ಹೈದರಾಬಾದ್:ಭಾರತಕ್ಕೆ ಎರಡು ವಿಶ್ವಕಪ್ ತಂದುಕೊಟ್ಟ ಕೀರ್ತಿಗಳಿಸಿರುವ ಮಹೇಂದ್ರ ಸಿಂಗ್ ಧೋನಿ ಕೊನೆಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಘೋಷಣೆ ಮಾಡಿದ್ದಾರೆ. 2019ರ ಐಸಿಸಿ ಏಕದಿನ ವಿಶ್ವಕಪ್ ಸೆಮಿಫೈನಲ್ ಬಳಿಕ ತಂಡದಿಂದ ದೂರ ಉಳಿದಿದ್ದ ಮಾಹಿ, ಸುದೀರ್ಘ ವಿಶ್ರಾಂತಿ ಬಳಿಕ ಮತ್ತೊಮ್ಮೆ ತಂಡಕ್ಕೆ ಕಮ್ಬ್ಯಾಕ್ ಮಾಡ್ತಾರೆ ಎಂಬ ಚರ್ಚೆಗೆ ನಿವೃತ್ತಿ ಘೋಷಣೆ ಮಾಡುವ ಮೂಲಕ ತೆರೆ ಎಳೆದಿದ್ದಾರೆ.
ಧೋನಿ ನಾಯಕತ್ವದ ಗುಣ ಪುನರಾವರ್ತನೆ ಕಷ್ಟ: ಒಂದು ಯುಗದ ಅಂತ್ಯ ಎಂದ ಗಂಗೂಲಿ!
2004ರಲ್ಲಿ ಬಾಂಗ್ಲಾದೇಶದ ವಿರುದ್ಧದ ಏಕದಿನ ಕ್ರಿಕೆಟ್ ಮೂಲಕ ಟೀಂ ಇಂಡಿಯಾ ತಂಡಕ್ಕೆ ಪದಾರ್ಪಣೆ ಮಾಡಿದ್ದ ಮಹೇಂದ್ರ ಸಿಂಗ್ ಧೋನಿ ತಾವು ಆಡಿದ ಮೊದಲ ಪಂದ್ಯದಲ್ಲೇ ರನೌಟ್ ಆಗಿದ್ದರು. ಅದೇ ರೀತಿ 2019ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ರನೌಟ್ ಆಗಿದ್ದರು. ಈ ವೇಳೆ ಅವರು 72 ಎಸೆತಗಳಲ್ಲಿ 50ರನ್ಗಳಿಕೆ ಮಾಡಿದ್ದರು. ಈ ವೇಳೆ ತಾವು ರನೌಟ್ ಆಗಿದ್ದಕ್ಕಾಗಿ ಧೋನಿ ಪಶ್ಚಾತ್ತಾಪ ಪಟ್ಟಿದ್ದರು.
ಟೀಂ ಇಂಡಿಯಾ ಪರ 90 ಟೆಸ್ಟ್, 350 ಏಕದಿನ ಹಾಗೂ 98 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳನ್ನಾಡಿರುವ ಧೋನಿ ಕ್ರಮವಾಗಿ 4,876(ಟೆಸ್ಟ್), 10,773(ಏಕದಿನ) ಹಾಗೂ 1,617(ಟಿ-20)ರನ್ಗಳಿಕೆ ಮಾಡಿದ್ದಾರೆ. ಜತೆಗೆ ಟೆಸ್ಟ್ನಲ್ಲಿ 256 ಕ್ಯಾಚ್, 38 ಸ್ಟಂಪಿಂಗ್, ಏಕದಿನದಲ್ಲಿ 321 ಕ್ಯಾಚ್, 123 ಸ್ಟಂಪಿಂಗ್ ಹಾಗೂ ಟಿ-20 ಕ್ರಿಕೆಟ್ನಲ್ಲಿ 57 ಕ್ಯಾಚ್ ಮತ್ತು 34 ಸ್ಟಂಪಿಂಗ್ ಮಾಡಿದ್ದಾರೆ.