ಕರ್ನಾಟಕ

karnataka

ETV Bharat / sports

ಮೈದಾನದಲ್ಲಿ ಧೋನಿ ಹೇಗೆ ಅಷ್ಟು ಕೂಲ್ ಆಗಿರ್ತಾರೆ? ಅವ್ರೇ ಹೇಳ್ತಾರೆ ಕೇಳಿ - ಎಂ ಎಸ್ ಧೋನಿ

ವಿಶ್ವಕಪ್ ಟೂರ್ನಿ ಬಳಿಕ ಮೈದಾನದಿಂದ ಕೊಂಚ ದೂರ ಸರಿದಿರುವ ಧೋನಿ ತಮ್ಮ ಈ ತಾಳ್ಮೆ ಹಾಗೂ ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸುವ ಬಗ್ಗೆ ಮಾತನಾಡಿದ್ದಾರೆ.

ಎಂ.ಎಸ್​.ಧೋನಿ

By

Published : Oct 17, 2019, 11:21 AM IST

ಹೈದರಾಬಾದ್:ಎಲ್ಲ ಸಮಯದಲ್ಲೂ ಸದಾ ಶಾಂತಚಿತ್ತರಾಗಿ ಪರಿಸ್ಥಿತಿ ನಿಭಾಯಿಸುವ ಎಂ.ಎಸ್​.ಧೋನಿ ಇದೇ ಕಾರಣಕ್ಕೆ ಕೂಲ್ ಕ್ಯಾಪ್ಟನ್ ಎಂದೇ ಕರೆಸಿಕೊಂಡಿದ್ದರು. ಧೋನಿಯ ಈ ತಾಳ್ಮೆಯೇ ಹಲವರಿಗೆ ಸ್ಫೂರ್ತಿ ಹಾಗೂ ಇಷ್ಟ.

ವಿಶ್ವಕಪ್ ಟೂರ್ನಿ ಬಳಿಕ ಮೈದಾನದಿಂದ ಕೊಂಚ ದೂರ ಸರಿದಿರುವ ಧೋನಿ ತಮ್ಮ ಈ ತಾಳ್ಮೆ ಹಾಗೂ ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸುವ ಬಗ್ಗೆ ಮಾತನಾಡಿದ್ದಾರೆ.

ಎಂ.ಎಸ್​.ಧೋನಿ

ಋಣಾತ್ಮಕ ವಿಚಾರಗಳಿಂದ ಸಾಕಷ್ಟು ದೂರ ಉಳಿಯುವ ಧೋನಿ, ಎಲ್ಲ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿಯೂ ಧೋನಿ ಸಮಚಿತ್ತರು. ಈ ವಿಚಾರದಲ್ಲಿ ನಾನು ಉಳಿದೆಲ್ಲರಿಗಿಂತ ಭಿನ್ನ ಎಂದು ಸ್ವತಃ ಧೋನಿಯೇ ಹೇಳಿದ್ದಾರೆ.

ಸಮಸ್ಯೆಗಳಿಂದ ಎದುರಾದಾಗ ಭಯದಿಂದ ಇರುವ ಬದಲು ಅದಕ್ಕೆ ಸೂಕ್ತ ಪರಿಹಾರ ಹುಡುಕುವ ಪ್ರಯತ್ನ ಮಾಡುತ್ತೇನೆ. ಭಾವನೆಗಳ ತೋರ್ಪಡಿಕೆಗಿಂತ ಆ ಸಮಯಕ್ಕೆ ಏನು ಬೇಕೋ ಅದನ್ನು ಮಾಡುವುದು ಪ್ರಾಮುಖ್ಯತೆ ಪಡೆಯುತ್ತದೆ ಎಂದು ಧೋನಿ ಹೇಳುತ್ತಾರೆ.

ಎಂ.ಎಸ್​.ಧೋನಿ

38 ವರ್ಷದ ಟೀಂ ಇಂಡಿಯಾ ಹಿರಿಯ ಆಟಗಾರ ಧೋನಿ ನಿವೃತ್ತಿ ಬಗ್ಗೆ ಮಾಜಿ ಆಟಗಾರರು ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದು, ಧೋನಿ ಮಾತ್ರ ಈ ಬಗ್ಗೆ ಮೌನ ವಹಿಸಿದ್ದಾರೆ. ವಿಶ್ವಕಪ್​ ಸೆಮಿಫೈನಲ್ ಬಳಿಕ ಧೋನಿ ಮೈದಾನಕ್ಕಿಳಿದಿಲ್ಲ.

ಎಂ.ಎಸ್​.ಧೋನಿ

ABOUT THE AUTHOR

...view details