ಕರ್ನಾಟಕ

karnataka

ETV Bharat / sports

ಕಿಂಗ್ಸ್​ ಇಲೆವೆನ್ ಪಂಜಾಬ್​ ವಿರುದ್ಧ ಕ್ಯಾಚ್​ಗಳ ಶತಕ ಪೂರೈಸಿದ ಎಂಎಸ್​ ಧೋನಿ - ipl news

ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ವಿಕೆಟ್​ ಕೀಪರ್​ ಹಾಗೂ ನಾಯಕನಾಗಿರುವ ದಿನೇಶ್ ಕಾರ್ತಿಕ್​ ಐಪಿಎಲ್​ನಲ್ಲಿ 100 ಕ್ಯಾಚ್​ ಪಡೆದ ಮೊದಲ ಬೌಲರ್​ ಎನಿಸಿಕೊಂಡಿದ್ದರು.

ಕ್ಯಾಚ್​ಗಳ ಶತಕ ಪೂರೈಸಿದ ಎಂಎಸ್​ ಧೋನಿ
ಕ್ಯಾಚ್​ಗಳ ಶತಕ ಪೂರೈಸಿದ ಎಂಎಸ್​ ಧೋನಿ

By

Published : Oct 4, 2020, 11:04 PM IST

ದುಬೈ: ಚೆನ್ನೈ ಸೂಪರ್​ ತಂಡದ ನಾಯಕ ಎಂಎಸ್ ಧೋನಿ ಭಾನುವಾರ ಕಿಂಗ್ಸ್​ ಇಲೆವೆನ್​ ಪಂಜಾಬ್ ವಿರುದ್ಧ ಮತ್ತೊಂದು ಮಹತ್ವದ ಮೈಲುಗಲ್ಲನ್ನು ತಲುಪಿದ್ದಾರೆ. ಐಪಿಎಲ್​ನಲ್ಲಿ 100 ಕ್ಯಾಚ್​ ಪಡೆದ ಎರಡನೇ ಕೀಪರ್ ಎಂಬ ಶ್ರೇಯಕ್ಕೆ ಪಾತ್ರರಾದರು.

ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ವಿಕೆಟ್​ ಕೀಪರ್​ ಹಾಗೂ ನಾಯಕನಾಗಿರುವ ದಿನೇಶ್ ಕಾರ್ತಿಕ್​ ಐಪಿಎಲ್​ನಲ್ಲಿ 100 ಕ್ಯಾಚ್​ ಪಡೆದ ಮೊದಲ ಬೌಲರ್​ ಎನಿಸಿಕೊಂಡಿದ್ದರು.

ಭಾನುವಾರದ ಪಂದ್ಯದಲ್ಲಿ ಧೋನಿ ಪಂಜಾಬ್ ತಂಡದ ನಾಯಕ ಕೆಎಲ್​ ರಾಹುಲ್​ ವಿಕೆಟ್​ ಪಡೆಯುವ ಮೂಲಕ ಕ್ಯಾಚ್​ನಲ್ಲಿ ಶತಕ ಬಾರಿಸಿದರು. ಕಾರ್ತಿಕ್​ 103 ಕ್ಯಾಚ್​ ಪಡೆದು ಹೆಚ್ಚು ಕ್ಯಾಚ್​ ಪಡೆದ ಸಾಲಿನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಆದರೆ ಐಪಿಎಲ್​ನಲ್ಲಿ ಹೆಚ್ಚು ಬಲಿ ಪಡೆದ ದಾಖಲೆ ಧೋನಿ ಹೆಸರಿನಲ್ಲಿಯೇ ಇದೆ. ಧೋನಿ ಐಪಿಎಲ್​ನಲ್ಲಿ 139 ಬ್ಯಾಟ್ಸ್​ಮನ್​ಗಳನ್ನು ಪೆವಿಲಿಯನ್​ಗಟ್ಟಿದ್ದರೆ, ಕಾರ್ತಿಕ್​ 133 ಬ್ಯಾಟ್ಸ್​ಮನ್​ಗಳ ಬಲಿ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ.

ABOUT THE AUTHOR

...view details