ಕರ್ನಾಟಕ

karnataka

ಭಾರತ - ಇಂಗ್ಲೆಂಡ್ ಟೆಸ್ಟ್​ಗೆ ಮೊಟೆರಾ ಸಜ್ಜು: ಪಂದ್ಯ ವೀಕ್ಷಣೆಗೆ ಪಿಎಂ ಆಗಮನ ಸಾಧ್ಯತೆ

By

Published : Feb 1, 2021, 10:09 PM IST

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯವು ಮೊಟೆರಾ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಪಂದ್ಯ ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಸಾಧ್ಯತೆಯಿದೆ.

Motera stadium
ಮೊಟೆರಾ ಕ್ರೀಡಾಂಗಣ

ಅಹಮದಾಬಾದ್:ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯವು ಮೊಟೆರಾ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಮೊಟೆರಾ ಕ್ರೀಡಾಂಗಣದಲ್ಲಿ ದುರಸ್ತಿ ಕಾರ್ಯ ಮುಗಿಸಿ, 6 ವರ್ಷಗಳ ಬಳಿಕ ಮತ್ತೆ ಕ್ರಿಕೆಟ್​ ಆಡಲು ಮೈದಾನ ಸಜ್ಜಾಗಿದೆ. ಇನ್ನು ಮೊಟೆರಾದಲ್ಲಿ ನಡೆಯಲಿರುವ ಪಂದ್ಯ ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಸಾಧ್ಯತೆಯಿದೆ. ಈ ಹಿಂದೆ ಬಿಸಿಸಿಐ ಪ್ರಧಾನಿ ಆಹ್ವಾನಿಸಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು.

ಕೊರೊನಾ ಬಳಿ ಭಾರತದಲ್ಲಿ ನಡೆಯುತ್ತಿರುವ ಮೊದಲ ಪಂದ್ಯ ಇದಾಗಿದೆ. ಇಂಗ್ಲೆಂಡ್ ವಿರುದ್ಧದ ನಾಲ್ಕು ಪಂದ್ಯಗಳ ಸರಣಿಯ ಮೊದಲ ಎರಡು ಟೆಸ್ಟ್ ಪಂದ್ಯಗಳು ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದ್ದು, ಉಳಿದೆರಡು ಪಂದ್ಯ ವಿಶ್ವದ ಅತಿದೊಡ್ಡ ಕ್ರೀಡಾಂಗಣವಾದ ಮೊಟೆರಾದಲ್ಲಿ ನಡೆಯಲಿದೆ.

ಮೊದಲ ಟೆಸ್ಟ್​ ವೀಕ್ಷಣೆಗೆ ಅಭಿಮಾನಿಗಳ ಪ್ರವೇಶ ಸಂಪೂರ್ಣ ರದ್ದು ಮಾಡಲಾಗಿದ್ದು, ಎರಡನೇ ಟೆಸ್ಟ್​ನಲ್ಲಿ ಶೇ. 50ರಷ್ಟು ಮಂದಿ ಪ್ರವೇಶ ಪಡೆಯಬಹುದು. ಇನ್ನು ಮೊಟೆರಾದಲ್ಲಿ ನಡೆಯುವ ಪಂದ್ಯಕ್ಕೆ ಶೇ.50 ರಷ್ಟು ಪ್ರೇಕ್ಷಕರು ಪ್ರವೇಶ ಪಡೆಯುವ ಸಾಧ್ಯತೆಯಿದೆ.

ABOUT THE AUTHOR

...view details