ಜಫ್ನಾ(ಶ್ರೀಲಂಕಾ):ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮಂಗಳವಾರ 39ನೇ ಹುಟ್ಟುಹಬ್ಬವನ್ನಾಚರಿಸಿಕೊಂಡಿದ್ದರು.
ಭಾರತ ಕ್ರಿಕೆಟ್ ತಂಡದ ಯಶಸ್ವಿ ನಾಯಕರಲ್ಲಿ ಒಬ್ಬರಾದ ಧೋನಿ ಭಾರತಕ್ಕೆ ಮೂರು ಐಸಿಸಿ ಟ್ರೋಫಿ ತಂದುಕೊಟ್ಟಿರುವ ಏಕೈಕ ನಾಯಕ. ತಮ್ಮ ತಾಳ್ಮೆಯ ಮನೋಭಾವದಿಂದ ಭಾರತದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲೂ ಕೂಡ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದು, ನಿನ್ನೆ ವಿಶೇಷವಾಗಿ ಧೋನಿ ಹುಟ್ಟಹಬ್ಬವನ್ನಾಚಿರಿಸಿದ್ದಾರೆ.
ಭಾರತದ ಕೆಲವೆಡೆ ಅಭಿಮಾನಿಗಳು ರಕ್ತದಾನದ ಮಾಡುವ ಮೂಲಕ ಧೋನಿ ಜನ್ಮದಿನವನ್ನಾಚರಿಸಿದ್ದರು. ಆಶ್ಚರ್ಯವೆಂದ್ರೆ ಶ್ರೀಲಂಕಾದ ನಾರ್ಥರ್ನ್ ಪ್ರಾಂತ್ಯದ ರಾಜಧಾನಿಯಾದ ಜಫ್ನಾದಲ್ಲಿ ರಕ್ತದಾನ, ಕಿವುಡು ಮತ್ತು ಕುರುಡ ಮಕ್ಕಳಿಗೆ ಆಹಾರ ವ್ಯವಸ್ಥೆ ಮಾಡುವ ಮೂಲಕ ಧೋನಿ ಹುಟ್ಟುಹಬ್ಬ ಆಚರಿಸಿದ್ದಾರೆ.
ಅಲ್ಲದೆ ಧೋನಿ ಅಭಿಮಾನಿಗಳ ಬಳಗ 16,500 ರೂಪಾಯಿಯನ್ನು ನಫೀಲ್ಡ್ ಕಿವುಡ ಮತ್ತು ಕುರುಡ ಮಕ್ಕಳ ಶಾಲೆಗೆ ದೇಣಿಗೆ ನೀಡಿದೆ ಎಂದು ಶ್ರೀಲಂಕಾದ ನ್ಯೂಸ್ಫೈರ್ ಮಾಧ್ಯಮ ವರದಿ ಮಾಡಿದೆ. ಈ ವಿಡಿಯೋವನ್ನು ಪತ್ರಕರ್ತ ಸಾಮ್ರಾಟ್ ಚಕ್ರಬೋರ್ತಿ ಎಂಬುವರು ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದು ವಿಡಿಯೋ ವೈರಲ್ ಆಗುತ್ತಿದೆ.