ಲಿ ಧೋನಿಗೆ ಭಾರತೀಯ ಲೆಫ್ಟಿನೆಂಟ್ ಕರ್ನಲ್ ಗೌರವ ನೀಡಿತ್ತು. ಇದಾದ ಬಳಿಕ ಧೋನಿ ಒಂದಷ್ಟು ದಿನ ತರಬೇತಿಯನ್ನು ಪಡೆದಿದ್ದರು.